ಪಂಚಮಿಯ ದಿನ
ವಿಭವ ನಮ್ಮ
ಶ್ರೀನಿವಾಸನ ಮಹಾತ್ಮವ
ಮಾನಿನಿ ರನ್ನೆ ನೀ ಪೇಳೆ ಭಕ್ತಾ-
ಧೀನದ ಚರಣದ ಲೀಲೆ
ಭಾನು ಉದಯದಲಿ ವೀಣಾದಿ ಸು-
ಗಾನ ವಾದ್ಯ ನಾನಾವಿಧ ರಭಸದಿ1
ಎತ್ತಲು ನೋಡಿದಡತ್ತ ಜನ-
ಮೊತ್ತವಿಲಾಸವಿದೆತ್ತ
ಚಿತ್ತದಿ ನಲಿನಲಿದಾಡಿ ತೋಷ-
ವೆತ್ತಿರುವನು ಒಟ್ಟುಗೂಡಿ
ಸುತ್ತುಮುತ್ತು ಒತ್ತೊತ್ತಿಲಿಹರು ವಿ-
ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2
ಚಾಮರ ಛತ್ರ ಸಿಗುರಿಯು ಜನ-
ಸ್ತೋಮ ಪತಾಕೆ ತೋರಣವು
ಹೇಮದ ಕಂಚುಕಿ ಈಟಿ ಗುಣ-
ಧಾಮನ ಬಿರುದುಗಳ್ ಕೋಟಿ
ಆ ಮಹಾಭೇರಿ ಪಟಹ ನಿಸ್ಸಾಳಕ
ಸಾಮಗಾನ ಸಾಮ್ರಾಜ್ಯವೋಲಿಹುದು3
ಬಾಲರು ವೃದ್ಧ ಯೌವನರು\ಜನ-
ಜಾಲವೆಲ್ಲರು ಕೂಡಿಹರು
ಲೋಲ ಸ್ರೀಮುಂದ್ರಾಂಕಿತದಿ ಬಹು ವಿ-
ಶಾಲ ದ್ವಾದಶನಾಮ ಮುದದಿ
ಆಲಯದೊಳಗಿಹ ಬಾಲಕಿಯರು ಸಹ
ಸಾಲಂಕೃತ ಸಮ್ಮೇಳದಿ ನಲಿವರು4
ಒಂದು ಭಾಗದಿ ವೇದಘೋಷ ಮ-
ತ್ತೊಂದು ಭಾಗದಿ ಜನಘೋಷ
ಇಂದಿನ ದಿನದತಿಚೋದ್ಯ ಏ-
ನೆಂದು ವರ್ಣಿಸುವದಸಾಧ್ಯ
ಚಂದಿರಮುಖಿ ಯಾರೆಂದೆನಗುಸುರೆಲೆ
ಮಂದರಧರ ಗೋವಿಂದನ ಮಹಿಮೆಯ5
ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ
ಪೇಳಲೇನದಾ ಮೂರ್ಲೋಕದೊಳಗೀ ವಿ-
ಶಾಲವ ನಾ ಕಾಣೆಪ.
ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ
ರಾಜೀವನಾಭನ ಪೂಜಾವಿನೋದದಿ
ರಾಜವದನೆ ವನಭೋಜನದಿಂದಿನ1
ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ
ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ
ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2
ನೂತನವೆಂದು ನೀ ಪೇಳುವಿ
ಚಂದಿರ ಮುಖಿ ಜನಸಂದಣಿಗಳು ಮಹಾ
ಮಂದಿ ಓಲೈಸುವರಿಂದು ಮುಕುಂದನ3
ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ.
ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ
ಕಾಣುವ ಯೋಗಭೋಗ1
ಎನಗತಿ ಮನವು ನಿನಗತಿ ಛಲವು
ಜನುಮಾಂತರ ಪುಣ್ಯವೈಸೆ ನೀ2
ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ
ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ.
