ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥರು ಕಂಡೆ ಕಂಡೇ ಗುರುಗಳ - ಕಂಡೆ ಕಂಡೇ ಪ ಕಂಡೆ ಕಂಡೆನು ಕರುಣ ನಿಧಿಯನುತೊಂಡರನು ಬೆಂಬಿಡದೆ ಕಾಯ್ವರ ಅ.ಪ. ತಂದೆ ವೆಂಕಟೇಶ ವಿಠಲ ದಾಸರ | ಮಂದಿರದಿ ವಾತದ್ವಿತಿಯ ಪೆಸರಿನವಂದನೀಯರು ಗೈಯ್ಯುತಿರ್ಪುದ | ಅಂದ ಪುಜೆಯ ಛಂದದಿಂದಲಿ 1 ಯೋಗಿ ಕುಲಮಣಿ ಟೀಕಾಚಾರ್ಯರ 2 ಕಾಯಜನ ಶರ ಭಯವಿದೂರನ | ಮಾಯಿಮತ ಮಹತಿಮಿರ ಸೂರ್ಯನಪಾವಮಾನಿ ಮತಾಬ್ಧಿ ಚಂದ್ರನ | ಜಯ ಮುನೀಂದ್ರನ ವೀತ ಶೋಕನ 3 ಹಿಂಡು ಮಾಯ್ಗಜ ಗಂಡು ಸಿಂಹನ 4 ವಾತ ಸುತನಲಿ ಸೀತೆ ಪತಿಯನುಪ್ರೀತಿಯಿಂದಲಿ ಭಜಿಪ ಯತಿಗಳ | ದೂತ ಗುರು ಗೋವಿಂದ ವಿಠಲನ 5
--------------
ಗುರುಗೋವಿಂದವಿಠಲರು
ಟೀಕಾಚಾರ್ಯರ ಸ್ತೋತ್ರ ದಯದಿ ಪಾಲಿಸೋ ಜಯತೀರಥ ರಾಯಾ | ಅಕ್ಷೋಭ್ಯರ ತನಯಾ ಪ ಅತ್ಯಂತ್ಹರುಷದಿ ಎತ್ತಾಗಿರುತಿರಲೂ ಶ್ರೀ |ಆನಂದ ತೀರಥರೂನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ |ಗುರುರಾಯರು ಪೇಳಿದತತ್ವ ಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ 1 ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀದೇಶ ದೇಶದೋಳ್ ಸೈನ್ಯವನೇ ಚರಿಸೀ | ಹಣವನ್ನೇ ಗಳಿಸೀವಾಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀಶ್ರೀಶನಾಜ್ಞೆಯೊಳಿವರನೆ ಕರೆತರಿಸೀ |ಶಿಖೆ ಸೂತ್ರವ ತೆಗೆಸೀ2 ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾಕಂಡು ಭೇಟಿಯಾ ಮಾಡುತಲೇ ನಿಂದೂ | ಧೋಂಡೋ ರಘುನಾಥನಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ - ಪ್ರಚಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ 3 ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |ನಾನಾ ಬಗೆಯಿಂದಲಿಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನುಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ 4 ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳುವಾಸಿಪನೆಂಬೋ ಬಲು ಪ್ರಖ್ಯಾತಾ |ನಿಜಗುಣ ಗಣನೀತಾಬ್ಯಾಸರದಲೆ ಕೊಂಡಾಡಿದರೆ ನಿತ್ಯಾ | ಇಷ್ಟಾರ್ಥವನಿತ್ತಾ 5
