ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಾರು ನವರತುನ ಮಣಿ ಮಂಟಪಕೆ ಪ ನೀರಜಾಕ್ಷ ಆ ರುಕುಮಣಿ ಭಾ ಮೆಯರೊಡಗೂಡಿ ಅ.ಪ ಹೇಮದ ತಂಬಿಗೆ ಬಿಂದಿಗೆಗಳಲಿ ನೇಮದಿ ಉದಕವ ತುಂಬಿಹರೊ ಕೋಮಲ ತುಳಸೀ ಮಲ್ಲಿಗೆ ಸಂಪಿಗೆ ಪೂಮಳೆಗರೆಯಲು ತಂದಿಹರೊ ಸ್ವಾಮಿ ನಿನಗೆ ಪರಿಮಳ ದ್ರವ್ಯಗಳನು ಪ್ರೇಮದಿಂದಲರ್ಪಿಸಲಿಹರೊ ಚಾಮರ ಸೇವೆಯ ಅರ್ಪಿಸುವರು ಹರಿ ನಾಮ ಹಾಡಿ ಸ್ವಾಗತ ಬಯಸುವರೊ 1 ಮೇಳದ ಮಂಗಳವಾದನ ಒಂದೆಡೆ ಕಹಳೆ ಶಂಖ ದುಂದುಬಿ ಧ್ವನಿಯು ತಾಳ ತಂಬೂರಿ ಮೃದಂಗದ ಶೃತಿಗಳ ಮೇಳನದಲಿ ದಾಸರ ಗಾನ ಶೀಲರಿವರು ಸುಸ್ಸರದಲಿ ವೇದವ ಪೇಳಲು ಕಾಲಕೆ ಕಾದಿಹರೊ ಬಾಲರು ಸಂಭ್ರಮದಲಿ ಝಾಂಗಟೆ ಕೈ ತಾಳಗಳನು ಕರದಲಿ ಪಿಡಿದಿಹರೊ 2 ಲಾಡು ಜಿಲೇಬಿಯ ರಾಶಿಗಳನು ಹೊಸ ಗೂಡೆಗಳಲಿ ತುಂಬಿಟ್ಟಿಹರೊ ನೋಡಲೆ ದಣಿಸುವ ತೆರದಲಿ ಚತುರರು ಮಾಡಿದರೋ ಪಕ್ವಾನ್ನಗಳ ಜೋಡಿಸಿ ಕರಗಳ ಕಾದಿರುವರೋ ಬಲು ನಾಡುನಾಡುಗಳ ಮಂದಿಗಳು ಈಡೇರಿಸುವದು ಭಕುತ ಮನೋರಥ ರೂಢಿಯು ನಿನ್ನದು ಶರಣ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ ಪ ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ ಅಷ್ಟಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ ಅ.ಪ ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ 1 ಮಂದಗಮನೆಯರ ಮಂದಹಾಸದಿ ಅಪ್ಪಿ ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ 2 ಮಿರಿಮಿರಿ ಮಿಂಚುವ ಕಿರೀಟ ಕುಂಡಲ ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ 3 ಸುಮನಸರೊಂದಿತ ಯಮುನಾ ಪುಳಿನದಿ ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ 4 ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ 5 ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ ಬತ್ತೀಸ ರಾಗದಿ ತತ್ಥೈವಾದ್ಯದೀ 6 ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ 7 ದಿವಪನ ಸೋಲಿಪ ನವ ಪೀತಾಂಬರ ಧರಿಸಿ ಭುವನವ ಮೋಹಿಪ ನವ ಸುವಿಶೇಷನೆ 8 ವಿಜಯ ರಾಮಚಂದ್ರವಿಠಲರಾಯನೆ ನಿಜ ಪರಿವಾರದಿಂ ಭಜಕರ ಪಾಲಿಪ 9
--------------
ವಿಜಯ ರಾಮಚಂದ್ರವಿಠಲ
ತಾರಕತಾರಕತಾರಕತಾರಕವೆಂಬತವನಿಧಿಯನು ತಪಿಸುತಲಿದೆ ನೋಡಾಪಮುಗಿಲಾಕಾರದಿ ಮೋಹರಿಸುತಲಿಹ ಮಿಂಚುಗಳನೆಭುಗಿಲು ಭುಗಿಲು ಎನಿಸುವ ಕಳೆಗಳಬುದು ಬದಗಳ ನೋಡ1ಥಳಕು ಥಳಕು ಥಳಥಳನೆಂದೆಂಬ ಥರಗಳನದ ನೋಡಬೆಳಕುಗಳಹ ಬಲು ಬೆಳಗನೆ ಬೆಳಗುವ ಭೇದಗಳನೆ ನೊಡ2ತೋರುತಡುಗುವ ತೋರು ಕಿಡಿಗಳ ಕೋಟಿಗಳನೆ ನೋಡಮೀರಿಯೆ ಮಿಣಿ ಮಿಣಿ ಮಿಣಿಕಿಪ ವಿಸರದ ಮಿಶ್ರಿಗಳನೆ ನೋಡ3ಝಣಝಣರೆಂಬ ಝಾಗಟೆ ಮೊಳಗಿನ ಝೇಂಕಾರವ ನೋಡಎಣಿಸಲು ಬಾರದ ಎಡೆದೆರಪಿಲ್ಲದ ಏಕಾರವ ನೋಡ4ಸಾಗರ ಸುಖವನು ಸವಿಸವಿದುಣ್ಣುವ ಸಾಕಾರವೇ ನೋಡಯೋಗಿಎನಿಪ ಚಿದಾನಂದನೊಲಿದ ಯೋಗಿಗೆ ಇದು ನೋಡ5
--------------
ಚಿದಾನಂದ ಅವಧೂತರು