ಒಟ್ಟು 9 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ್ತನಾಭೀಷ್ಟವನು | ಪೂರ್ತಿಗೊಳಿಸೊ ಪ ಕಾರ್ತಸ್ವರ ಮೊದಲಾದ | ವಾರ್ತೆ ನಾನೊಲ್ಲೇ ಅ.ಪ. ಫಲ ಗಿಡೆಲೆ ಮರ ಬಳ್ಳಿ | ಜಲ ಬಿಂದು ನವ ನದಿಯುಜಲ ನಿಧಿಯು ವನಗಿರಿಯು | ಜಲ ಚರಾಚರಧೀ ||ಒಳ ಹೊರಗೆ ಸಂವ್ಯಾಪ್ತ | ಚಲಿಪೆ ನೆಲೆಯಿಲ್ಲದಲೆತಿಳಿಸೊ ತವ ಮಹಿಮೆಗಳ | ಅಲವ ಭೋದಾತ್ಮಾ 1 ಕಂಡ ನೀರೊಳು ಮುಳುಗಿ | ಅಂಡಲೆದು ಬೆಂಡಾದೆಪುಂಡರೀಕಾಕ್ಷ ಪದ | ಬಂಡುಣಿ ಎನಿಸದೇ ||ಹಿಂಡು ತೀರದ ಗತ | ಪಾಂಡುರಂಗನ ರೂಪಕಂಡು ಹಿಗ್ಗುವುದೆಂದೊ | ಕುಂಡಲಿಯ ಶಯನಾ 2 ಜ್ಞಾನಾಯು ರೂಪಕನೂ | ಪ್ರಾಣಾಂತರಾತ್ಮ ನಿನಜ್ಞಾನ ಕೊಟ್ಟು ಧರಿಸೊ | ಗಾನ ಪ್ರಿಯನೇ ||ಪ್ರಾಣನಿಗೆ ಪ್ರಾಣ ಗುರು | ಗೋವಿಂದ ವಿಠ್ಠಲನೆನೀನಾಗಿ ಒಲಿಯದಲೆ | ಅನ್ಯಗತಿ ಕಾಣೇ3
--------------
ಗುರುಗೋವಿಂದವಿಠಲರು
ನಾರಾಯಣ ವಿಠ್ಠಲನೆ ನೀನಿವನ ಕಾಪಾಡೊ ಹರಿಯೆ ಪ ನೀರಜಾಸನವಂದ್ಯ ಪೋರ ನಿನ್ನವನೆಂದುಕಾರುಣ್ಯದಲಿ ಕೈಪಿಡಿದು ಕಾಪಾಡೊ ಹರಿಯೇ ಅ.ಪ. ಜ್ಞಾನಾಯು ರೂಪಕ ಸು | ವಾಯುದೇವನೊಳಿದ್ದುನೀನಿವಗೆ ಜ್ಞಾನಾಯು ಸಂಪದವನೀಯೋ |ಮೌನಿಕುಲ ಸನ್ಮಾನ್ಯ ಪೂರ್ಣಪ್ರಜ್ಞರ ಮತದಿ ಜ್ಞಾನಿ ಎಂದೆನಿಸಿವನ ಕಾಪಾಡೊ ಹರಿಯೆ 1 ಗೋವುಗಳೊಳುದ್ಗೀಥ ಕಾವ ಕರುಣಿಯೆ ದೇವಭಾವದಲಿ ನೀನಿದ್ದು ಉದ್ಧರಿಸೊ ಹರಿಯೇ |ಆವ ಭವವನಧಿ ಲಕ್ಷ್ಮೀ ನರಹರಿಯೇನೋವುಗಳ ಪರಿಹರಿಸೊ ಪವನ ಪ್ರೀಯ 2 ಹೆಂಚು ಹಾಟಕದಲ್ಲಿ ಸಮಬುದ್ಧಿ ನೀನಿತ್ತುಪಂಚ ಪಂಚಿಕೆ ತತ್ವ ತರತಮವ ತಿಳಿಸುತ್ತಮಿಂಚಿನಂತಿವನ ಹೃತ್ಪಂಕಜದಿ ಪೊಳೆಯೊವಾಂಛಿತ ಪ್ರದನೆ ಗುರು ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಪತಿ ವಿಠಲ | ಬುಧಜನೇಡ್ಯಾಮುದದಿಂದ ಲೀಕೆಯನು | ಸಲಹೊ ಶ್ರೀ ಹರಿಯೇ ಪ ನೊಂದು ಭವದಲಿ ಬಹಳ | ಇಂದಿರಾರಮಣ ತವಅಂದ ಪದದಾಸ್ಯ ಮನ | ಮಂದಿರದಿ ಬಯಸೀ |ಬಂದು ಬೇಡ್ದಳಿಗೆ ನಾ | ನೊಂದು ಅಂಕಿತವಿತ್ತೆತಂದೆ ತೈಜಸನೆ ನೀ | ನಂದೆ ಪೇಳ್ದಂತೇ 1 ಬಹಳ ಭಕ್ತಿಯಲಿಂದ | ವಿಹಿತ ಕರ್ಮಾಸಕ್ತೆಅಹಿಶಯ್ಯ ಕೃಪೆಯಿಂದ | ಮಹಿಮೆ ತೋರೀ |ಅಹಿತ ವಿಹಿತಗಳೆರಡ | ಸಹನೆ ದಯಪಾಲಿಸುತಮಹಮಹಿಮ ಪೊರೆ ಇವಳ ಸುಹೃತ ಜನರ ಬಂಧೋ2 ಜ್ಞಾನಾಯು ರೂಪನಿಗೆ | ನೀನಿವಳನೊಪ್ಪಿಸುತಸಾನುಕೂಲಿಸು ಮುಕುತಿ | ಜ್ಞಾನ ಭಕುತಿಗಳಾ |ಕಾಣೆ ತವ ಕಾರುಣ್ಯ | ಕೆಣೆಯು