ಭಕುತರ ರಿಣಕಂಜಿ ಅಡಗಿದರೇ |
ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ
ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ |
ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ |
ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು |
ಉತ್ತಮ ನರಮೃಗದಂತಡವಿಯ ಸೇರಿ1
ಬಡತನ ದೋರಲೆಂದು ಯಾಚಕನಾದರೇನು |
ಕಡಲ ಬೊರಿಯಾ ಮನೆ ಮಾಡಿರಲೇನು |
ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ |
ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ 2
ಮುನಿಯಂತೆ ದಿಗಂಬರ ರೂಪವ ತಾಳಲೇನು |
ಜನದ ಕಲಿಕೀ ಮಾತು ಕಡೆಗಾಣುದೇ |
ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ |
ಸಂತೈಸಿ ಶರಣರ ರಕ್ಷಿಸಯ್ಯಾ 3