ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಡವನಿಗೆ ನಂಟರುಂಟೆ ಪೊಡವಿಯಲಿ ಬಲಿದನಿಗೆ ತಂಟೆಯುಂಟೆ ಪ ಬಡವನನು ಕಂಡರೆ ಮಡದಿಯರು ಜರಿವರು ಬಲಿದನನು ಕಂಡರೆ ಹಲ್ಲುಗಳ ಕಿರಿವರು ಅ.ಪ ಸಿರಿಯ ಪೊಂದಿದ ಮನುಜ ಜಗದಲಿ ಸರಿಯೆಂದು ಎನಿಸುವನು ಮರುಕವಿಲ್ಲದೆ ನರರು ಪರಿಪರಿ ಜರಿವರು 1 ಕಾಸು ಪೊಂದಿದ ನರನ ಪರಿ ಹಾಸವೆ ಬಲು ಸೊಗಸು ಕಾಸಿನ ಮದದಿಂದ ಲೇಸವೂ ಇಲ್ಲದೆ ಕ್ಲೇಶ ಪಡುವನ ಕಂಡು ಮೀಸೆಯ ತಿರುವುವರು2 ಕ್ರೂರನಾದರು ಧನಿಕ ಇವನನು ಸೇರಲು ಬಯಸುವರು ಭಾರಿ ನಡತೆ ಇದ್ದು ಸೇರದಿರಲು ಧನ ಯಾರು ಕಂಡರು ಇವನ ಮೋರೆ ತಿರುಗುವರು 3 ಧನವಿದ್ದರೆ ಜೋಕು ಜಗದೊಳು ಘನತೆ ಏತಕೆ ಬೇಕು ಕನಸಿನಲ್ಲಿಯು ಧನ ಕಾಣದ ಮನುಜನ ಘನತೆಯು ಜನಗಳ ಮನಕೆಂತು ತೋರುವುದು 4 ಮದನ ಜಗದಲಿ ಕಾಸಿಲ್ಲದವನು ದನ ಕೋಶ ಪೊಂದಿದವನು ಕೀಶನಾದರು ಪ್ರೇಮ ಪಾಶಕ್ಕೆ ಬೀಳಲು ಆಸೆಯಪಡುವರು 5 ಹಣವಿದ್ದ ಪುರುಷನನ್ನು ಧರಣಿಯೊಳ್ ಕೆಣಕಿ ಬದುಕಬಹುದೆ ಗುಣಶಾಲಿಯಾದರು ಋಣಗಾರ ನರನನು ಕುಣಿಸುತ್ತ ಕ್ಲೇಶಕೆ ಹೊಣೆಯ ಮಾಡುವರು 6 ಝಣಿಝಣಿಸುವ ಧನವ ಪೊಂದಿರೆ ತೃಣವಂತೆ ಜಗವೆಲ್ಲ ಪಣಿಯಲಿ ಬೊಮ್ಮನು ಹಣವ ಬರೆಯದಿರೆ ಅಣಿಯಾದ ಜ್ಞಾನಿಯು ಹೆಣದಂತಾಗುವನು 7 ಶುಂಠನಾದರು ಧನಿಕ ಇವನಿಗೆ ಉಂಟೆ ಜಗದಿ ಎದುರು ಗಂಟು ಇಲ್ಲದವನ ನೆಂಟರು ಜರಿವರು ಕುಂಟು ಎತ್ತಿನಂತೆ ಒಂಟಿಯಾಗುವನು 8 ಹೊನ್ನು ಜರಠ ನರಗೆ ಸುಲಭದಿ ಹೆಣ್ಣು ಒದಗಿಸುವುದು ಸೊನ್ನೆಯಾದರೆ ಧನ ಚಿನ್ನದಂತಿರುವಗೆ ಇನ್ನಾರು ಕಾಣೆ ಪ್ರಸನ್ನ ಹರಿಯೇ ಗತಿ9
--------------
ವಿದ್ಯಾಪ್ರಸನ್ನತೀರ್ಥರು
ಧೂಪಾರತಿಯ ನೋಡುವ ಬನ್ನಿ ನಮ್ಮಗೋಪಾಲಕೃಷ್ಣನ ಪೂಜೆಯ ಸಮಯದಿ ಪ.ಅಗುರುಚಂದನ ಧೂಪ ಗುಗ್ಗುಳ ಸಾಮ್ರಾಣಿಮಘಮಘಿಸುವ ಧೂಪದಾರತಿಯು ||ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮಜಗನ್ನಾಥ ಕೃಷ್ಣನ ದೇವರ ಪೂಜೆಯ 1ಮದ್ದಳೆ ಜಾಂಗಟಿ ತಾಳ ತಮ್ಮಟೆಭೇರಿತದ್ಧಿಮಿ ಧಿಮಿಕೆಂಬ ನಾದಗಳು ||ಹೊದ್ದಿದಧವಳ ಶಂಖದ ಘೋಷಣಂಗಳಪದ್ಮನಾಭನ ದಿವ್ಯ ದೇವರ ಪೂಜೆಯ 2ಢಣ ಢಣ ಢಣರೆಂಬ ತಾಳ ದಂಡಿಗೆವೇಣುಢಣಕು ಧಿಮಿಕು ಎಂಬ ಮದ್ದಳೆಯು ||ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳಘನರಾಗದಿಂದಲಿ ಹಾಡುತ ಪಾಡುತ 3ಮುತ್ತು ಛತ್ರ ಚಾಮರ ಪತಾಕ ಧ್ವಜರತ್ನ ಕೆಚ್ಚಿದ ಪದಕ ಹಾರಗಳು ||ಮತ್ತೆ ಕೋಟಿಸೂರ್ಯ ಪ್ರಭೆಯ ಧಿಕ್ಕರಿಸುವಸತ್ಯಭಾಮೆ ರುಕ್ಮಿಣಿಯರರಸನ 4ಹರ ಬ್ರಹ್ಮಸುರಪತಿ ದೇವತೆ ಮೊದಲಾದಪರಮ ಪಾವನಮೂರ್ತಿ ಪುರುಷೋತ್ತಮನ ||ಪರದೈವತವೆಂದು ಬಿರುದು ಪೊಗಳಿಸಿಕೊಂಬಪುರಂದರವಿಠಲನ ಪೂಜೆಯ ಕಾಲದ 5
--------------
ಪುರಂದರದಾಸರು