ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜ ಕರುಣದಿ ನೋಡಯ್ಯ ಪ ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆ ಕರೆಕರೆ ಮಾಡದೆ ಚರಣವ ತೋರಿಸು ಅ.ಪ. ಭವ ಮೋಚಕನ ಬಿಟ್ಟು ಭವಣೇಗಳನೆಪಟ್ಟು ನಾ ಒದ್ದಾಡುವೆ ಇಂದು ಅವನಿಯ ಜನರೊಳು ಅವಗುಣ ಪ್ರತಿಮೆಯ ತವಕದಿ ಪೊರೆಯದೆ ಜವನಡಿಕಳಿಸೊದೇ 1 ಅನುದಿನದೀ ನಾನು ಅನುಮಾನದಿಂದಲಿ ನೊಂದೆ ಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆ ತನುಮನ ನಿನ್ನಡಿ ಅರ್ಪಿಸಿನಂಬಿದೆ ದಿನದಿನ ದಯದಿಂ ನಿನ್ನವರೊಳು ಸೇರಿಸೊ 2 ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬರೆದೆ ಕಾಮಜನಕನ ಮರೆತೆ ಸೋಮಶೇಖರ ಪ್ರಿಯನೆ ಶಮದಮಪಾಲಿಸಿ ತಾಮಸ ಓಡಿಸಿ ಸಾಮಜವರದನ ಪ್ರೇಮವ ಕೊಡಿಸೋ 3 ಜ್ಞಾನಶೂನ್ಯನು ಆಗಿ ಶ್ವಾನಂದದಿ ಇರುವೆ ಮಾನಾಭಿಮಾನವನ್ನು ನಿನಗೆ ಅರ್ಪಿಸಿದೆನೊ ಅನಿಲನಶಾಸ್ತ್ರದಿ ಜ್ಞಾನವ ನೀ ನೀಡಿ ಮನದಲಿ ನಲಿನಲಿ ಮುನಿಗಳ ಒಡೆಯಾ 4 ವಿಧವಿಧ ಟೀಕೆಗಳನು ಮುದದಿಂದಲಿ ಮಾಡಿ ಮೋದವಂತದ ತತ್ವಗಳ ಮುಂದಕ್ಕೆ ತಂದೆಯೋ ಸದಯದಿ ಜಯಮುನಿ ವಾಯ್ವಾಂತರ್ಗತ ಮಾಧವ ಕೃಷ್ಣವಿಠಲನ ತೋರುತ 5
--------------
ಕೃಷ್ಣವಿಠಲದಾಸರು