ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ ಬಣ್ಣಬಣ್ಣದಲಿ ಭಾಸುವ ಪ್ರಭೆಯ ಧ್ರುವ ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು ಥಳಥಳಿಸುತಿಹುದು ಒಳಹೊರಗೆ ಝಳಿಝಳಿಸುತಿಹದು ಮೊಳೆಮಿಂಚಿನ ಪರಿ ಸುಳವ್ಹುದೋರಿತು ಕಳೆವರದೊಳಗೆ 1 ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ ಸಾಧಿಸಿ ಕಂಡೆ ಸುಖಸದೋದಿತವ ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ ಭೇದಿಸಿತು ಮನಸು ನಿಜಬೋಧವ 2 ಭಾವ ಬಲಿದು ನೋಡಿ ದೇವಾಧಿದೇವನ ಸುವಿದ್ಯ ಸುರಸವ ಸವಿಸವಿದು ಪಾವನ್ನವಾಯಿತು ಮಹಿಪತಿ ಜೀವನವುಕಾವಕರುಣ ಗುರುದಯದಿಂದ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ ಝಳಿಸುತಿಹದು ಜಗದೊಳಗೆ ಧ್ರುವ ಬೆಳಗಾಯಿತು ಎನ್ನೊಳಗೆ ಸುಳಿವು ದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ 1 ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ ಗುಹ್ಯ ತಾರ್ಕಣ್ಯ ಬೆಳಗು ಬೈಗಿಲ್ಲದ ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ 2 ಬೆಳಗಿನೊಳು ಬೆರಗಾದನು ಮಹಿಪತಿ ಅತಿ ಆಶ್ಚರ್ಯವ ನೋಡಿ ತೊಳಲಿ ಬಳಲುವ ನಿದ್ರೆಯಗಳೆದನು ತಾ ಈ ಡ್ಯಾಡಿ ನಿಜ ಒಡಮೂಡಿ ಭವ ಪಾದವ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು