ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು