ಮಂಗಳ ಪದಗಳು
ಜಯದೇವ ಜಯದೇವ ಜಯ ಸುಬ್ರಹ್ಮಣ್ಯ
ವರೇಣ್ಯ ಪ.
ಅರಳಿದ ಕಮಲಸನ್ನಿಭಶುಭಚರಣ-
ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ
ಉರುಶಕ್ತಿಕುಕ್ಕುಟಾಭಯವಜ್ರಹಸ್ತ
ಶರಣಾಗತಜನದ ರಿತವಿಧ್ವಸ್ತ1
ಬಲಮುರಿಶಂಖದಂತಿಹ ಚೆಲ್ವಗ್ರೀವ
ಸುಲಲಿತಮಾಣಿಕ್ಯಹಾರದಿಂ ಪೊಳೆವ
ನಲಿವ ಕರ್ಣಕುಂಡಲಗಳ ಶೋಭ
ಜ್ವಲಿತಕಿರೀಟಮಸ್ತಕ ಸೂರ್ಯಾಭ2
ಈ ಕ್ಷಿತಿಯೊಳಗೆ ಪಾವಂಜೇತಿ ನಾಮ
ಸುಕ್ಷೇತ್ರವಾಸ ಸುಜನಜನಪ್ರೇಮ
ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ
ರಾಕ್ಷಸಾರಣ್ಯದಹನವೀತಿಹೋತ್ರ 3