ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಣ್ಣ ಸವಿಯ ಬಾರದೇ ಪ ಹಣ್ಣನ್ನು ತಿಂದರೆ ಕೇಶವನೊಲಿಯುವಾ ಚನ್ನಕೇಶವ ಸ್ವಾಮಿ ಬಿಡದೆ ಪಾಲಿಸುವಾ ಅ.ಪ. ಪ್ರೀತಿಯೆನ್ನುವಂಥ ಬೀಜವನ್ನೇ ಬಿತ್ತಿ ಭೂತ ದಯೆಯೆಂಬುವ ವೃಕ್ಷವ ಬೆಳೆಸೀ ಆತುರದಲ್ಲಿ ಪರೋಪಕಾರವೆಂಬ ನೀತಿಯ ನೀರನ್ನು ನೇಮದೊಳೆರೆದೂ 1 ಅನುದಿನ ದಾನಧರ್ಮಗಳ ಟೊಂಗೆಗಳೇರಿ ತನುಮನ ಧನದಿಂದ ದೈನ್ಯರ ಸಲಹಿ ಘನತರ ಸ್ವಾರ್ಥ ತ್ಯಾಗವುಯೆಂಬ ಪರ್ಣವ ನೆನೆದು ಕೃತಜ್ಞತೆ ಕುಸುಮವ ಪಡೆದೂ 2 ವರತರ ದೇವಾಂಶ ಗುಣದಿಂದ ಬೆಳೆದಿರ್ಪ ಹರಿಭಕ್ತಿಯೆನ್ನುವ ಫಲವನ್ನೇ ಕೊಯ್ದು ಸರಸದಿ ಕೀರ್ತನೆ ಭಜನೆ ಸೂತ್ರಗಳಿಂದ ಪರಮ ಭಕ್ತೀಯೆಂಬ ಹಣ್ಣನು ತಿಂದೂ 3 ಧರೆಯಲ್ಲಿ ಸಿಗುವಂಥ ಹಣ್ಣನು ಸವಿದರೆ ನಿರುತ ತೃಪ್ತಿಯು ಆಗಲಾರದು ದೇವಾ ಅಮೃತ ಹರುಷದಿ ತಿನ್ನಲು ಘನಮುಕ್ತಿ ದಿಟವು 4
--------------
ಕರ್ಕಿ ಕೇಶವದಾಸ