ಅಮಮಪೇಳುವೆÀನೇನ ರಮಣನಾಕೃತಿಯನಾ
ಕಮಲ ಪತ್ರಾಂಬಕೀ ಕೇಳು ಸಖೀ
ಹುಳುಕು ಮೋರೆಯ ಮತ್ತೆ ಕೊಳಕು ದೇಹದ ಕಾಂತ
ಹುಳುಕು ಬೇರನು ಮೆಲುವನರೆರೆÀ ಚಲುವ
ಕೋರೆಯದು ಮೊಳಯುದ್ಧ ಮೀರಿಹುದು ತುಟಿಯನ್ನು
ಕ್ರೂರರೂಪವನಾಂತ ಧೀರನಹುದು
ಪುರದಾಚೆ ಸಂಚಾರ ಮರದಡಿಯೊಳೇ ವಾಸ
ವರಹಗಳೆ ಬಾಂಧವರು ಪರಮಚಿತ್ರ
ಅರರೆ ಬಣ್ಣಿಪೆನೆ ಕೀಟಿರೂಪಧರನ
ಪರಿಯೇನ ಪೇಳ್ವೆನೀ ಕ್ರೂರವರನ
ಗುರುಗಳಾಣತಿಯಿಂದ ಪಡೆದೆನಿವನ
ವರಶೇಷಗಿರಿವಾಸನೆನೆದ ಹದನ