ಎಂಥ ಕೆಲಸಮಾಡಿ ಬಂದನೇ ಗೋಪ್ಯಮ್ಮ ನಿನ ಮಗ||
ಎಂಥ ಕೆಲಸ ಮಾಡಿ ಬಂದ ಕಾಂತ ಮಯೊಳಿಲ್ಲದಾಗ
ಚಿಂತೆಲೇಶವಿಲ್ಲದೆ ಬಂದು ಚಿದುಗ ಬುದ್ಧಿತೋರಿ ಆಗ ಪ
ಮಲಗಿ ಇರಲು |
ಹೊಡಕೊಂಡು ಯಾರು ಹೋದರಂದನೆ
ಈ ಮಾತು ಕೇಳಿ ಗಂಡ ಆಕಳ ಹುಡುಕ ಹೋದನೆ
ಸುತ್ತಿ ಗಂಡನೆಂದು ಕೂಡೆಂದೆನ್ನ 1
ಬಟ್ಟೆ ಬಿಡಿಸಿ ಭಯವಿಲ್ಲವೆಂದನಮ್ಮ
ಮಾನವುಳ್ಳ ಸ್ತ್ರೀಯರ ಸಂಗ ಸ್ನಾನಕ್ಕಾಗಿ ನದಿಗೆ ಹೋಗಿ
ಸ್ನಾನಮಾಡೊ ನೀರೊಳು ನಿಂತೆನೆ
ಆವೇಳೇ ಬಂದು ಕಾಣದ್ಹಾಗೆ ಶೀರಿ ತೆಗೆದನೆ
ನಾನು ಕಾಣದೆ ಉಡಲು ಹೋದೆ
ಕಾನನದೊಳು ಕೈಯ್ಯ ಪಿಡಿದು ಏನು ಮಾನ ಕಳದನಮ್ಮಾ 2
ಹೆಂಗಳೆರು ಎಲ್ಲ ಕೂಡಿ ಗಂಗಾಕ್ರೀಡೆನಾಡೋ ವೇಳೆ
ಅಂಗವಸ್ತ್ರÀವನೆಲ್ಲ ತೆಗೆದನೆ
ತೆಗೆದು ಮರದ ಟೊಂಗೆನೇರಿ ಕಾಡುತಿಹನೆ
ಭಂಗ ಅಂಗವ್ರತವೆಲ್ಲ ಕೆಡಿಸಿರಂಗ ' ಹೆನ್ನೆ ವಿಠಲ’ ಶ್ರೀರಂಗಧಾಮನೆನೆಯಿರೆ 3