ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ
ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ1
ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ2
ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು 3
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು4
ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ5