ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಪ
ಘೋರ ಪಾತಕಾಂಬುಧಿಯ ದೂರ ಮಾಳ್ಪರ ಅ.ಪ
ಮೋದತೀರ್ಥರ ಮತವ ಸಾಧಿಸುವರ |
ಪಾದ ಸೇವ್ಯರ ದುರ್ಬೋಧ ಕಳೆವರ 1
ಭಾಷ್ಯತತ್ವ ಸುವಿಶೇಷ ಮಾಳ್ಪರ |
ದೋಷ ದೂರರ ವಾಸವಾದಿ ರೂಪರ2
ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರÀ |
ನೇಮನಿತ್ಯದ ನಿಷ್ಕಾಮನಾ ವರ 3
ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- |
ಶಿಕ್ಷಿತಾದರ ಅಪೇಕ್ಷ ರಹಿತರ 4
ಅಂಘ್ರಿ ಭಜನೆ ಮಾಳ್ಪರ |
ಕುಜನ ಭಂಜರ ದಿಗ್ವಿಜಯ ರಾಯರ5