ಕಂಡಳು ಶ್ರೀ ಹರಿಯ ಶತಮಾ-
ರ್ತಾಂಡ ತೇಜೋನಿಧಿಯ ಪ.
ಪುಂಡರೀಕಾಂಬಕನ ಪೂರ್ಣಾ-
ಖಂಡ ಜಗನ್ಮಯನ ಅ.ಪ.
ಶಂಖಚಕ್ರಾಂಕಿತನ ಧ್ವಜವ-
ಜ್ರಾಂಕುಶಪದಯುಗನ
ಶಂಕರಹಿತಕರನ ಕೌಸ್ತುಭಾ-
ಲಂಕೃತಕಂಧರನ 1
ಮಕರಕುಂಡಲಧರನ ಸಜ್ಜನ
ನಿಕರೇಷ್ಟಪ್ರದನ
ಪ್ರಕೃತಿನಿಯಾಮಕನ ಸತ್ಯಾ-
ತ್ಮಕ ಪೀತಾಂಬರನ 2
ಅಕ್ಷಿಗೋಚರನ ಭಕ್ತರ
ಪಕ್ಷದೊಳಿರುತಿಹನ
ಪಕ್ಷೀಂದ್ರವಾಹನನ ಶ್ರೀಹರಿ
ಲಕ್ಷ್ಮೀನಾರಾಯಣನ 3