ಭವಾಬ್ಧಿ ದಾಂಟಿಸಿದಿ ಸದ್ಗುರುನಾಥಾ
ನೀನೇ ಸ್ವರೂಪಾವಬೋಧ ನೀಡಿದಿ ತಾತಾ
ಜ್ಞಾನಾಸಿಯಿಂದ ಕಡಿದೈ ಸಂಸಾರಪಾಶವ
ನಾನಾತ್ಮವಳಿದು ಕಳೆದೈ ಅಜ್ಞಾನದೋಷವಾ
ನಾನೆನ್ನ ರೂಪ ತಿಳಿದೆ ಪ್ರಭೋ ಶ್ರೀಗುರುದೇವಾ
ನಾನೇಂ ಪೇಳ್ವೆ ನಿನ್ನ ದಿವ್ಯ ಬೋಧಪ್ರಭಾವಾ
ಈ ವಿಶ್ವವೆಲ್ಲ ಕನಸಿನಂತೆ ಎನಗೆ ತೊರ್ಪುದೈ
ಆವಾಗ ಬೋಧವಾಯ್ತು ನಾನರಿತೆ ಸತ್ಯವಾ