ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಿಸಯ್ಯ ಬೆಳಕು ದೇವ ತೋರಿಸಯ್ಯ ಬೆಳಕು ದಾರಿ ತಪ್ಪಿ ದೂರ ಬಂದಿಹೆನು ಪ ತಿಮಿರ ಮಧ್ಯದಿ ನಿಂತಿಹೆನೊಅ.ಪ ಚತುರನೆಂದು ತಿಳಿದು ಬಲುದಿನ ಸ್ತುತಿಸಲಿಲ್ಲ ನಿನ್ನ ಪತಿತನೆಂಬ ಭಯ ತೊರೆದು ಧೈರ್ಯದಲಿ ಕ್ಷಿತಿ ಭೋಗಗಳಿಗೆ ಮತಿಗೊಟ್ಟೆನು ನಾ 1 ಬೇಡುವುದಿಲ್ಲವೊ ನಾ ಎನ್ನ ಕೂಡಿ ಪೋಗಲೆಂದು ಹೂಡು ಎನ್ನಯ ಹೆಜ್ಜೆಯ ಸನ್ಮಾರ್ಗದಿ ಕಾಡು ಮೇಡುಗಳ ದಾಟಿ ಬರುವೆನೊ 2 ಕೂತಿರುವೆನು ನಾನು ತನುಮನ ಸೋತಿರುವುದು ಬಹಳ ಈ ತರಹದಿ ಬದುಕಿರುವುದು ನಿನ್ನಯ ಪ್ರೀತಿಯಿಂದಲೆ ಜ್ಯೋತಿರ್ಮಯನೆ 3 ಎತ್ತಲು ಕಾಣದಿದೆ ಚಿತ್ತವ ಬೆಳಗಿಸೊ ಮತ್ತೆ ನೋಡುವೆನು ಉತ್ತಮ ದೃಶ್ಯವ ಭಕುತರ ಪ್ರಸನ್ನನೆ 4
--------------
ವಿದ್ಯಾಪ್ರಸನ್ನತೀರ್ಥರು
ಶ್ರೀಪರಿಕಲ್ ನರಸಿಂಹ ಸ್ತೋತ್ರ ನರಸಿಂಹ ಪರಿಕಲ್ ನರಸಿಂಹ | ಗೌರೀಶಾದ್ಯಮರರಿಗೀಶ | ಆಹ | ಅಮಿತ ಪೌರುಷ ಸ್ವಜನತೇಷ್ಟಪ್ರದನೆ ನಮೋ ಅಮಲೂರು ಗುಣಗಣಾರ್ಣವ ಜಯ ಜಯತು ಪ ಸರ್ವೋರು ನಿಜ ಶಕ್ತಿಮಂತ | ಸದಾ ಸರ್ವತ್ರವ್ಯಾಪ್ತ ಅನಂತ | ಜಗತ್ ಸೃಷ್ಟ್ಯಾದಿಗಳಿಗೇ ನೀ ಕರ್ತ | ವಿಷ್ಣು ಸರ್ವತೋಮುಖ ಮೃತ್ಯುಹಂತ || ಆಹ || ಶ್ರೋತವ್ಯಮಂತವ್ಯ ಧ್ಯಾತವ್ಯವಿಭು ನೀನು ವ್ಯಕ್ತನಾದಿಯೋ ಸ್ತಂಭದಲಿ ಭೃತ್ಯಗೋಲಿದು 1 ಮೂಲಾಧಾರಾರಭ್ಯಲೂಧ್ರ್ವ | ವಾಗಿ ತಲೆಯ ಪರ್ಯಂತದಿ ನಿಲುವ | ಬಲು ಸುಲಲಿತಸ್ತಂಭದಂತಿರುವ | ನಾಡಿ ಯಲ್ಲಿ ಉರದೇಶದಿ ಪೊಳೆವ ||ಆಹ|| ಜ್ಯೋತಿರ್ಮಯನೆ ಪಾಪತಿಮಿರಾರ್ಕ ನೀ ಎನ್ನ ಪ್ರತಿಕ್ಷಣ ಪಾಲಿಸೋ ಶ್ರೀಲಕ್ಷ್ಮೀರಮಣ 2 ವಿಧಿ ಭವೇಂದ್ರಾದಿಗಳಿಂದ | ಪ್ರಹ ಲ್ಲಾದ ಶ್ರೀವ್ಯಾಸಮುನೀಂದ್ರ | ಮಂತ್ರಾ ಸದ್ಮಸ್ಥ ಶ್ರೀ ರಾಘವೇಂದ್ರ | ದಾಸ ವೃಂದ ಸುಜನರುಗಳಿಂದ ||ಆಹ || ಸೇವಿತ ಪೂಜಿತ ಸ್ತುತ್ಯ ಸಂಭಾವಿತ ||ಪಾಲಿಸೋ.......... 3
--------------
ಪ್ರಸನ್ನ ಶ್ರೀನಿವಾಸದಾಸರು