ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಿಳ ಭುವನದೊಳು ನೀನೆವೊ ಸುಹೃದಯದಲಿ ಸಾಕ್ಷಾತ ಸದ್ಗುರು ನೀ ಸುಲಭವೋ ಧ್ರುವ ನಿಮ್ಮದೇ ಹೊಳಹೋ ನಿಮ್ಮದೆ ಸುಳಿವ್ಹು ನಿಮ್ಮದೇ ಬಲವೊ ನಿಮ್ಮ ದಯದೊಲವೊ 1 ಬಲುತಾನವೋ ಜುಮ್ಮು ಜುಮಗುಡುತಿದೆ ಝೇಂಕಾರವು ಸುಮ್ಮನೆ ಓಂಕಾರವೊ ಝಮ್ಮನೆ ಒಮ್ಮಿತಿಗ್ಹೆಳೆನಿಸುತಿರೆ ಬ್ರಹ್ಮಾನಂದದ ಘೋಷವೋ ನಿಮ್ಮದೆವೊ 2 ನಿಗಮಗೋಚರ ನಿಜವಸ್ತು ನೀನೆ ಭಗತರಿಗೆ ಸಹಕಾರವೊ ನಿಜ ನೀನೆವೋ ಸುಗಮ ಸುಪಥ ಸಜ್ಜನರಾನಂದ ಯೋಗಿಜನರನುಕೂಲವೋ ಘನ ನೀನೆವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಿನ ಚರಣವ ನೆನೆವುತಲನುದಿನ ಪರದೊಳು ದೈವದ ನೆಲೆ ನೋಡು ಪ ಗುರುವಿನ ಕರುಣಕಟಾಕ್ಷವದಲ್ಲದೆ ನರರಿಗೆ ದೊರಕದು ಪರಸುಖವು ಹಿರಿಯರ ಅಭಿಮತವಿಲ್ಲದ ಗೃಹದೊಳು ಕರೆಕರೆಯಾಗಿದೆ ಕೌತುಕವು 1 ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು ನೆರೆವುದು ತನ್ನೊಳು ಘಾತಕವು ಸೆರೆವಿಡಿಯಲು ಹರಿವಿಡಿದಿಹನಾತನ ತೊರೆವುದು ಭವಭಯ ಸೂತಕವು 2 ಯೋಗಿಯ ಹೃದಯದಿ ಸಕಲಾಗಮ ಸಮ ನಾಗಿಯೆ ತೋರ್ಪುದು ಧೃಢವಾಗಿ ಸಾಗರ ಸುತ್ತಿದ ಭೂಭಾಗದ ಸರಿ ಯೋಗಿಯ ದೃಷ್ಟಿಯೆ ಘನವಾಗಿ 3 ಬಾಗಿದ ಕಬ್ಬಿನ ಕೋಲೊಳು ರುಚಿಕರ ವಾಗಿಯೆ ತೋರುವ ಪರಿಯಾಗಿ ರಾಗಿಯ ಶಿಲೆ ತಾ ಬಳಲಿದೆನೆನುತಲೆ ಭಾಗೆಯ ಕೊಂಬುದೆ ಸಮವಾಗಿ 4 ನಂಬದಿರಂಬರ ವಾದಿಯ ಅಂಶಕ ತುಂಬಿದ ಕುಂಭ ದೃಢದಿಂದ ಅಂಬರದೊಳಗಣ ಮೇಘಕೆ ವಾಯುವು ಬೆಂಬಲವಾಗಿಹ ದಯದಿಂದ 5 ಸಂಭ್ರಮದಿಂದಲಿ ಗರ್ಜಿಸಿ ನಾಲ್ದೆಸೆ ಅಂಬಿಸಿ ಪೋಗುವ ಪರಿಯಿಂದ ಅಂಬುಜಭವ ಬರೆದಕ್ಷರ ಮಾಸಲು ಅಂಬರ ಬಯಲಹ ತೆರದಿಂದ 6 ಶುದ್ಧವಶುದ್ಧವು ಆಗಿಹ ಪೃಥಿವಿಯ ಬದ್ಧವಾಗಿಯೆ ತೊಳೆದವರಾರು ಅಬ್ಧಿಯ ಮಧ್ಯದಿ ಎದ್ದ ವಾರಿಗಳನು ತಿದ್ದಿಯೆ ಪಸರಿಸುವವರಾರು 7 ಇದ್ದರೆ ಸರ್ವರ ಭವನದೊಳಗ್ನಿಯ ಮೆದ್ದವ ಶುದ್ದವೆಂಬವರಾರು ಹೊದ್ದಿದ ಮೂರುತಿ ನಾಲ್ದೆಸೆಯೊಳಗಿರೆ ಬದ್ಧವಾಗಿಯೆ ಕಟ್ಟಿಕೊಳಲ್ಯಾರು 8 ಬಯಲೊಳಗಿರುತಿಹ ಬಹು ಝೇಂಕಾರವ ನಯದೊಳು ನೋಡಿದರೇನುಂಟು ಬಯಲೊಳು ಮೂರಕ್ಷರವನೆ ಬಿತ್ತಲು ಮೈಲಿಗೆ ತಳಿಸುವ ಬೆಳೆಯುಂಟು 9 ಸಿರಿ ಸೊಬಗನು ಜಯಿಸುವ ಹಯವನು ಏರುವ ಬಗೆಯುಂಟು ದಯದೊಳು ಶ್ರೀ ಗುರು ವಿರಚಿಸಿಯಿತ್ತರೆ ಕ್ರಮವಿಕ್ರಯದೊಳು ಫಲವುಂಟು 10 ಬೇಡನು ಸಲಹಿದ ಆಡು ತಾ ಯಾಗಕೆ ಬೇಡವೆಂಬವರಾರು ಶಾಸ್ತ್ರದಲಿ ಕಾಡಿನೊಳಿರುತಿಹ ಮೃಗವಾಲದ ಸಿರಿ ನೋಡು ನೀ ನಿತ್ಯದಿರಾಸ್ತ್ರದಲಿ 11 ಕೋಡಗನಾದರು ನೋಡಿಯೆ ಭಜಿಸಲು ಕೂಡುಗು ಹರಿಯ ಪರತ್ರದಲಿ ಕೂಡಿಕೊಂಡರೆ ಪರಬೊಮ್ಮನ ಮನದಲಿ ಆಡದು ಮಾಯದ ಸೂತ್ರದಲಿ 12 ಮೃಗ ಗೋರೋಚನ ಸಹ ಉತ್ತಮವಾಗಿಹ ಮುತ್ತುಗಳು ನಿತ್ಯದಿ ಕ್ರಯಗಟ್ಟಿ ಉಣ್ಣದೆ ಹುಲ್ಲನು ಕಿತ್ತು ಮೆದ್ದಾಡುವ ಅವಸ್ಥೆಗಳು13 ಮೃತ್ಯುವ ಕಾಣದೆ ಬೊಮ್ಮವನಡಗಿಸಿ ಎತ್ತಲಾದರು ಪೋದ ವಸ್ತುಗಳು ಭಕ್ತರಿಗಲ್ಲದೆ ಮನವಪರೋಕ್ಷದ ವಸ್ತುವ ಕಾಣದು ನಿತ್ಯದೊಳು 14 ಜ್ಯೋತಿರ್ಮಯವಾಗಿಹ ವಸ್ತುವಿನೊಳು ಸೂತಕ ಹೊದ್ದುವುದೇನುಂಟು ಜಾತಿವಿಜಾತಿಯೊಳೊಲಿದಿಹ ಶಿವನವ ದೂತರ ನಂ[ಬ]1ದರಾರುಂಟು 15 ಓತು ಆಶುದ್ದವನುಂಡರು ಕವಿಲೆಯೊ ಳ್ಮಾತಿನ ವಾಸಿಯದೇನುಂಟು ನೀತಿ ವಿಹೀನರೊಳುದಿಸಿದ ಲವಣದ ಧಾತು ಕೂಡದೆ ಸವಿಯೇನುಂಟು 16 ಧಾರುಣಿ ಭಾರವ ಮಿತಿಗಟ್ಟಿ ತಕ್ಕಡಿ ಗೇರಿಸಿ ತೂಗಲು ಬಹುದೀಗ ವಾರಿಧಿಯನು ಮುಕ್ಕುಳಿಸಿಯೆ ಬತ್ತಿಸಿ ತೋರಿಸಲಪ್ಪುದು ಬಹು ಬೇಗ 17 ಧಾರುಣಿಯೊಳು ಗುರುಕರುಣದ ಅಳತೆ ಮು ರಾರಿಗು ಸಿಲುಕದು ಅದು ಈಗ ತೋರಿತು ಅಲ್ಲಿ ವರಾಹತಿಮ್ಮಪ್ಪ ಕು ಮಾರರು ವಾಜಿಯ ತಡೆದಾಗ 18
--------------
ವರಹತಿಮ್ಮಪ್ಪ
ತಾರಕತಾರಕತಾರಕತಾರಕವೆಂಬತವನಿಧಿಯನು ತಪಿಸುತಲಿದೆ ನೋಡಾಪಮುಗಿಲಾಕಾರದಿ ಮೋಹರಿಸುತಲಿಹ ಮಿಂಚುಗಳನೆಭುಗಿಲು ಭುಗಿಲು ಎನಿಸುವ ಕಳೆಗಳಬುದು ಬದಗಳ ನೋಡ1ಥಳಕು ಥಳಕು ಥಳಥಳನೆಂದೆಂಬ ಥರಗಳನದ ನೋಡಬೆಳಕುಗಳಹ ಬಲು ಬೆಳಗನೆ ಬೆಳಗುವ ಭೇದಗಳನೆ ನೊಡ2ತೋರುತಡುಗುವ ತೋರು ಕಿಡಿಗಳ ಕೋಟಿಗಳನೆ ನೋಡಮೀರಿಯೆ ಮಿಣಿ ಮಿಣಿ ಮಿಣಿಕಿಪ ವಿಸರದ ಮಿಶ್ರಿಗಳನೆ ನೋಡ3ಝಣಝಣರೆಂಬ ಝಾಗಟೆ ಮೊಳಗಿನ ಝೇಂಕಾರವ ನೋಡಎಣಿಸಲು ಬಾರದ ಎಡೆದೆರಪಿಲ್ಲದ ಏಕಾರವ ನೋಡ4ಸಾಗರ ಸುಖವನು ಸವಿಸವಿದುಣ್ಣುವ ಸಾಕಾರವೇ ನೋಡಯೋಗಿಎನಿಪ ಚಿದಾನಂದನೊಲಿದ ಯೋಗಿಗೆ ಇದು ನೋಡ5
--------------
ಚಿದಾನಂದ ಅವಧೂತರು