ಅನವರತದಿಂದ ಬರುವ ಪುರುಷನಲ್ಲ
ಮೀನಕೇತನ ಶತರೂಪ ಕಾಣೆ1
ನೂತನ ಪುರುಷನಿವನ್ಯಾರೆಂದರಿಯೆನಮ್ಮಾ
ಶಾತಕುಂಭದ ಮಂಟಪವೇರಿ ಬರುವನಮ್ಮಾ2
ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ
ತರತರ ರತ್ನವರದ ಬಾಯೊಳಿರುವದಮ್ಮಾ3
ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ
ಪರಮ ಪುರುಷನಂತೆ ತೋರುವನು ಅಮ್ಮಾ4
ಬಾಲಾರ್ಕನಂತೆ ಮುಖ ಪ್ರಜ್ವಲಿಪುದು
ನೀಲಮಾಣಿಕ್ಯ ಕಾಂತಿಯ ಸೋಲಿಪುದು5
ತೋರಲರಿಯೆ
ಕಾಲಿಗೆರಗುವೆನು ಪೇಳಬೇಕು ಸಖಿಯೆ6
ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ
ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7
ವರರತ್ನಖಚಿತದಾಭರಣದಿಂದ ಮೆರೆವ
ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8
ವಲ್ಲಭೆಯರ ಸಹಿತುಲ್ಲಾಸದಿ ಬರುವ
ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9
ಬಲ್ಲಿದ ಪುರುಷನಿವನೆಲ್ಲಿಂದ ಬಂದ
ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10
ಊರ್ವಶಿ : ನೋಡು ನಿತ್ಯಾನಂದಕರನ
ಮೂಡಗಿರಿಯಿಂದೋಡಿ ಬಂದನ ನೋಡೆಪ.
ಛಪ್ಪನ್ನೈವತ್ತಾರು ದೇಶ
ಸರ್ಪಶೈಲ ರಾಜವಾಸ
ಚಪ್ಪರ ಶ್ರೀ ಶ್ರೀನಿವಾಸ1
ತಿರುಗುತ್ತಿಪ್ಪಾ ತಿರುಮಲೇಶ
ಶರಣ ರಾಮನ ಭಕ್ತಿಪಾಶ
ದುರುಳಿನಲಿ ನಿಂದಿರ್ಪಶ್ರೀಶ
ತರಿಸುವನು ಕಾಣಿಕೆ ವಿಲಾಸ2
ಪಟ್ಟದರಸನಾದ ದೇವ
ಸೃಷ್ಟಿಯಾಳುವಜಾನುಭಾವ
ದೃಷ್ಟಿಗೋಚರವಾಗಿ ಕಾಯ್ವ
ಇಷ್ಟವೆಲ್ಲವ ಸಲಿಸಿ ಕೊಡುವ 3
ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ
ವೃಂದ ನೆರಹಿ ವನಕೆ
ಅಂದಣವೇರಿ ಮುಕುಂದನೊಲವಿನಲಿ
ಕುಂದಣ ಮಂಟಪವೇರಿ ಮತ್ತೊಬ್ಬನು
ಸಂದರುಶನವಂ ನೀಡುತ ಯಿಬ್ಬರು
ಒಂದಾಗುತ್ತಾನಂದವ ಬೀರುತ್ತ 1
ಅಕ್ಕ ನೀ ನೋಡು ಬಹುಮಾನದಿ
ಸಿಕ್ಕಿದಿ ಬಿರುದು ಪೊತ್ತಾ
ಉಕ್ಕುವದತಿ ತೋಷ
ಸ್ತುತಿಪಾಠಕ ಜನಗಳ
ಮಿಕ್ಕಿ ನೊಡುವ ನೋಟಕೆ ಮನಸಿನೊಳು
ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2
ಪವಿತ್ರ ನಿಶಾನಿಧಾರಣಾ
ಪವಿತ್ರಗೈಯುವ ಕಾರಣ
ಮಿತ್ರಮಂಡಳವನು ಮೀರಿ ಪೊಳೆವುತಿಹ
ರತ್ನಖಚಿತ ಮಂಟಪದಲಿ ಮಂಡಿಸಿ
ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ
ಕೀರ್ತಿಯ ಧರಿಸಿ ಜಗತ್ರಯಪಾವನ 3
ನಿಸ್ಸಾಳ ಪಟಹ ಭೂರಿ
ಜನ ಜಾಲ ಕೂಡಿರುವ
ಮೇಳವಿಸುತ್ತನುಕೂಲಿಸಿ ಬಹು ಬಿರು
ದಾಳಿಗೆ ಸಂಭ್ರಮದೇಳಿಗೆಯಿಂದಲಿ
ಕೋಲು ಪಿಡಿದು ಓಹೋಯೆಂಬಂಥ ವಿ-
ಶಾಲ ಭಕ್ತರ ಮೇಲು ಸಂತೋಷದಿ 4
ದೇಶದೇಶದ ಜನರು ನಾನಾ ವಿಧ
&ಟಿ