ಆನಂದಾದ್ರಿವಿಠಲ | ನೀನೇ ಪೊರೆ ಇವಳಾ ಪ
ಜ್ಞಾನಿಜನವಂದ್ಯ ಹರಿ | ಶ್ರೀನಿವಾಸಾಖ್ಯ ಅ.ಪ.
ತರಳೆ ಬಹುನೊಂದಿಹಳೊ | ಕರುಣಾ ಮಾಳ್ಪುದು ದೇವದುರಿತವನ ದಾವಾಗ್ನಿ | ಶರಣಜನರೊಡೆಯಾ | ಮರುತ ಮತದಲ್ಲಿರುತೆ | ನೆರೆ ನಂಬಿಬಂದಿಹಳೊಕರುಣದಿಂ ಕೈಗೊಟ್ಟು | ಪರಿಪಾಲಿಸಿವಳಾ 1
ಅನ್ಯದೇವರ ಪೂಜೆ | ಇನ್ನಾದರು ಬಿಡಿಸಿನನ್ನೆಯಿಂ ನಿನ್ನನ್ನೆ | ಪೂಜಿಸುವ ಭಾಗ್ಯಾಇನ್ನಾದರೂ ಕೊಟ್ಟು | ಪನ್ನಂಗಶಯನಹರಿಮನ್ನಿಸೊ ಇವಳ ಹರಿ | ಅನ್ನಂತ ಮಹಿಮಾ 2
ಸಾಧುಜನ ಸದ್ವಂದ್ಯ | ಸತ್ಸಂಗವನೆ ಕೊಟ್ಟುಮಾಧವನೆ ನೀನಾಗಿ | ಕಾದುಕೊ ಹರಿಯೇಭೇಧಮತ ತತ್ವಗಳ | ಬೋಧಿಸುತ ಇವಳೀಗೆಸಾಧನವ ಗೈಸುವುದೋ | ಬಾದರಾಯಣನೇ 3
ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬಂಥಾಮತಿಯನೇ ಕೊಟ್ಟು ಸ | ದ್ಗತಿಯನೆ ಕರುಣಿಸೋ |ಸತತ ನಿನ್ನಯ ನಾಮ | ರತಿಯನೆ ಕರುಣಿಸುತಮತಿಮತಾಂವರರಂಘ್ರಿ | ಭಕ್ತಿಯನೆ ಈಯೋ 4
ಭಾವಜನಯ್ಯ ಎನೆಓವಿ ಬಿನ್ನವಿಪೆ ಹರಿ | ಸಲಿಸುವುದು ಇವನೇವೆಗುರ್ವಂತ ರಾತ್ಮಗುರು | ಗೋವಿಂದ ವಿಠಲಾ 5