ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲಕ ಕಂಡೆನು ನಿನ್ನ | ಬಾಲಕ ಪ. ಬಾಲಕ ಕಂಡೆನು ನಿನ್ನಾ | ಮುದ್ದು ಬಾಲ ತೊಡಿಗೆ ಇಟ್ಟರನ್ನಾ | ಆಹ ಕಾಲ ಕಾಲದ ಪೂಜೆ ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ. ವಸುದೇವ ಕಂದ ಗೋವಿಂದ ವಸುಧಿ ಭಾರವನಿಳುಹೆ ಬಂದಾ | ಪುಟ್ಟ ಹಸುಗಳ ಕಾಯ್ವ ಮುಕುಂದ | ರ ಕ್ಕಸರನೆಲ್ಲರ ತಾನೆ ಕೊಂದಾ | ಆಹಾ ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು ಶಶಿಮುಖಿಯರಮನಕಸಮ ಸಂತಸವಿತ್ತು 1 ವಿಶ್ವವ್ಯಾಪಕನಾದ ಬಾಲಾ | ಸರ್ವ ವಿಶ್ವ ತನ್ನೊಳಗಿಟ್ಟ ಬಾಲಾ | ಸ ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ ಈಶ್ವರ ಸುರ ಪರಿಪಾಲಾ | ಆಹ ವಿಶ್ವ ಪ್ರದೀಪಕ ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2 ಸಿರಿಗರಿಯದ ಗುಣನೀತಾ | ಮತ್ತೆ ಸಿರಿಯ ತನ್ನೊಳಗಿಟ್ಟಾತಾ | ಆ ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ ಸಿರಿಯಿಂದ ಮಾಡಿಸುವಾತಾ | ಆಹ ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3 ಪ್ರಳಯಾಂಬುವಟಪತ್ರ ಶಯನಾ | ಥಳ ಥಳಿಸುವ ಪದತಳ ಅರುಣಾ | ವರ್ಣ ಎಳೆಗೂಸಿನಂತಿಹ ಚಿಣ್ಣಾ | ಆರು ತಿಳಿಯಲಾಗದ ಗುಣಪೂರ್ಣ | ಆಹ ನಳಿನಭವನ ಪೊಕ್ಕಳಲಿ ಪಡದು ತನ್ನ ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4 ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್ ಸುತರ ಪಡೆದಂಥ ಸಂಪನ್ನಾ | ವೇದ ತತಿಗೆ ಶಿಲ್ಕದ ಸುಗುಣಾರ್ಣ | ಅ ದ್ಭುತ ರೂಪ ಜಗದೇಕ ಘನ್ನಾ | ಆಹ ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ ಜತನದಿ ಜಗಜೀವತತಿಗಳ ಕಾಯೂವ 5 ಸುರತತಿಗಳನೆ ನಿರ್ಮೀಸಿ | ಅವರೊಳ್ ತರತಮ ಭೇದ ಕಲ್ಪಿಸಿ | ತನ್ನ ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ ಗರಸನ್ನ ಮಾಡಿ ನೀ ನಿಲಿಸೀ | ಆಹ ಪರಮೇಷ್ಟಿ ಪದವಿತ್ತು ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6 ಸರಿ ಇಲ್ಲ ವಾಯುಗೆಂದೆನಿಸೀ | ತತ್ವ ಸುರರಿಗಧೀಶನೆಂದೆನಿಸೀ | ತನ್ನ ಶರಣರ ಕಾಯ್ವನೆಂದೆನಿಸೀ | ಅವ ನಿರುವಲ್ಲಿ ತಾ ಸಿದ್ಧನೆನಿಸೀ | ಆಹ ತರಣಿಜಗೊಲಿಯುತ್ತ ಕುರುಕುಲವಳಿಯುತ್ತ ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7 ತ್ರಿವಿಧ ಜೀವರಗತಿದಾತಾ | ನಮ್ಮ ಪವನನಂತರ್ಯಾಮಿ ಈತಾ | ಪದ್ಮ ಭವ ರುದ್ರ ತ್ರಿದಶರ ಪ್ರೀತಾ | ಭಕ್ತ ರವಸರಕೊದಗುವ ದಾತಾ ಪವನಜ ಸತಿಭಕ್ತ ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8 ಶೋಣಿತ ನೀಲ ಕಾಯಾ | ದೇವ ಅಕ್ಲೇಶ ಆನಂದಕಾಯಾ | ಯುಗಕೆ ತಕ್ಕಂಥ ವರ್ಣಸುಕಾರ್ಯ | ಮಾಳ್ಪ ರಕ್ಕಸಾಂತಕ ಕವಿಗೇಯಾ | ಆಹ ಪೊಕ್ಕಳ ನಾಡಿಯೊಳ್ ಸಿಕ್ಕುವ e್ಞÁನಿಗೆ ದಕ್ಕುವ ಸುರರಿಗೆ ಠಕ್ಕಿಪ ದನುಜರ 6 ಸಚ್ಚಿದಾನಂದ ಸ್ವರೂಪ | ಭಕ್ತ ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ ಭವ ಕೂಪಾ | ದಲ್ಲಿ ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10 ವಲ್ಲನು ಸಿರಿಸತಿ ಪೂಜೆ | ಮತ್ತೆ ವಲ್ಲನು ಸುರ ಸ್ತುತಿ ಗೋಜೆ | ತಾ ನೊಲ್ಲನು ಮುನಿಗಳ ಓಜೆ | ಹರಿ ವಲ್ಲನು ಋಷಿಯಾಗವ್ಯಾಜೆ | ಆಹ ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11 ಅಂಬುದಿಶಯನ ಶ್ರೀಕಾಂತಾ | ಸರ್ವ ಬಿಂಬನಾಗಿಹ ಮಹಶಾಂತ | ತನ್ನ ನಂಬಿದ ಸುಜನರ ಅಂತಾ | ರಂಗ ಅಂಬುಜ ಮಧ್ಯ ಪೊಳೆವಂಥಾ | ಆಹ ಭಂಜನ ಪಶ್ಚಿ- ಮಾಂಬುಧಿ ತಡಿವಾಸ ಶಂಬರಾರೀಪಿತ12 ಸ್ವಪ್ನದಿ ಗೋಪಿಕರ ತಂದು | ಎನ ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ ದಪ್ಪಾರಭರಣವದೆಂದೂ | ನಾನು ವಪ್ಪದಿರಲು ಎತ್ತೆನೆಂದೂ | ಆಹಾ ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13 ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ ನಾಮಕ ಶಿರಿವರ ಕರುಣಾ | ಪೂರ್ಣ ಹೇಮಾಂಡ ಬಹಿರಾವರ್ಣ | ವ್ಯಾಪ್ತ ಮಾ ಮನೋಹರ ಪ್ರಣವ ವರ್ಣಾ | ಆಹ ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14 ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ ಅದುಭುತ ರೂಪ ತೋರಿಸೀ | ಸ- ನ್ಮುದವಿತ್ತು ಕುರುಕುಲವರಸಿ | ಆಹ ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15 ನಿತ್ಯನೂತನ ದೇವ ದೇವಾ | ಸರ್ವ ಶಕ್ತ ನಿನ್ಹೊರತಾರು ಕಾವಾ | ಎನ್ನ ಚಿತ್ತದಿ ನೆಲಸು ಪ್ರಭಾವಾ | ಸರ್ವ ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16 ಚರಣತಳಾರುಣ ಪ್ರಭೆಯೂ | ಹತ್ತು ನಖ ಪಂಕ್ತಿಯ ಪರಿಯೂ | ಗೆಜ್ಜೆ ಸರಪಳಿ ಪಾಡಗರುಳಿಯೂ | ಮೇಲೆ ಜರೆಯ ಪೀತಾಂಬರ ನೆರಿಗೆಯೂ | ಆಹ ವರ ಜಾನುಜಂಘೆಯು ಕರಿಸೊಂಡಲಿನ ತೊಡೆ ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17 ಸರಸಿಜೋದ್ಭವ ವರಸೂತ್ರ | ಮೇಲೆ ಮೆರೆವಂಥ ಸಿರಿಯ ಮಂದೀರ | ಹೃದಯ ವರರತ್ನ ಪದಕದ ಹಾರ | ಸ್ವಚ್ಛ ದರ ವರ್ಣ ಪೊಲ್ವ ಕಂಧಾರಾ | ಆಹ ಕರದ್ವಯ ಕಂಕಣುಂಗುರ ತೋಳ ಬಾಪುರಿ ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18 ಮೊಸರರ್ಧ ಕಡದಿರೆ ಜನನೀ | ಬಂದು ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ- ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19 ಪದ್ಮ ಮುಖದ ಕಾಂತಿ ಸೊಂಪೂ | ಅಧರ ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ ಕುಂಡಲ ಕೆಂಪೂ | ಆಹ ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20 ಕಮಲಸಂಭವ ವಾಯುಚಲನಾ | ಹುಬ್ಬು ವಿಮಲ ಫಣೆ ತಿಲುಕದಹನಾ | ಮೇಲೆ ಭ್ರಮರ ಕುಂತಳ ಕೇಶ ಚನ್ನಾ | ವಜ್ರ ಅಮಿತ ಸುವರ್ಣ ಮುತ್ತೀನಾ | ಆಹ ಕಮನೀಯ ಮಕುಟವು ಸುಮನಸರೊಂದಿತ ಕಮಲ ತುಳಸಿಹಾರ ವಿಮಲಾಂಗ ಸುಂದರ 21 ಅಂತರ ಬಹಿರ ದಿವ್ಯಾಪ್ತಾ | ಸರ್ವ ರಂತರ ಬಲ್ಲ ನೀ ಗುಪ್ತಾ | ಜೀವ ರಂತರಂಗದಿ ವಾಸ ಸುಪ್ತಾ | ದಿಗ ಳಂತಾನೆ ನಡೆಸುವ ಆತ್ತಾ | ಆಹ ಸಂತತ ಚಿಂತಿಪರಂತರಂಗದಿ ನಿಂತು ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22 ಎಚ್ಚತ್ತು ಇರುವ ಸರ್ವದಾ | ಕಾಲ ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ ನುಚ್ವಾಸದುತ್ಪತ್ತಿಯಾದ | ಬಾಯ ಪಾದ | ಆಹ ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23 ಗೊಲ್ಲರೊಡನಾಟ ಬಯಸೀ | ವಸ್ತು ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ ಚಲ್ವ ಕುದುರೆ ಏರಿ ಚರಿಸೀ | ತಾ ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24 ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ ರೂಪ ಸಜ್ಜನ ಪರಿಪಾಲಾ | ಗುರು ನಿತ್ಯ ನಿರ್ಮಾಲಾ | ದೇವಾ ಗೋಪಾಲಕೃಷ್ಣವಿಠ್ಠಾಲ | ಆಹ ಪರಿ ನಿಂತು ಮ ಕೊಂಡ ಶ್ರೀಪತಿ ಮರುತೇಶ 25
--------------
ಅಂಬಾಬಾಯಿ