ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದನ ಕಂದ ಬಂದ ಗೋವಿಂದ ಇಂದಿರಾನಂದ ರಾಧೆ ಮುಕುಂದ ಪ ವೃಂದಿತ ಬೃಂದಾರಕ ಖಗವೃಂದ ಸುಂದರ ಮುರಳೀ ನಾದಾನಂದ ಅ.ಪ ಘಣಿಮಣಿ ಭೂಷಣ ಮುನಿತೋಷಣ ಗಣಿಕಾಗಣ ಮನಮೋಹನ ತರುಣ ಝಣ ಝಂಝಣರವ ಕಿಣಿಕಿಣಿಚರಣ ಕುಣಿ ಕುಣಿವನು ಮಾಂಗಿರಿರಂಗ ಕರುಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎತ್ತಣದನಿಯಿದು ಎತ್ತಣ ಮಧುರವ ಚಿತ್ತಾಕರ್ಷಕ ಬಾನುಲಿಯೇ ಪ ಮತ್ತ ಭೃಂಗಾಳಿಯ ಝೇಂಕೃತಿ ಶ್ರುತಿಯು ಸುತ್ತ ಮಯೂರದ ನಾಟ್ಯದ ನಲವೋ ಅ.ಪ ಏಣಲೋಚನೆಯರ ಕಾಂಚನ ಕಿರುಗೆಜ್ಜೆ ವೀಣಾನಾದವ ಅಣಕಿಪುದು ತಾಣವದೆಲ್ಲಿಯೋ ಕಾಣಿರೆ ಸಖಿಯರೇ ವೇಣು ಗೋಪಾಲನ ನಾಟ್ಯವಿದಲ್ತೇ 1 ಅಲ್ಲಿ ನೋಡೇ ತಂಗಿ ಬಾನೆಡೆಯಿಂದಲಿ ಮಲ್ಲಿಗೆ ಪೂಮಳೆ ಸುರಿಯುತಿದೆ ನಲ್ಲೆಯರಿಂಚರ ಸರಿಗಮಪದನಿಯು ಎಲ್ಲ ರಾಗಗಳಲಿ ನಲಿಯುತಲಿಹುದು 2 ಅಂಗನೆಯರೆ ನಮ್ಮ ಗೆಜ್ಜೆಯ ಝಣರವ ಮಂಗಳಗಾನಕೆ ಇಂಬಿರಲಿ ಹೊಂಗೊಳಲೂದುವ ಚಿನ್ಮಯ ಮಾಂಗಿರಿ ರಂಗನ ದರ್ಶನ ಮಾಡುವ ಬನ್ನಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೃಷ್ಣ ಸ್ತುತಿ ಮಾಂಗಿರಿಯೊಡೆಯ ಗೋಪಾಲನೇ ಮಧುರ ಪ ಗೋಪಾಲನ ಮಾಂಗಿರಿಯೇ ಮಧುರ ಅ.ಪ ಪರಿ ಗೋಪಾಲನ ಗಜಗಮನವು ಮಧುರ 1 ಗೋಪಾಲನ ಮುರಳೀರವ ಮಧುರ ಗೋಪಾಲನ ರಸಗಾನವೆ ಮಧುರ 2 ಗೋಪಾಲನ ಸಸುನಗೆಯತಿ ಮಧುರ ಗೋಪಾಲನ ಕಲಾನರ್ತನ ಮಧುರ 3 ಗೋಪಾಲನ ಝಣ ಝಣರವ ಮಧುರ ಗೋಪಾಲನ ಕೋಲಾಟವು ಮಧುರ 4 ಗೋಪಾಲನ ನಡುಗೆಜ್ಜೆಯು ಮಧುರ ಗೋಪಾಲನ ಕರದಭಯವು ಮಧುರ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಾಲ ಬಾಲಾ ತ್ರಿಭುವನ ಪಾಲಾ ಕರುಣಾಲವಾಲ ಗೋಪಾಲ ಬಾಲಾ ಗೋಪೀ ಬಾಲಾ ಭಕುತಾನುಕೂಲ ಪ ಪಾಪಕುಲಾನಲ ತಾಪಸ ಸಂಕುಲ ಶ್ರೀಪತೆ ಮಾಂಗಿರಿನಿಲಯ ಶುಭಾಕುಲ ತಾಪತ್ರಯ ಕುಲಜಾಲ ನಿರ್ಮೂಲ ಗೋಪಗೋಪಿಕಾನಂದದುಕೂಲಾಅ.