ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ
ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ.
ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ 1
ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ಮøತಿ ಪೊತ್ತೂ 2
ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ 3
ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ4
ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ 5