ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

351ಆದಿತ್ಯದೇವ ತ್ವತ್ಪಾದಯುಗಳಕಭಿ ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ ವ್ಯಾಧಿಯ ಕಳೆದು ಸುಖವೀಯೊ 1 352ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನೊ ಸ ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ ಹ್ಮಜ್ಞಾನ ಭಕುತಿ ಕರುಣೀಸೊ 2 353 ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ ನಾರಾಧನೆಯನಿತ್ತು ಕರುಣೀಸೊ 3 353 ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ ವಾಹನನ ಸ್ಮರಣೆಯನು ಕರುಣೀಸೊ 4 354ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ ಹಾರ ಗೈಸೆನ್ನ ಭವತಾಪ 5 355 ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ ಹೃತ್ತಿಮಿರ ಕಳೆದು ಸಂತೈಸೊ 6 356 ಕೋಲ ಭೂನಂದನ ಪ್ರವಾಳ ಸಮವರ್ಣ ಕರ ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ ಮೌಳಿ ನೀಯೆನ್ನ 7 357 ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ ಅನುದಿನ 8 358 ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ ಕಾಮಿತಾರ್ಥವನೆ ಕರುಣೀಸೊ 9 359 ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ ಕ್ಷುಧೆಯ ಸಂಹರಿಸಿ ಸುಜ್ಞಾನ | ಸುಜ್ಞಾನ ಸದ್ಭಕ್ತಿ ಸುಧೆಯ ಪಾನವನೆ ಕರುಣೀಸೊ 10 360 ಚಂದ್ರನಂದನ ಸತತ ವಂದಿಸುವೆ ಮನ್ಮನದ ಮಮದೈವ ಸರ್ವ ಗೋ ವಿಂದನಹುದೆಂದು ತಿಳಿಸಯ್ಯಾ 11 361 ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ ದ್ಧಾರಗೈಸೆನ್ನ ಭವದಿಂದ 12 362 ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು ರ್ಮತಿಯ ಪರಿಹರಿಸಿ ಸುಜ್ಞಾನ ಸುಜ್ಞಾನವಿತ್ತು ಶ್ರೀ ಪತಿಯ ತೋರೆನ್ನ ಮನದಲ್ಲಿ 13 363 ಸುರರಾಜಗುರುವೆ ತ್ವಚ್ಚರಣಾರವಿಂದಗಳಿ ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ ಣರ ಸಂತೈಸೋ ದಯದಿಂದ 14 364 ತಾರಾರಮಣನೆ ಮದ್ಬಾರ ನಿನ್ನದೊ ಮಹೋ ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ ವಾರಿಸಿ ತೋರೊ ತವರೂಪ 15 365 ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ ಪ್ರಕ್ರಿಯವ ತಿಳಿಸೊ ಪ್ರತಿದೀನ 16 366 ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ ಶ್ರವಣ ಸುಖವೆನಗೆ ಕರುಣೀಸೊ | 17 367 ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ ಲಗದಲ್ಲಿ ಬುದ್ಧಿಯಿರಲೆಂದು 18 368 ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ ತ್ವರಿತದಿಂದಿಳಿಸಿ ಪೊರೆಯೆಂದು 19 369 ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ ಸಮಯದಿ ಶ್ರೀ ಲಕ್ಷ್ಮೀನಾ ರಾಯಣನ ಸ್ಮರಣೆ ಕರುಣೀಸೊ 20 370 ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ ಹರಿಮೂರ್ತಿ ಕೀರ್ತನೆಗೆ ಳೊದಗಲೆನಗೆಂದು ಬಿನ್ನೈಪೆ 21 371ಅಹಿಕ ಪಾರತ್ರಿಕದಿ ನರಹರಿಯದಾಸರ ನವ ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು ಅಹಿತರೆಂದೆನುತ ಕೆಡಬೇಡಿ22 372 ಜಗನ್ನಾಥವಿಠ್ಠಲನ ಬದಿಗರಿವರಹುದೆಂದು ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೋರು 23
--------------
ಜಗನ್ನಾಥದಾಸರು
ಕಾಮಪಿತ ಪದಸರಸಿರುಹ ಭೃಂಗ ಭಂಗ ಪ ದಾಕ್ಷಾಯಿಣೀಪತೇ ಬಾಗಿ ವಿಜ್ಞಾಪಿಸುವೆ ದಾಕ್ಷಿಣ್ಯ ಲವಲೇಶವಿಲ್ಲವೊ ನನಗೆ ಸಾಕ್ಷಿಯೇಸು ಕೊಡಲಿದಕೆ ಬ್ರಹ್ಮನ ಶಿರ ತರಿದೆ ಸಾಕ್ಷಾತು ಪಿತನೆಂಬುದ ನೀ ಲಕ್ಷ್ಯವಿಡದೆ 1 ಸ್ಮರ ನಿನ್ನ ಕಿರಿತಂದೆ ಅಕ್ಷಿತೆರದೀಕ್ಷಿಸವನ ಬಿಡದೆ ದಹಿಸಿನಿಂದೆ ದಕ್ಷ ನಿನಗೇನಾಗಬೇಕು ತಿಳಿದು ನೋಡೊ ತಕ್ಷಣದಲವನನೆತ್ತಿ ಹರಿಗಡಿದೆ ನೀನು 2 ಪಾಪಯೇಸು ಮಾಡಿದರೆಯು ಭಯವೇನು ನಿನಗೆ ಶ್ರೀಪತಿ ರಂಗೇಶವಿಠಲಗೆ ಸರ್ವವರ್ಪಿಸಿ ತಾಪತ್ರಯ ದೂರ ವಿರಾಗಿಯಾಗಿ ಮನಸ್ಸು ನಿ- ಪರಿ ಮನಸ ಕೊಡು ಗುರುವೆ 3
--------------
ರಂಗೇಶವಿಠಲದಾಸರು
ಜಾಹ್ನವಿ ಜಗತ್ರಯ ಪಾವನಿ ಪ್ರಣತಕಾಮದೆ ಪದ್ಮಜಾಂಡ ಸಂಭೂತೆ ಪ ಸೃಷ್ಟೀಶ ಪದಜಾತೆ ವಿಶ್ವಮಂಗಳ ಮಹೋ ತ್ಕøಷ್ಟ ತೀರ್ಥಗಳೊಳುತ್ತಮಳೆನಿಸುವೇ ಕಷ್ಟವರ್ಜಿತವೆನಿಪ ತ್ರಿಪಥಗಾಮಿನಿ ದಯಾ ದೃಷ್ಟಿಯಿಂದಲಿ ನೋಡು ಪ್ರತಿದಿನದಿ ಎನ್ನಾ 1 ಕರ್ಮ ಸಾಕ್ಷಿಯೆನಿಸುತಿಹ ಅರ್ಕದೇವನು ಬಂದ ಸಮಯದಲ್ಲಿ ಶರ್ಕರಾಹ್ವರು ಸ್ನಾನಗೈಯೆ ದುರಿತಗಳು ಸಂ ಪರ್ಕವಾಗದ ತೆರದಿ ಸಂತೈಪೆ ದಯದಿ 2 ಕಾರುಣಿಕ ಬಹಿರಾವರಣದಿಂದ ನೀ ಪೊರಟು ವಾರಾಹಿಯೊಡಗೂಡಿ ಭಕ್ತಜನರ ಪ್ರಾರಬ್ಧ ಕರ್ಮಗಳನುಣಿಸಿ ಮುಕ್ತರನ ಮಾಳ್ಪೆ ದೂರಗೈಸುವೆ ಸಂಚಿತಾಗಾಮಿಗಳನೂ 3 ನಂದಿನೀ ನಳಿನಿ ಸುಸೀತಾ ಮಲಾಪಹರ ಳೆಂದ ಮಾತ್ರದಿ ಪುನೀತರನು ಮಾಳ್ಪೆ ಸಂದರುಶನ ಸ್ವರುಶನ ಸ್ನಾನಗಳ ಫಲ ಪು ರಂದರಾರ್ಯರೆ ಬಲ್ಲರಲ್ಪರು ಅರಿಯರು 4 ಮಾತೆ ವಿಜ್ಞಾಪಿಸುವೆ ಬಿನ್ನಪವ ಕೇಳು ಸಂ ಪ್ರೀತಿಯಿಂದಲಿ ಕರುಣಿಸೆನಗೆ ಇದನೆ ಶ್ರೋತವ್ಯ ವಕ್ತವ್ಯ ಮಂತವ್ಯ ಸ್ತವ್ಯ | ಜಗ ನ್ನಾಥ ವಿಠ್ಠಲನೊಬ್ಬನೆಂದು ತಿಳಿವಂತೇ5
--------------
ಜಗನ್ನಾಥದಾಸರು
ಶ್ರೀ ಶವಿಠ್ಠಲ ನೀನೆ ಸಂತೈಪುದು ಕ್ಲೇಶನಾಶನ ನಿನ್ನದಾಸರವನೆಂದರಿತು ಪ ಭೂದೇವ ಜನ್ಮವಿತ್ತವಗೆ ನೀ ದಯದಿಂದ ಸಾಧು ಜನಸಂಗ ಸುಜ್ಞಾನ ಭಕುತಿ ಸಾದರದಿ ನಿನ್ನ ತುತಿಸುವ ಭಾಗ್ಯ ಕರುಣಿಸಿದೆ ಕೃ ಪೋದಧಿಯೆ ನಿನಗೆ ನಾ ನಮಿಪೆ ಬಹು ಬಗೆಯಿಂದ 1 ಯೋಗ್ಯತೆಗಳನು ಬಲ್ಲೆ ಬಹು ಜೀವರೊಳಗಿದ್ದು ಅಜ್ಞಾನಿ ನೀನಲ್ಲ ಸರ್ವಜ್ಞನೆಂದು ವಿಜ್ಞಾಪಿಸುವೆ ನಿರುತ ವಿನಯದಿಂದಲಿ ಪರಮ ಭಾಗ್ಯವಂತನೆ ನಿನ್ನ ಪಾದಕಮಲಕೆ ಬಿಡದೆ 2 ಸಕಲ ಲೋಕಗಳ ನಾಯಕ ಇವಗೆ ಹೇಯ ಲೌ ಕಿಕ ಮಾರ್ಗವನೆ ಬಿಡಿಸಿ ಸತ್ಯದಲ್ಲಿ ಪ್ರಕಟವನೆ ಗೈಸು ಸದ್ಧರ್ಮ ಕರ್ಮಗಳ ದೇ ವಕಿತನಯ ಶ್ರೀ ಜಗನ್ನಾಥವಿಠ್ಠಲ ಒಲಿದು 3
--------------
ಜಗನ್ನಾಥದಾಸರು
ಶ್ರೀ ಕೇಶವ ತೀರ್ಥ ಸ್ತೋತ್ರ107ಸೂರಿಪ್ರಾಪ್ಯ ಘೃಣಿಶೌರಿಶ್ರೀರಮಾಪತಿ ಪ್ರಿಯರುಸೂರಿವರ ಬ್ರಹ್ಮಣ್ಯ ತೀರ್ಥ ಆರ್ಯರ ಸುಸರೋಜಕರಜಾತ ಜಗತ್ಖ್ಯಾತ ವ್ಯಾಸರಾಜಾರ್ಯರಹಸ್ತಸುವ್ರತ ನಿಜೋತ್ಪನ್ನ ಕೇಶವ ತೀರ್ಥಾರ್ಯರ್ಗೆ ವಂದೇ ಪಮುಖ್ಯಪ್ರಾಣಪವಮಾನ ಸುರಮಾತರೀಶ್ವಗುರುಪ್ರದ್ಯುಮ್ನ ಅನಿರುದ್ಧ ಪುರುಷ ನರಸಿಂಹ ಶ್ರೀಶಪ್ರಜ್ಯೋತಿರ್ಮಯ ಉಗ್ರವೀರ ವಿಶ್ವವ್ಯಾಪಿ ವಿಷ್ಣುವುಮೃತ್ಯು ಮೃತ್ಯು ಸ್ತಂಭದಿಂ ಬಂದು ಪ್ರಹ್ಲಾದನ್ನ ಪೊರೆದ 1ನರಸಿಂಹನಾಜೆÕಯಿಂ ಪ್ರಹ್ಲಾದ ಸಿಂಹಾಸನವೇರೆನೆರೆದಿದ್ದ ಸುಮನಸರು ಹರಿಭಕ್ತ ಜನರುಸೂರಿಗಳುಆ ವೈಭವ ಕಂಡುಕೇಳಿಜಯಪರಾಕ್ಪರಾಕೆಂಬ ದಿವ್ಯಾನುಭವಜ್ಞಾನಿಕೇಶವ ತೀರ್ಥ2ಹಿಂದಿನ ಪ್ರಹ್ಲಾದಇಂದುವ್ಯಾಸಮುನಿರಾಜರಾಗಿದುಸ್ತರ್ಕ ಧ್ವಂಸಕರ ತರ್ಕತಾಂಡವ ಬೋಧಿಸಿಹಿತಕರ ನ್ಯಾಯ ಪೀಯೂಷವ ಉಣಿಸಿ ಆಹ್ಲಾದಚಂದ್ರಿಕಾಸುಖ ನೀಡಿ ಯತ್ಯಾಶ್ರಮ ಇತ್ತರಿವರ್ಗೆ 3ಶ್ರೀವ್ಯಾಸರಾಯರು ಅನುಗ್ರಹಿಸಿ ಕೇಶವ ತೀರ್ಥದಿವ್ಯ ನಾಮಾಂಕಿತವ ಪ್ರಣವಾದಿ ಮಂತ್ರ ಉಪದೇಶನಿವ್ರ್ಯಾಜ ನಿಶ್ಚಲ ಭಕ್ತಿಮಾನ್ ವಿನಯಸಂಪನ್ನ ಈಶಿಷ್ಯನಿಗೆ ಕೊಟ್ಟದ್ದು ಸಜ್ಜನರು ಹೊಗಳಿದರು 4ಶ್ರೀರಂಗದಲಿ ಉತ್ತರಾರಣ್ಯ ಬೀದಿಯಲ್ಲಿಹಶ್ರೀ ಕೃಷ್ಣಮಂದಿರದಿ ಶ್ರೀವ್ಯಾಸರಾಯ ಮಠದಿಚಾರುತರ ಚತುರ್ವಿಂಶತ್ ವಿಷ್ಣು ಮೂರ್ತಿಗಳುಂಟುತತ್ರಗೋಲಕ ಕ್ರಮದಿ ಶ್ರೀಹರಿಯ ಚಿಂತಿಪರು 5ಬ್ರಹ್ಮ ಗಾಯತ್ರಿ ಮನು ಇಪ್ಪತ್ತು ನಾಲ್ಕಕ್ಷರದಲಿತಂ ಆದಿ ಯಾತ್ ಅಂತ ಒಂದೊಂದರಲಿ ಒಂದುಹರಿಯಅಮಲ ಸುಪೂರ್ಣ ಕೇಶವಾದಿ ಕೃಷ್ಣಾಂತರೂಪಆ ಮೊದಲು ತಂ ಅಲ್ಲಿ ತಾರಕೇಶವನು ಧ್ಯಾತವ್ಯ 6ಬಲದಕೆಳಗಿನ ಕರದಿಪದ್ಮ ಮೇಲೆ ಶಂಖಜ್ವಲಿಪ ಚಕ್ರವು ಮೇಲಿನ ಎಡದ ಹಸ್ತದಲ್ಲಿಕೆಳಗಿನ ಎಡಕರದಿ ಗದೆಯ ಹಿಡಿದಿಹಜಲಜಸಂಭವ ಭವಾದ್ಯರ ಸ್ವಾಮಿ ಕೇಶವನು 7ದಶಪ್ರಮತಿ ಸರಸೀರುಹನಾಭ ನರಹರಿಅಸಮಮಾಧವಅಕ್ಷೋಭ್ಯ ಜಯವಿದ್ಯಾಧಿರಾಜಅಸಚ್ಛಾಸ್ತ್ರಗಿರಿಕುಲಿಶ ರಾಜೇಂದ್ರ ಜಯಧ್ವಜಶ್ರೀಶವಶಿ ಪುರುಷೋತ್ತಮ ಬ್ರಹ್ಮಣ್ಯ ವ್ಯಾಸತೀರ್ಥ 8ಹಂಸವಿಧಿ ಸನಕಾದಿಗಳಾರಭ್ಯ ಸನಾತನಸುಶೀಲ ಈಗುರುಪರಂಪರೆಯಲಿ ವ್ಯಾಸಮುನಿಸರೋಜ ಕರಜಾತ ಕೇಶವ ತೀರ್ಥರು ಹೀಗೆಕೇಶವನ್ನ ಧ್ಯಾನಿಸಿ ಒಲಿಸಿ ಕೊಂಡದ್ದು ಸಹಜ 9ಹರಿಪ್ರೀತಿ ಸಮರ್ಪಕ ಯತ್ಯಾಶ್ರಮ ಧರ್ಮಗಳಚರಿಸುತಗುರುಸೇವಾರತರಾಗಿ ಇರುತಿಹಬರುವ ಶಿಷ್ಯರಿಗೆ ಸೌಲಭ್ಯ ವಾತ್ಸಲ್ಯ ನೀಡುತಸೇರಿದರು ಪರಮತಿ ವೇಲೂರೆಂಬ ಕ್ಷೇತ್ರವನ್ನು 10ಶಲ್ಯ ರಾಜನ್ನ ಜ್ಞಾಪಿಸುವ ಶುಕವನ ಕ್ಷೇತ್ರದಿಂಒಳ್ಳೆಯ ರಸ್ತೆ ಹದಿನೈದು ಕ್ರೋಶ ದೂರದಿ ಇಹುದುಪ್ರಹ್ಲಾದ ವರದ ನಾರಸಿಂಹ ನಾಮಗಿರಿ ದೇವಿಬಲಜ್ಞಾನರೂಪ ಮಾರುತಿ ಇರುವ ನಾಮಕಲ್ಲು 11ನಾಮಶೈಲದಿಂದ ರಂಗ ತಾನೇ ತೋರಿದ ವೇಂಕಟರಮಣ ಪಶುಪತಿಕ್ಷೇತ್ರ ಕರೂರಿಗೆ ಹೋಗುವರಮಣೀಯಮಾರ್ಗಮಧ್ಯದಲ್ಲಿಯೇ ಇರುತಿಹವುಪರಮತಿ ವೇಲೂರು ಸುಪುಣ್ಯ ಕಾವೇರಿಯು 12ಸರ್ವಸುಗುಣಾರ್ಣವನುಅನಘಸರ್ವೋತ್ತಮನುಸರ್ವಕರ್ತಾಗಮೋದಿತನು ಜಿಜ್ಞಾಸ ಜನ್ಯ ಜ್ಞಾನಸಂವೃದ್ಧಿ ಸಾಧನಾನುಕೂಲ ಚತುರ್ವೇದಿ ಮಂಗಳದಿವ್ಯ ಪರಮತಿಯು ಅಲ್ಲಿ ಲೌಕೀಕರೇ ತುಂಬ 13ಸಪರಮತಿ ಸಮೀಪದಲ್ಲೆ ಚನ್ನಕೇಶವ ವೇಲಿಪುರವುಂಟು ಅದನ್ನ ವೇಲೂರೆಂದು ಹೇಳುವರುಪರಮತಿ ವೇಲೂರು ಕಾವೇರಿ ಪೋಷಿತವು ತೀರಪರಮಭಾಗವತಋಷಿ ಸಂಚಾರ ವಾಸಸ್ಥಾನ14ರಸಪೂರಿತ ಮಾವು ತೆಂಗು ಕದಲೀಫಲವೃಕ್ಷಬಿಸಜಮಲ್ಲಿಗೆ ಜಾಜಿಕುಸುಮಪರಿಮಳವುಹಂಸ ಪಾರಾವತ ತಿತ್ತರಾಶುಕ ಇಂಥಾ ಸುಪಕ್ಷಿಶ್ರೀಶನಂಘ್ರಿ ಸಂಬಂಧಿ ವರಜಾಯುಕ್ ಕಾವೇರೀ ಸರಿತ 15ಶ್ರೀಮನೋರಮ ಕೇಶವನ್ನ ಆರಾಧಿಸಿ ಧ್ಯಾನಿಸಲುಈ ಮನೋಹರ ಶಾಂತ ಸುಪವಿತ್ರ ಕ್ಷೇತ್ರವೆಂದುತಮ್ಮಯ ಬಾಹ್ಯ ಚಟುವಟಿಕೆಗಳ ನಿರೋಧಿಸಿಸಮೀರಸ್ಥ ಶ್ರೀಹರಿಯ ಧ್ಯಾನಾದಿರತರಾದರು 16ಯುಕ್ತಕಾಲದಿ ಈ ಸಂನ್ಯಾಸರತ್ನ ಕೇಶವಾರ್ಯರುಭಕ್ತಿವೈರಾಗ್ಯ ಯುಕ್ ಜ್ಞಾನ ಸಂಪನ್ನ ಶ್ರೀಹರಿಯಚಿಂತಿಸುತ ತ್ರಿಧಾಮನ ಪುರವನ್ನ ಯೈದಿದರುವೃಂದಾವನದಲ್ಲಿ ಒಂದಂಶದಲಿ ಇರುತಿಹರು 17ಕಾಲಧೀರ್ಘದಲಿ ಗ್ರಾಮಜನ ಬದಲಾವಣೆಯಿಂಎಲ್ಲಿ ವೃಂದಾವನ ಸ್ಥಾನ ಇದೆ ಎಂದು ಸರಿಯಾಗಿಹೇಳುವವರು ಸುಲಭದಿ ದೊರಕುವುದು ಶ್ರಮತಿಳಿದವರ ಸಹಾಯದಿಂ ಗುರುದಯದಿ ಸಾಧ್ಯ 18ಸದಾಪಾಣಿ ಭೀಮಸೇನ ಆರಾಧ್ಯ ಶ್ರೀಕೃಷ್ಣನು ಮತ್ತುಪದ್ಮಾಲಯಾಪತಿ ಪುಂಡರೀಕಾಕ್ಷನ್ನು ಶ್ರೀವಿಶ್ವನ್ನುಮಧ್ವಸ್ಥ ಪರಮಾತ್ಮನ್ನು ಸ್ಮರಿಸಿ ವೃಂದಾವನವಸಂದರ್ಶನ ಮಾಡಿ ಸೇವಾ ಸ್ವಗುರೂಪದೇಶವಿಧಿ19ಸ್ಮರಣ ದರ್ಶನ ಪ್ರದಕ್ಷಿಣ ನಮನ ಕೀರ್ತನಶಾಸ್ತ್ರಾಧ್ಯಯನ ಪ್ರವಚನ ಭಕ್ತಿಯಿಂದಲಿ ಪೂಜಾಪರಿಶುದ್ಧ ನೈವೇದ್ಯ ಎಷ್ಟೆಷ್ಟು ಸಾಧ್ಯವು ಅಷ್ಟುಹರಿಗುರು ಪಾದೋದಕ ಶುಭದ ಸರ್ವಾಭೀಷ್ಟದ 20ಆದರದಿ ಈ ಸ್ತೋತ್ರ ಪಠನ ಶ್ರವಣ ಮಾಳ್ಪರ್ಗೆಭಕ್ತಿಮೇಧಆಯುಷ್ಯ ಆರೋಗ್ಯ ಸೌಭಾಗ್ಯಗಳೀವಪದ್ಮಜನಪಿತನು ಶ್ರೀ ಪ್ರಸ್ನನ ಶ್ರೀನಿವಾಸನುವಂದೇ ವಿಧಿಮಧ್ವ ವ್ಯಾಸಮುನಿ ಕೇಶವಾರ್ಯಾಂತಸ್ಥ 21|| ಶ್ರೀ ಶ್ರೀ ಕೇಶವ ತೀರ್ಥ ಸ್ತೋತ್ರ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು