ಆನೆ ಬಂತಿದಕೋ ಮಹಾಮದ್ದಾನೆ ಬಂತಿದಕೋ
ಸ್ವಾನಂದದಲಿ ಮೆಲ್ಲಮೆಲ್ಲನೆ ಅಡಿಗಳ
ತಾನಿಡು ತೊಲವುತಲಿ ನೋಡಮ್ಮ ಧ್ರುವ
ಕರಿಯ ಬಣ್ಣದಲೊಪ್ಪುತ
ಕಿರಿಗೂದÀಲು ಶಿರದಲಿ ಹೊಳೆವುತ
ಪೆರೆನೊಸಲೊಳು ಕೇಸರದ ಕಸ್ತೂರಿ ರೇಖೆ
ಕರುಣ ಭಾವದ ಕಂಗಳು ನೋಡಮ್ಮ 1
ಝಳಝಳಿಪಂಬರದಿ ಫಣ ಫಣವೆಂಬ
ಚೆಲುವ ಗಂಟÉಯರವದಿ
ಒಲಿದು ತನ್ನಯ ನಿಜ ಶರಣರ ಅನುಮತ
ದಲಿ ನಲಿದಾಡುತಲಿ ನೋಡಮ್ಮ 2
ದುಷ್ಟ ಜನರು ತೊಲಗಿ ಎನುತ ಮುಂದೆ
ಶಿಷ್ಟ ಜನರು ಒದಗಿ
ಅದ್ದಹಾಸದಿ ಬಂದರಿದೆ ಮಹಿಪತಿ ಜನ
ಇಷ್ಟದೈವತ ಎನಿಪ ನೋಡಮ್ಮ 3