ಪ ಮುರಳೀಧರ ಘನಸುಂದರ ಭಾವ ದೇವಾದಿದೇವ ಸರಸೀರುಹದಳನಯನ ಸ್ವಭಾವಾ ಜೀವಾದಿಜೀವ ವರದಾಯಕ ಶರಣರ ಸಂಜೀವಾ ಮೃದುಮಧುರಸ್ವಭಾವ ಸ್ವರನಾದದಿ ಘಲು ಘಲ್ಲೆನುತಿರುವಾ ವರನೂಪುರದುಂಗುರ ಝಣ ಝಣರವ ಹರುಷದೊಳೆಲ್ಲೆಡೆಯೊಳು ನಲಿನಲಿದಾಡುವ 1 ಮುದ್ದಾಡಿ ನಲಿಯಳೆ ನಿನ್ನ ಯಶೋದಾ ಅಘರೂಪವಾದ ಮುದ್ದೆ ಬೆಣ್ಣೆಯ ಮೆಲುವಾತುರದಿಂದ ಕರಯುಗಗಳಿಂದ ಕದ್ದು ನೀ ನೋಡುವುದೇ ಅತಿಚೆಂದ ಭಕ್ತರಾನಂದಾ ಮದ್ದುಣಿಸಿದಳ ಒದ್ದು ಸಂಹರಿಸಿದ ಮೆದ್ದು ಉದ್ಧರಿಸೊ ಗೋವಿಂದ ನಂದನಕಂದ 2 ಅಕ್ಕೋ ಬೃಂದಾವನದಾನಂದ ಹೊಂಗೊಳಲಿಂದಾ ಇಕ್ಕೋ ಚೆಂದದ ಗಾನಾನಂದ ಕಿರುನಗೆಯಿಂದ ಕಕ್ಕುಲತೆಯ ಮದದಿಕ್ಕೆಗೆ ಸಿಲುಕದ ಠಕ್ಕುಗಾರ ಸೊಬಗಿಂದ ರಾಧೆಗೆ ಮುದ ವಿಕ್ಕಿ ಮಡುವ ಧುಮ್ಮಿಕ್ಕಿ ನರ್ತನಗೈದ 3 ವೈರಿ ಕಂಸಾರಿ ಶೌರಿ ಬಾ ಬಾರೋ ಪಾಂಡವ ಪಕ್ಷ ವಿಹಾರೀ ಶಿಶುಪಾಲ ಸಂಹಾರೀ ಭವ ಬಂಧನ ಪರಿಹಾರಿ ಶರಣರಿಗುಪಕಾರೀ ಇಭಕುಲಕೇಸರಿ ಘನ ಗಿರಿಧಾರೀ ಅಭಯಪ್ರದ ಹರಿ ಗೂಢಸಂಚಾರಿ ನಭಚರಹರಿ ಮಾಂಗಿರಿ ಸುವಿಹಾರೀ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾಟ್ಯಕಲಾವಿದ ಶಿವನೋ ಕೇಶವನೋ ನಾಟ್ಯಕೆ ನಲಿವನಾ ಭವನೋ ಮಾಧವನೋ ಪ ನಾಟ್ಯಾಪ್ಸರಗಣವೇಷ್ಟಿತನಿವನು ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ ಝಣ ಝಣ ಝಣರವ ರಣಿಪನಿವನು ಕಿಣಿ ಕಿಣಿ ಕಿಣಿರವ ಚೆಲ್ಲುವನವನು ಗಣ ಗಣ ನಾದದಿ ವರ್ತಿಪನಿವನು ಮಣಿಗಣನಾದದಿ ನರ್ತಿಪನವನು 1 ಮುರಳಿಯಗಾನವ ಪಾಡುವನಿವನು ನಿರುಪಮ ದಿವಿಜಾ ನರ್ತಕನವನು ಭರತನಾಟ್ಯ ಕಲಾ ಕೋವಿದನಿವನು [ವರ ನಾಟ್ಯ ನಟನಾ ನಿಪುಣನವನು] 2 ಭೇರಿನಗಾರೀ ತುತ್ತೂರಿ ಡಮರುಗ ಕರಿಮುಖ ಷಣ್ಮುಖಯುತ ಭಸಿತಾಂಗ ನಾರದ ತುಂಬುರ ವೀಣೆ ಮೃದಂಗ ಸಾರಗಾನಯುತ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್