ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ವರ ಗುರುಮೂರ್ತಿ ಜಯ ಜಯವೆಂದು ಬೆಳಗುವೆ ಬೆಳಗುವೆ ಮನದಾರ್ತಿ ಧ್ರುವ ಜ್ಯೋತಿಗೆ ಸ್ವಜ್ಯೋತಿ ಘನಪರಂಜ್ಯೋತಿ ನೇತಿ ನೇತಿಯೆಂಬುದು ನೋಡಲು ಘನಶ್ರುತಿ ಶ್ರುತಿಸ್ಮøತಿಗೆ ತಿಳಿಯ ನೀ ಅಪ್ರತಿ ಅತಿಸೂಕ್ಷ್ಮ ನಿನ್ನರಿವುದು ಸದ್ಗುರು ದಯಕೀರ್ತಿ 1 ರಾಜಿಸುತಿಹ ನಿಜ ವಿಶ್ವದ ನೀ ಬೀಜ ರಾಜತೇಜೋನಿಧಿ ಸಹಜೆ ಸಹಜ ಅಜ ಸುರವಂದ್ಯ ಸುಜನರಾತ್ಮದ ನೀಗ್ರೂಜ ರಾಜಮಹಾರಾಜ ಸದ್ಗುರು ಸುಭೋಜ 2 ಮಗುಟ ಸ್ವಾನುಭವಕೆ ನೀಟ ಜ್ಞಾನರಹಿತ ಕೂಟ ಘನ ದಯನೋಟ ಅನುವಾಗಿದೋರಿತು ನೀಟಕೆ ನಿಜನೀಟ ದೀನಮಹಿಪತಿಸ್ವಾಮಿ ನೀನೆ ಘನಪ್ರಗಟ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು