ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನೋ ನಿನ್ನ ಚರಣ ಕಮಲವ ಸೊಂಡಿಲಿಂದಿಹ ಗಣಪತಿ ಕೊಡು ವರವ ಪ ಮಣಿ ಕುಂಡಲ ಭೂಷಾ ಉಂಡಲಿಗೆ ಚಕ್ಕುಲಿಯೊಳಗೆ ಸಂತೋಷ ಚಂಡ ಪ್ರಬಲನಲ ಅಖಂಡ ಪ್ರಕಾಶ ಭೂ ಮಂಡಲದೊಳು ನಿನ್ನ ಕೀರ್ತಿ ವಿಶೇಷ 1 ಚಂದನಾಗರು ಧೂಪ ದೀಪಾವಳಿಯಿಂದಾ ನಂದದಿಂದಲಿ ಪೂಜಿಪೆ ಭಕ್ತಯಿಂದ ನಂದಿವಾಹನನಿಗೆ ಮೋಹದ ಕಂದ ಮಂದಮತಿಯ ಬಿಡಿಸೈಯ್ಯ ನೀ ಮುದದಿಂದ 2 ಚಿಕ್ಕ ಮೂಷಿಕವೇರಿ ಗಕ್ಕಾನೆ ಬರುವೆ ಅಕ್ಕರಿಂದಲಿ ಭಕ್ತರೆಲ್ಲಾರ ಪೊರೆವೆ ಮಿಕ್ಕ ಮಾತುಗಳೇನೋ ಪೊಗಳಲೆನ್ನಳವೇ ಇಕ್ಕೇರಿಯೊಳು ಟೆಂಕಸಾಲೆಯೊಳಿರುವೆ 3
--------------
ಕವಿ ಪರಮದೇವದಾಸರು
ಬಂದು ನೊಂದೆನು ನಾನು | ಮುಂದೆ ರಕ್ಷಿಸು ನೀನು | ಎಂದೆಂದೂ ತಾರದಂತೆ | ತಂದೆ ಸದ್ಗುರು ನಿನ್ನ ಹೊಂದಿದೆನು | ಪರಮಾನಂದವನು ಪಾಲಿಸೀಗ ಬೇಗ ಪ ಎನ್ನವಗುಣದೋಷಗಳ | ಅರಸುವದ್ಯಾಕೆ | ನಿನ್ನ ಪಾದವ ನಂಬಿದೆ || ಚಿನ್ನಕ್ಹತ್ತಿದ ಟೆಂಕ ಭಿನ್ನವಾಗುವದುಂಟೆ | ಇನ್ನು ಬ್ಯಾರೆನ್ನಬಹುದೆ ಇಹುದೆ1 ಉರಿಯ ಮುಟ್ಟಿ ಕಾಷ್ಠವನು | ಮರಳಿ ತರಬಹುದೇ | ಪರಮ ತತ್ತ್ವವ ತಿಳಿಯದೆ || ಹರಿವ ಶರಧಿಗೆ ಜಲವು ಹಲವು ಕೂಡಿದರದರ | ವಿವರದಲಿ ನೋಡಲರಿದೇ ಜರಿದೆ 2 ಚಿತ್ತ ಕಮಲವ ನಿನ್ನ ಪಾದಕರ್ಪಿಸಿದೆನೋ | ಸತ್ಯದಲಿ ಮತ್ತೆ ಪಾತಕವು ಯಾರಿಗೆ | ಕರ್ತೃ ಭವತಾರಕನು ಕೊಟ್ಟ ಕುದುರೆಯ ಮೇಲೆ | ಎಷ್ಟೊಂದು ಹೇರಲಿಂದು ತಂದು 3
--------------
ಭಾವತರಕರು