ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸುರರ ತಾಯಿಯು ದೊಡ್ಡಮ್ಮಾ ಸುಮ ನಸರಿಗೆ ಮಾತೆಯು ಚಿಕ್ಕಮ್ಮಾ ಪ ನೋಡಿದದು ಬಯಸುವುದು ದೊಡ್ಡಮ್ಮಾ ಬೇಡವೆಂದದ್ದು ಬಿಡುವುದು ಚಿಕ್ಕಮ್ಮಾ 1 ಹೇಳಿದಂತೆ ಕೇಳುವುದಿಲ್ಲ ದೊಡ್ಡಮ್ಮಾ ಆಳಿನಂತೆ ನಡೆದುಕೊಂಬವದು ಚಿಕ್ಕಮ್ಮ 2 ಅನಾರೋಗ್ಯ ವಸ್ತುಗಳು ದೊಡ್ಡಮ್ಮಾ ದಿವ್ಯಾರೋಗ್ಯ ಪದಾರ್ಥಗಳು ಚಿಕ್ಕಮ್ಮ 3 ಕ್ಷುಕ್ಷಿಂಬರ ಯೋಚನೆ ದೊಡ್ಡಮ್ಮಾ ಅಕ್ಷರಾಭ್ಯಾಸಸಕ್ತಿ ಚಿಕ್ಕಮ್ಮ 4 ಒಬ್ಬನೆ ತಿನ್ನುವುದು ದೊಡ್ಡಮ್ಮಾ ಹಬ್ಬ ಮಾಡಿ ಇತರರಿಗಿಡುವುದು ಚಿಕ್ಕಮ್ಮ 5 ಸಿಟ್ಟು ಮಾಡಿ ಬಯ್ಯುವುದು ದೊಡ್ಡಮ್ಮಾ ಜ್ಞಾನಿಗಳ ಸೇವಿಸುವುದು ಚಿಕ್ಕಮ್ಮ7 ಅಪಕಾರ ಮಾಡುವುದು ದೊಡ್ಡಮ್ಮಾ ಉಪಕಾರ ವೆಣಿಸುವುದು ಚಿಕ್ಕಮ್ಮ 8 ಉಸುರೆಂದು ಅಳುವುದು ದೊಡ್ಡಮ್ಮಾ ಹಸನ್ಮುಖರಾಗಿರುವುದು ಚಿಕ್ಕಮ್ಮ 9 ನೆರೆ ಜ್ಞಾಪಕ ಶಕ್ತಿ ಚಿಕ್ಕಮ್ಮ 10 ಅರರೆ ಕಲಿಯ ಪತ್ನಿ ದೊಡ್ಡಮ್ಮಾ ಗುರುರಾಮ ವಿಠಲನರಸಿ ಚಿಕ್ಕಮ್ಮ 11
--------------
ಗುರುರಾಮವಿಠಲ
ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ ಸಕ್ಕರಿ ತಾಯೆಂದು ಸಂತಿಗೆ ಕಳುಹಲು ತಕ್ಕಡಿ ಲಶುನವ ತಂದ ತರಳನಂತೆ 1 ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ ತುರುಚಿಯನೆ ತಂದ ತರಳನಂತೆ 2 ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ ಕೆಸರು ಪೂಸಿಕೊಂಡು ಬಂದ ತರಳನಂತೆ3 ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4 ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು ಜ್ಞಾಪಕಗೊಳಿಸಿದೆ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಕ್ಷೇತ್ರ ದರ್ಶನ ಉಡುಪಿಯ ಯಾತ್ರೆಯ ಮಾಡಿ - ಉಡುಪಿಯಾ ಪ ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ. ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ 1 ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ 2 ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ 3 ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ 4 ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ 5 ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು 6 ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ 7 ತೀರ್ಥ ಕ್ಷೇತ್ರ ಮಾಲಾ 1952 ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, 1954 ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು 1957 ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು 1961 ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ :-
--------------
ಗುರುಗೋವಿಂದವಿಠಲರು
ನಾಯಿ ಕಚ್ಚೀತೆಚ್ಚರಿಕೆ ಎಲೋ ಡಾವಿಟ್ಟು ಬರುತಾದೆಚ್ಚರಿಕೆ ಪ ನೋವು ತೀರದೀ ನಾಯಿ ಕಚ್ಚಲು ಕೇವಲ ವಿಷವುಳ್ಳ ಹೇಯನಾಯಿ ಅ.ಪ ಮೆಚ್ಚು ಮದ್ದಿಕ್ಕುವುದು ಅಚ್ಚರೋಗದ ನಾಯಿ ಮುಚ್ಚುಮನೆ ಮುರಿವುದು ಲುಚ್ಚನಾಯಿ ಸಾಚ್ಯನೆಂದು ನಂಬಿ ನೆಚ್ಚಿದವರ ಮೇಲೆ ಕಚ್ಚಿ ಬಿಚ್ಚುವುದೊಂದ್ಹುಚ್ಚು ನಾಯಿ 1 ಸೂಳೆನ್ನ ಹೋಗುವುದು ಮೂಳನಾಯಿ ಶೀಲ ತೊರೆವುದೊಂದು ಜೂಲುನಾಯಿ ಕೀಳರಿಂ ತಲೆಗೂಡಿ ಹಾಳ್ಹರಟ್ಹೊಡೆವುದು ಕೂಳ ಕಾಣದಂಥ ಹಾಳೂರನಾಯಿ 2 ಉಂಡುಂಡು ಮಲಗ್ವುದು ಸುಂಡಿನಾಯಿ ಕಂಡಂತೆ ತಿರಗುವ ದಂಡನಾಯಿ ಹೆಂಡ್ತಿನ್ನ ಬಿಟ್ಟು ಪರರ್ಹೆಂಡರಿಗೊಲಿವುದು ಉಂಡೊಗೆದೆಂಜಲ ನೆಕ್ಕುವ ನಾಯಿ 3 ಬಡವರ ಬಡಿವುದು ಬಡಕನಾಯಿ ಕಡುಗರ್ವದಿರುವುದು ತುಡುಗ ನಾಯಿ ದೃಢಯುತರನು ಕಂಡು ಬಿಡುನುಡಿಯಾಡ್ವುದು ಸುಡುಗಾಡೋಳ್ಬಿದ್ದಸ್ತಿ ಕಡಿಯುವ ನಾಯಿ 4 ವಿಚಾರನರಿಯದ್ದು ಬೇಬಿಟ್ಟಿನಾಯಿ ಅಚಾರಮನವಿಲ್ಲದ್ಹರಕುನಾಯಿ ಊಚಸ್ಥಾನದಿ ಕೂತು ನಾಚದೆ ಮೋರಿಚ್ಛೆ ವಾಚ ಪೇಳ್ವುದೊಂದು ನೀಚನಾಯಿ 5 ಆಸೆ ಪೇಳುವುದೊಂದು ಮೋಸದ ನಾಯಿ ಶಾಶ್ವತ ತಿಳಿಯದ್ದು ಪಾಶದ ನಾಯಿ ಈಶನ ದಾಸರ ದೂಷಿಪುದು ಹೊಲೆ ದಾಸರಮನೆಮುಂದಿನ್ಹೇಸಿನಾಯಿ6 ಕೋಪವ ತೊರೆಯದ್ದು ತಿರುಕನಾಯಿ ಪಾಪಕ್ಕೆ ಅಂಜದ್ದೀ ನರಕಿನಾಯಿ ಭೂಪ ಶ್ರೀರಾಮನ ಜ್ಞಾಪಕಕೆ ತರುವೆನು ಕೂಪದಿ ಉರುಳುವ ಪಾಪಿನಾಯಿ 7
--------------
ರಾಮದಾಸರು
ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1 ಸಾಧನಾತ್ಮಕಕೌಶಿಕನಮಖ ಕಾದುಸಲಹಿದವಿಘ್ನವೇದು ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ ಸಾಧರವೆವರಯಜ್ಞಗೌತಮ ಭೂದಿವಿಜಸತಿಶಾಪಮೋಕ್ಷವೆ ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2 ಪರುಶುರಾಮ ಸಮಾಗಮವುವಿ ಸ್ತರಿಸಿನೋಡೆಸಮತ್ವವಿಪಿನಾಂ ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ ಪರಿಕಿಸಲುದುರ್ವೃತ್ತಿಗಳುತತ್ ಪರಿಜನಖರಾದಿಗಳುಭ್ರಾಂತಿಯು ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3 ಅರುಣತನಯನುಧರ್ಮನೋಡೆ ಶ ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು ಹಿರಿಯಮಗನೆಸಹಾಯವಾಸೆಯೆ ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4 ಮಣಿಯೆಜ್ಞಾಪಕಸ್ವಸ್ಥಚಿತ್ತತೆ ವನವಶೋಕವುತ್ರಿಜಟೆಕನಸೇ ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ ದನುಜಪತಿಸುತಮುಖರವಧೆಯೇ ಮುನಿಮತವುದುರ್ವೃತ್ತಿಪರಿಹರ ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5 ಮಮತೆಲಂಕೆಯದಹಿಸಿಮತ್ತೆಹ ಪಮಶರಧಿ ಬಂಧನವೆಯಾಸೆನಿರೋಧನಂತರವು ಕ್ರಮದಿಧರ್ಮವಿಭೀಷಣನಸುರ ದಮನವಿಂದ್ರಿಯಜಯವುಮಿಗೆ ಹೃ ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6 ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು ವಿಧವಿಧದಯಜ್ಞಗಳವಿರಚಿಸಿ ಸದಮಲಾತ್ಮನುಸಕಲರಿಂದೈ ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7
--------------
ಗುರುರಾಮವಿಠಲ
ಶುಭ ಸಂಧಾನ ನೋಡು ಪ ಸಾರವಿಲ್ಲದಿಹ ಸಂಸಾರದಿ ಬಲು ಘೋರ ತಾಪಗಳು ತೋರಿದಾಗ ಭೂರಿ ಸೌಖ್ಯಗಳ ಭೀರುತಿರ್ಪ ಕಾರುಣಿಕನ್ನ ವಿಚಾರಮಾಡು 1 ದೇಹಿಗಳ್ಗೆ ಕಡುದ್ರೋಹವಗೈವ ತ್ರಾಹಿಯನೆ ತಾಳ್ವರೇನು 2 ಶ್ರೀ ಪುಲಿಬೆಟ್ಟದ ಭೂಪನೇ ಸರಿ ಜ್ಞಾಪಕಗೊಂಡನು ತಾಪಗೂಡಿ 3
--------------
ವೆಂಕಟವರದಾರ್ಯರು
ಶುಭಸಂಧಾನನ ನೋಡು ಪ ತಾಪಗಳು ತೋರಿದಾಗ ಭೂರಿ ಸೌಖ್ಯಗಳ ಬೀರುತಿರ್ಪ ಕಾರುಣೀಕನ್ನು ವಿಚಾರ ಮಾಡು 1 ಸೋಹಮೆಂಬ ಘನ ಮೋಹಾಂಧತೆಯಲ್ಲಿ ದೇಹಿಗಳ್ಗೆ ಕಡು ದ್ರೋಹವ ಗೈವ ತ್ರಾಹಿಯನೆ ತಾಳ್ವರೇನು 2 ಬೆಟ್ಟದ ಭೂಪನೇಸರಿ ಆಪದ್ರಕ್ಷಕನ ಶ್ರೀಪಾದಗಳನು ಜ್ಞಾಪಕಗೊಂಡೆನು ತಾಪಗೂಡಿ 3
--------------
ಸರಗೂರು ವೆಂಕಟವರದಾರ್ಯರು