ಏನಿದು ಎಲೆ ಮನ ಏನು ಇದು
ನೆನೆಸಿದರೆದೆ ಝಲ್ಲೆನುವುದು ಪ
ನಾನು ಯಾರೆಂಬುವ ಖೂನವ ತಿಳಿಯದೆ
ಶ್ವಾನನಂದದಿ ಕೆಟ್ಟ ಹೀನಭವಕೆ ಬಿದ್ದು ಅ.ಪ
ಏತಕ ಬಂದದ್ದೀ ಜನುಮಕ್ಕೆ ತಲೆಯೆತ್ತಿ ನೋಡದೆ
ಕೂತಿಮುಂದಕೆ ನೀತಿಗೇಡಿ ಮಹಪಾತಕನು ಯಮ
ದೂತರು ನಿಂತಾರೊ ಎಳಿಲಿಕ್ಕೆ 1
ಬೀಳಬೇಡೋ ಮಾಯದ
ಜಾಲಕ್ಕೆ ಘಳಿಲನೆ ತಿಳಿತಿಳಿ ಸುಲಭದಿ ಸಮಯವು
ಬಲಿಸಿ ಹರಿಯ ಧ್ಯಾನ ಕಾಲನ ನೂಕೋ 2
ಹುಟ್ಟಿಬಂದಿ ಶಿಷ್ಟಪದ ಪಡಿಲಿಕ್ಕೆ ಮರ್ತುಬಿಟ್ಟಿ ನಿಂತಿ
ಬಿಟ್ಟಗಂಟ್ಹೊರಲಿಕ್ಕೆ ಭ್ರಷ್ಟಗುಣವ ಬಿಟ್ಟು ದಿಟ್ಟರಾಮನ
ಗಟ್ಟ್ಯಾಗಿ ನಂಬಿ ಮುಟ್ಟು ಮುಕ್ತಿಪದಕೆ3