--------------
ವ್ಯಾಸವಿಠ್ಠಲರು
ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸಗ್ರೇಸರರ ನಾಗಶಯನನು ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು- ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ ಪದ್ಮನಾಭ ನಾಮದಿಂದಿರುವರ ತೂಗಿರೆ1 ರಾಮನ ತಂದಿತ್ತ ನರಹರಿ ಮುನಿಪರ ಮಾಧವ ತೀರ್ಥರ ತೂಗಿರೆ ಆಮ- ಹಾವಿದ್ಯಾರಣ್ಯರನ ಗೆಲಿದಂಥ ಶ್ರೀ ಮದಕ್ಷೋಭ್ಯರ ತೂಗಿರೆ 2 ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ ತಟದಿ ಜಿತಾಮಿತ್ರರೆಂಬೊ ಪಿ- ನಾಕಿ ಅಂಶಜರನ ತೂಗಿರೆ 3 ರಾಜರಂದದಿ ಸುಖಭೋಜನ ಕೃದ್ಯತಿ ರಾಜ ಶ್ರೀಪಾದರ ತೂಗಿರೆ ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ ವ್ಯಾಸರಾಜರು ಮಲಗ್ಯಾರ ತೂಗಿರೆ 4 ವಾದಿಗಳನು ಯುಕ್ತಿವಾದದಿ ಗೆಲಿದಂಥ ವಾದಿರಾಜರನ್ನ ತೂಗಿರೆ ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ ವೇದವ್ಯಾಸಾತ್ಮಜರ ತೂಗಿರೆ 5 ಪರಿಮಳ ರಚಿಸಿದ ವರಹಜ ತೀರಸ್ಥ ಇರುಳು ಕಾಲದಲಿ ತರಣಿಯ ತೋರಿದ ಗುರುಸತ್ಯ ಬೋಧರ ತೂಗಿರೆ 6 ಪರಮತ ಖಂಡನ ನಿರುತದಿ ಮಾಡಿದ ಗುರುವರದೇಂದ್ರರ ತೂಗಿರೆ ಗುರು ಭುವನೇಂದ್ರರ ಕರಜವ್ಯಾಸತತ್ವ ವರಿತ ಯತೀಶರ ತೂಗಿರೆ 7 ವರಭಾಗವತಸಾರ ಸರಸದಿ ರಚಿಸಿದ ಗುರುವಿಷ್ಣು ತೀರ್ಥರ ತೂಗಿರೆ ಪರಮ ಕ್ಷೇತ್ರಕೂಡಲಿಯೊಳಗಿರುವಂಥ ಗುರುರಘುವೀರರ ತೂಗಿರೆ 8 ಹರಿಯ ಮಹಿಮೆಯನ್ನು ಸರಸದಿ ಪೇಳಿದ ಪುರಂದರ ದಾಸರ ತೂಗಿರೆ ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ ಗುರು ವಿಜಯದಾಸರ ತೂಗಿರೆ 9 ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ ಭಾಗಣ್ಣ ದಾಸರನ್ನು ತೂಗಿರೆ ಘನ್ನ ಹರಿಯಗುಣ ವರ್ಣಿಸಿದಂಥ ಜ ಗನ್ನಾಥ ದಾಸರ ತೂಗಿರೆ 10 ಮಾನವಿರಾಯರ ಪ್ರಾಣಪದಕರಾದ ಪ್ರಾಣೇಶದಾಸರ ತೂಗಿರೆ ವೇಣುಗೋಪಾಲನ್ನ ಗಾನದಿ ತುತಿಸಿದ ಆನಂದದಾಸರ ತೂಗಿರೆ 11 ವಾಸ ಆದಿಶಿಲಾಧೀಶನ್ನ ಭಜಿಸಿದ ಶೇಷ್ಠ ದಾಸರನ್ನ ತೂಗೀರೆ ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ ದಾಸೋತ್ತಮರನ್ನ ತೂಗೀರೆ 12
