ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಕ್ಕದೆ ಪೋಪೆಯೇತಕೆ ಮಾಂಗಿರಿರಂಗ ಪ ಸಿಕ್ಕದೆ ಪೋಪೆಯೇಕೆ ಠಕ್ಕುಮಾಡುವೆಯೇಕೆ ಅಕ್ಕರೆಯಿಂದ ನಾ ಸಕ್ಕರೆ ಕೊಡುವೆನೆ ಅ.ಪ ಚಿಣ್ಣರ ಕೂಡಾಡಿ ಕಣ್ಣುಸನ್ನೆಯ ಮಾಡಿ ಸಣ್ಣಕೊಳಲಪಾಡಿ ಬೆಣ್ಣೆಗಳ್ಳ ರಂಗಾ1 ಪಿಡಿದು ಬರುವೆನೆಂದು ಕಡಲಿನೊಳಗೆ ಮಿಂದು ಪೊಡವಿದೇವಿಯ ತಂದು ಕಡುನೊಂದುದಾಯ್ತಿನ್ನು 2 ತರಳ ಪ್ರಹ್ಲಾದನು ಕರೆಯುತಲಿಹನೇ ನಿನ್ನ ಕರದೆ ಬೆಣ್ಣೆಯನಿಟ್ಟು ಕರುಣಾಳು ಬಾರೆನಲ 3 ಕಡುನುಡಿಗಳ ಕೇಳಿ ಪಿಡಿಯಲಾರೆನೇ ನನ್ನ ಕಡೆಗಣಿಸಲಿ ಬೇಡ ಅಡಿಗೆರಗುವೆ ರಂಗಾ 4 ಮಾಂಗಿರಿಮೇಗಿಹ ಶೃಂಗಾರ ದೇವಯ್ಯ ರಂಗ ನೀನೆನ್ನಂತರಂಗ ದೇವದೇವಾ 5 ತಾಮರಸಾಕ್ಷನೆ ಕಾಮಿತ ದಾತನೆ ರಾಮದಾಸಾರ್ಚಿತ ಭೀಮವಿಕ್ರಮ ರಂಗಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್