ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಕ್ಕೆ ಕಡೆಗಾಲ ಬಂದಿತೋ ಶಿವ ಶಿವ ಇನ್ನೇನಿನ್ನೇನು ಬೋಣನ ಸಗದ್ದೆಯೊಳಿರುತಿದೆ ನಾಡಿನಲಿನ್ನೇನಿನ್ನೇನು ಪ ಬಂತು ಇನ್ನೇನಿನ್ನೇನು ಮನೆಯೊಳು ಸಿಕ್ಕಿದೆ ಜಾರಲಿ ಕಣಿಯಿಲ್ಲವಿನ್ನೇನಿನ್ನೇನು ದನ ಕರುಗಳ ನೊಂದ ನುಳಿಸದೆ ವೈದ್ಯರು ಇನ್ನೇನಿನ್ನೇನು ಜನರೆಲ್ಲ ಕೈಸೆರೆಯನು ಸಿಕ್ಕಿ ಹೋಯಿತು ಇನ್ನೇನಿನ್ನೇನು 1 ಅಂಗಳದೊಳು ಪಾದವಿಕ್ಕೀತು ಜನರಿಗೆ ಇನ್ನೇನಿನ್ನೇನು ಭಂಗಾರವ ತನ್ನಿರೆಂದು ಝಂಕಿಸಿದರು ಇನ್ನೇನಿನ್ನೇನು ಭಂಗಪಡುವ ಕಾಲಬಂತು ಮಾನವರಿಗೆ ಇನ್ನೇನಿನ್ನೇನು ಅಂಗನೆಯ ಹಿಡಿದೆಳೆದು ಸುಲಿದರು ಇನ್ನೇನಿನ್ನೇನು2 ಉಡಿಗೆ ತೊಡಿಗೆಯನ್ನು ಸೆಳೆದರು ಸತಿಯರ ಇನ್ನೇನಿನ್ನೇನು ಕಡಿದರು ಕೆಲರ ತೋಳ್ ತೊಡೆಗಳ ಶಿರಗಳ ಇನ್ನೇನಿನ್ನೇನು ಕಡಲಿಟ್ಟು ಹರಿದುದು ರಕ್ತ ಪ್ರವಾಹವು ಇನ್ನೇನಿನ್ನೇನು ಕಡುಪಿಂದೆ ಕಾಲ್‍ಕೈಗೆ ಮುರವಾಳವಿಕ್ಕಿದರಿನ್ನೇನಿನ್ನೇನು 3 ಸುಲಿದರು ಚಿನ್ನ ಚಿಗುರು ಬೆಳ್ಳಿ ವಸ್ತುವ ನಿನ್ನೇನಿನ್ನೇನು ಹೊಳಲಿಗೆ ಬೆಂಕಿಯ ನಿಕ್ಕಿದರಲ್ಲಲ್ಲಿ ಇನ್ನೇನಿನ್ನೇನು ಉಳಿದೆನು ಇನ್ನೇನಿನ್ನೇನು ಜಲಜಾಕ್ಷ ನಿನ್ನಯ ಕರುಣ ಕಟಾಕ್ಷದಲಿನ್ನೇನಿನ್ನೇನು 4 ಹಿಂದಂಬರೀಶ ಗಜೇಂದ್ರನ ಕಾಯ್ದಂತೆ ಇನ್ನೇನಿನ್ನೇನು ಇಂದಿನ ದುರಿತವ ಪರಿಹರಿಸಿದೆ ನೀನು ಇನ್ನೇನಿನ್ನೇನು ಬಂಧಿಸಿ ಹೊಡೆದ ಗೋಕುಲವನು ತಂದಿತ್ತೆ ಇನ್ನೇನಿನ್ನೇನು ಮಂದ ಮಾರುತ ನಣುಗನ ಕೋಣೆ ಲಕ್ಷ್ಮೀಶ ಇನ್ನೇನಿನ್ನೇನು 5
--------------
ಕವಿ ಪರಮದೇವದಾಸರು