ಮಾಡಿ ಸಾಧುಸಂಗ ನೋಡಿ ಅಂತರಂಗ ಧ್ರುವ
ಕೇಳಿ ಎನ್ನಮಾತ ಹೇಳುವೆ ನಾ ಹಿತ
ಅಳಿಯದಾರ್ಜಿತ ತ್ವರಿತ 1
ಪಥ ಬ್ಯಾಗ ಗೂಢ ರಾಜಯೋಗ
ಮಡಬ್ಯಾಡಿ ಸೋಂಗ ನೋಡಿ ಬ್ರಹ್ಮಭೋಗ2
ಠಕ್ಕಠವಳಿ ಅಲ್ಲ ಸುಖಸಾಧು ಬಲ್ಲ
ಮಿಕ್ಕವರಿಗೆಲ್ಲ ಸಿಕ್ಕುದು ತಾನಲ್ಲ 3
ಒಮ್ಮನ ಮಾಡಿ ನಿಮ್ಮೊಳಗ ನೋಡಿ
ಬ್ರಹ್ಮರಸ ಕೂಡಿ ಸುಮ್ಮನೆ ಸೂರ್ಯಾಡಿ 4
ಇಹ್ಯಪರ ಪೂರ್ಣದಯಾಳು ನಿಧಾನ
ಮಹಿಪತಿ ಪ್ರಾಣ ಗುರು ಶ್ರೀಚರಣ 5