--------------
ಕಾರ್ಪರ ನರಹರಿದಾಸರು
ನೋಡು ನೋಡು ಟೀಕಾಚಾರ್ಯರ ಮಾಡು ವಂದನೆಗಳ ಬೇಡು ವರಗಳನ್ನು ಪ ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾ ನಿರ್ಮಾಣ ಮಾಡಿದ ಆರ್ಯರ 1 ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀಭೂಷಿತ ಕರ್ನ ವಿಲಸಿತ ಕಾಪಾಯಧಾರ್ಯರ 2 ಯಾವಾಗಲೂ ವಾಸುದೇವವಿಠಲನ್ನಸೇವಿಸುವರ ಭಜಿಸುವರ 3
--------------
ವ್ಯಾಸತತ್ವಜ್ಞದಾಸರು
ಪಾದ ಚಿಂತನವು ಕ್ಷಣದಲಿ ಶೋಧಿಪುದು ಮತಿಯ ತಾರಕ ಪ ಮೋದತೀರ್ಥರ ಭೇದಮತ ಅನು ವಾದ ಮಾಡಿದ ಶ್ರೀಜಯತೀರ್ಥರ ಅ.ಪ ಈ ಜಗದೊಳಗಿನ ರಾಜಕೀಯದ ಸೋಜಿಗ ಜೀವನವನೆ ತೊರೆದು ರಾಜೀವೋದ್ಭವನಯ್ಯನ ಚರಣಾಂ ಬೋಜ ನಿರತ ಯತಿರಾಜರ ತಾರಕ 1 ಕಾಕುಮತಗಳನೇಕಗಳನು ನಿ ರಾಕರಿಪ ಗ್ರಂಥಗಳನು ರಚಿಸಿ ಲೋಕೋತ್ತರನಿಗೆ ನ್ಯಾಯಸುಧೆಯಭಿ ಷೇಕವ ಮಾಡಿದ ಟೀಕಾಚಾರ್ಯರ 2 ವಿಧಿ ಫಾ ಲಾಕ್ಷನುತ ಶ್ರೀಕೃಷ್ಣನ ಪೂಜಕ ದುಷ್ಟ ಪಕ್ಷ ನಿರಾಸದಲಿ ಅತಿ ದಕ್ಷ ದೀಕ್ಷ ಅಕ್ಷೋಭ್ಯರ ಕುವರರ 3
--------------
ವಿದ್ಯಾಪ್ರಸನ್ನತೀರ್ಥರು
ಯತಿಗಳು ಟೀಕಾಚಾರ್ಯರು ಜಯರಾಯಾ ಜಯರಾಯಾ ಪ ದಯಕರ ಸಜ್ಜನಭಯಹರ ಗುರುವರ ಅ.ಪ ವಾಸವ ನೀ ವಸುಧೀಶನ ನಿಜ ಕೂಸೆನಿಸೀಪರಿ ದೇಶದಿ ಮೆರೆದೆ 1 ಸತಿಯಳ ತ್ಯಜಿಸಿ ಯತಿರೂಪ ಧರಿಸಿ ಪÀತಿತರ ಶಾಸ್ತ್ರವ ಹತಮಾಡಿದಿ ನೀ 2 ಸುಧಾದಿಗ್ರಂಥವ ಮುದದಲಿ ರಚಿಸಿ ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ3 ಅಲವಬೋಧರ ಮತ ಬಲವತ್ತರಮಾಡಿ ಜಲಜನಾಭನ ಮನ ಒಲಿಸಿದ್ಯೊ ಜೀಯಾ 4 ಪ್ರಮಿತಜನಗಣನಮಿತ ಪದಾಂಬುಜ ಅಮಿತಮಹಿಮ ನಿನ್ನ ನಮಿಸುವೆ ದಿನದಿನ 5 ಯಾತಕೆ ಎನ್ನನು ಈ ತೆರನೋಡುವಿ ದಾತಗುರುಜಗನ್ನಾಥ ವಿಠಲ ಪ್ರೀಯ6
--------------
ಗುರುಜಗನ್ನಾಥದಾಸರು
ಶ್ರೀಪುರುಷೋತ್ತಮತೀರ್ಥರು ಯೋಗಿಗಳರಸ ಟೀಕಾಚಾರ್ಯರೆ ನಿಮ್ಮ ಪಾದಬಾಗಿ ಭಜಿಸುವನರಗೆ ಪಾಪ ನಿರ್ಲೇಪ ಪ ಖಗವರ ವಹನನಕಾಗಿನಿ ತೀರಗ ವರ ಜಯಗುರುವೇ ಅ.ಪ. ಅಕ್ಷಯ ಫಲವೀವಾ |ಲಕ್ಷುಮಿ ನಾರಾಯಣನ | ಕುಕ್ಷಿಯೋಳೀಕ್ಷಿಸುವ |ಧೃತ - ಲಕ್ಷ್ಯವಿಲ್ಲದೆ ಗಿರಿ ಪಕ್ಷ ತರಿವ ಪರಪಕ್ಷಕೆ ಕರ್ಕಶ ಕುಲಿಶಾ 1 ದಶಮತಿ ಗ್ರಂಥಗಳಾ | ವೃಷಭ ಜನ್ಮದಿ ಪೊತ್ತುಅಸುವ ನೀಗುತ ಭೂಸುರ ಕುಲದಿ ಉದ್ಭವಿಸಿವಿಷಯ ಮೋಹವ ತ್ಯಜಿಸೀ | ಅಸಮ ಮಹಿಮ ಹರಿಯಾಒಸೆದು ಸೇವಿಸೆ ತುರಿಯಾ | ಆಶ್ರಮ ವಹಿಸೀ |ಧೃತ - ಬಸುರಲಿ ಬೊಮ್ಮನ ಪ್ರಸವಿಸಿದವನನುಸರ್ವೇಶ ನೆನುತಲಿ ಸಾರಿದ ಮಹಿಮಾ 2 ಜವನನ ಭಯನಾಶಾ | ಭುವನ ಪಾವನ ಸುಧೆಯಾಅವನಿ ಸುರರಿಗುಣಿಸೀ | ಕ್ಲೇಶವ ಹರಿಸೀ |ಅವನಿಜಾವಲ್ಲಭನಾ | ಮಾವನ ಕೊಂದವನಾಶಿವನ ಮೋಹಿಸಿ ಕೆಡಿಸಿ ಉಳಿಸೀದನಾ |ಧೃತ - ಪವನನ ಪ್ರಿಯ ಗುರು ಗೋವಿಂದ ವಿಠಲನನವ ನವ ಗ್ರಂಥದಿ ನುತಿಸಿದ ಮಹಿಮಾ3
--------------
ಗುರುಗೋವಿಂದವಿಠಲರು
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಪ ಘೋರ ಪಾತಕಾಂಬುಧಿಯ ದೂರ ಮಾಳ್ಪರ ಅ.ಪ ಮೋದತೀರ್ಥರ ಮತವ ಸಾಧಿಸುವರ | ಪಾದ ಸೇವ್ಯರ ದುರ್ಬೋಧ ಕಳೆವರ 1 ಭಾಷ್ಯತತ್ವ ಸುವಿಶೇಷ ಮಾಳ್ಪರ | ದೋಷ ದೂರರ ವಾಸವಾದಿ ರೂಪರ2 ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರÀ | ನೇಮನಿತ್ಯದ ನಿಷ್ಕಾಮನಾ ವರ 3 ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- | ಶಿಕ್ಷಿತಾದರ ಅಪೇಕ್ಷ ರಹಿತರ 4 ಅಂಘ್ರಿ ಭಜನೆ ಮಾಳ್ಪರ | ಕುಜನ ಭಂಜರ ದಿಗ್ವಿಜಯ ರಾಯರ5
--------------
ವಿಜಯದಾಸ
ಶ್ರೀ ವಿಷ್ಣು ತೀರ್ಥವಿಜಯ130ಪ್ರಥಮ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ, ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪನಿರ್ದೋಷಗುಣಪೂರ್ಣಶ್ರೀ ರಮಣ ಹಂಸನಿಗೆವಿಧಿಸನಕ ಮೊದಲಾದ ಗುರುಪರಂಪರೆಗೆ,ಯತಿವರ್ಯ ಅಚ್ಚುತ ಪ್ರೇಕ್ಷರಿಗೆ ಆನಂದತೀರ್ಥರ ಪದಾಂಬುಜಗಳಿಗೆ ಆನಮಿಪೆ 1ಪಂಕೇರುಹನಾಭ ನರಹರಿಮಾಧವಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರವಾಗೀಶರಿಗೆ ನಮೋ ರಾಮಚಂದ್ರರಿಗೆ 2ಶ್ರೀರಾಮ ಪ್ರಿಯ ರಾಮಚಂದ್ರರ ಕರಜರುಸೂರಿಗಳುವಿಭುದೇಂದ್ರ ವಿದ್ಯಾನಿಧಿಗೆಎರಗಿ ವಿದ್ಯಾನಿಧಿಯ ಸುತ ರಘುನಾಥರಿಗುಕರುಣಾಳು ರಘುವರ್ಯರಿಗು ಆನಮಿಪೆ 3ವೇದಾಂತಕೋವಿದರಘೂತ್ತಮ ತೀರ್ಥರಿಗೆವೇದವ್ಯಾಸಾಭಿದ ಯತಿಗಳಿಗೆ ನಮಿಪೆವೇದವ್ಯಾಸ ತೀರ್ಥರ ಕರಕಮಲ ಸಂಜಾತವಿದ್ಯಾಧೀಶರ ಚರಣಕಾ ನಮಿಪೆ 4ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯ -ನಾಥ ಸತ್ಯಾಭಿನವ ಸತ್ಯಪೂರ್ಣರಿಗೆಸತ್ಯವಿಜಯ ಸತ್ಯಪ್ರಿಯ ಸತ್ಯಬೋಧರಿಗೆಸತ್ಯಸಂಧ ಈ ಸರ್ವ ಗುರುಗಳಿಗೆ ನಮಿಪೆ 5ಸತ್ಯವರ ತೀರ್ಥರ ಚರಣಕಾ ನಮಿಸುವೆಸತ್ಯವರ ಕರಕಂಜ ಸಂಜಾತರಾದಸತ್ಯರಮಣ ಪ್ರಿಯ ಶ್ರೀ ವಿಷ್ಣುತೀರ್ಥರವೃತತಿಜಾಂಘ್ರಿಗಳಲ್ಲಿ ಶರಣಾದೆ ಸತತ 6ಶ್ರೀ ತ್ರಿವಿಕ್ರಮಪಾದಅಬ್ಜಜಾಸರಿತವಶಿರದ ಮೇಲ್ ಧರಿಸಿದ ಗಿರಿಜೇಶನಂತೆಹರಿಭಕ್ತಾಗ್ರಣಿ ವೈರಾಗ್ಯ ನಿಧಿಯು ಈಸೂರಿಕುಲತಿಲಕ ಶ್ರೀ ವಿಷ್ಣು ತೀರ್ಥಾರ್ಯ7ಸವಣೂರು ಪ್ರಾಂತದ ಸಿದ್ಧಾಪುರದವರುಮಾಧ್ವದಂಪತಿ ಭಾಗೀರಥಿ ಬಾಳಾಚಾರ್ಯಸೇವಿಸಿದರು ಟೀಕಾಚಾರ್ಯರ ಭಕ್ತಿಯಿಂದೇವಸ್ವಭಾವ ಮಗ ಪುಟ್ಟಬೇಕೆಂದು 8ರಾಘವಾನಂದ ಮುನಿ ಅಕ್ಷೋಭ್ಯ ತೀರ್ಥರಾ -ನುಗ್ರಹ ಸದಾಪೂರ್ಣ ಜಯತೀರ್ಥ ಮುನಿಯುಬಾಗಿ ಬೇಡಿದ ಈ ಸಾಧುದಂಪತಿಗೊಲಿದುಯುಕ್ತ ಕಾಲದಿ ದೊರೆಯಿತು ಪುತ್ರ ಭಾಗ್ಯ 9ಸ್ಪಟಿಕನಿಭ ಅಕಳಂಕ ಕಾಂತಿಯುಕ್ ಮಗನಿಗೆಇಟ್ಟು ಜಯತೀರ್ಥನಾಮವ ಮುಂಜಿ ಮಾಡಿಪಾಠ ಓದುವುದಕ್ಕೆ ಐಜಿ ಆಚಾರ್ಯರಲಿವಟುವ ಕಳುಹಿಸಿದರು ಕೃತಕೃತ್ಯ ತಂದೆ 10ಜಯತೀರ್ಥರನುಗ್ರಹದಿ ಜಯತೀರ್ಥ ವಟುವುವಿದ್ಯಾಭ್ಯಾಸ ಐಜಿ ಆರ್ಯರಲ್ಲಿಗೈಯುವಾಗ ಇತರ ವಿದ್ಯಾರ್ಥಿಗಳಿಗಧಿಕದಿವ್ಯ ಪ್ರತಿಭಾವನ್ನ ತೋರಿಸುತ್ತಿದ್ದ 11ಶ್ರೀದ ಒಲಿದಿಹ ಇವನ ಯೋಗ್ಯತೆ ದೊಡ್ಡದು,ವೈದಿಕ ಸುಪೂರ್ಣ ಬೋಧರ ಶಾಸ್ತ್ರವೆಲ್ಲ,ಓದಿ ಶ್ರೀ ಐಜಿ ವೇಂಕಟರಾಮಾರ್ಯರಲ್ಲಿಉತ್ತಮ ಜ್ಞಾನಿಯು ಆದ ಜಯತೀರ್ಥ 12ಸುರವೃಂದದಲಿ ದೊಡ್ಡ ಸ್ಥಾನದವ ಇವನೆಂದುಹರಿಯೇ ಈ ಜಯತೀರ್ಥನಲಿ ತೋರಿಹನುಗುರುಐಜಿಯರ ಸುತನ ಅಪಮೃತ್ಯು ತರಿದಿಹನುಭಾರಿತರ ಆಶ್ಚರ್ಯ ಇನ್ನೂ ತೋರಿಹನು 13ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ಮಹಾಭಕ್ತ ಶ್ರೀ ವಿಷ್ಣು ತೀರ್ಥಾಯಶರಣು 14 ಪ
--------------
ಪ್ರಸನ್ನ ಶ್ರೀನಿವಾಸದಾಸರು