ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ e್ಞÁನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