ತ್ರೈಭುವನದಲಿಮಾಣದಲೆ ಪೊರೆ ಇವಳ | ದೀನ ಜನ ಪಾಲಾ 3 ಪತಿ ಕೃಷ್ಣ | ಕಾಳಿಪತಿನುತ ಹರಿಯೆಕಾಳಘಾವಳಿಗಳನು | ಕಳೆದು ಪೊರೆ ಇವಳಾ4 ಪಾವನಾತ್ಮಕ ದೇವ | ಪಾವಮಾನಿಯ ಪ್ರೀಯಜೀವ ಪರತಂತ್ರತೆಯ | ಭಾವ ಅನುಭವದೀದೇವ ಸಾಧನಗೈಸಿ | ಜೀವಿ ಇವಳನು ಪೊರೆಗೋವಿಂದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು ಶ್ರೀ ಸೂರ್ಯದೇವ ಸ್ತೋತ್ರ 88 ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ ಸೂರಿ ಪ್ರಾಪ್ಯ ಪ ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್ ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ ಅಮಯ ದೂರ ಸುಗುಣ ಗಣಾರ್ಣವ ದೇವ ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1 ಮಕರ ಕುಂಡಲವಾನ್ ಕಿರೀಟಿಯೆ ಅರಿದರ ಧಾರಿ ಅವ್ಯಯಾನಂದ ಚಿತ್ ಚಾಮೀಕರ ವಪು ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2 ಹಿಂಕಾರ ಪ್ರಸ್ತಾವ ಆದಿ ನಮೋ ನಮೋ ಉದ್ಗೀಥ ಪ್ರತಿಹಾರೋಪದ್ರವ ನಿಧನ ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3 ಭೂತೇಂದ್ರಿಯ ಕರ್ಣಾದಿಗಳಿಗೆ ದೂರ ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4 ಸೂರ್ಯದೇವನೆ ದಯಾವಂತನೆ ನಮೋ ನಮೋ ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5 ಸೂರ್ಯ ನೀ ಅಹರಹ ಎನ್ನಸರ್ವಪೀಡೆಗಳ್ ಕಳೆದು ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6 ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ ಸೂರ್ಯ ನಿನ್ನ ಪ್ರೀತಿಪಾತ್ರ ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ ಕರುಣದಿ ಎನ್ನನು ಎನ್ನವರನು ಕಾಯೋ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಅಂಗಾರಕ ಸ್ತೋತ್ರ ಗಂಗಾಜನಕ ಜಯೇಶ ಪ್ರಿಯತರ ಮಂಗಳ ನಮೋ ನಮೋ ಪಾಲಯಮಾಂ ಪ ತುಂಗ ಮಹಿಮ ವರಾಹಧರಾಸುತ ಮಂಗಳಪ್ರದತೇ ನಮೋ ನಮೋ ಅಪ ಸಾಧು ಜನಪ್ರಿಯ ವೃಷ್ಟಿಕೃದ್ ವೃಷ್ಟಿ ಹರ್ತಾದುರ್ಜನ ಭೀಕರ ಭೋ ವಿದ್ಯುತ್ತೇಜ ಕುಮಾರ ನಮೋ ನಮೋ ಶಕ್ತಿಪಾಣೇ ತ್ವಂ ಪಾಲಯಮಾಂ 1 ಸಾಮಗಾನ ಪ್ರಿಯ ದೇಹಿಮೇ ಸಪ್ತ - ಸಾಮಭಕ್ತಿ ಪ್ರತಿಪಾದ್ಯ ಹರೌ ನಿರ್ಮಲ ಭಕ್ತಿಂ ಸಜ್ಜನ ಸಂಗಂ ಜ್ಞಾನಾಯುರ್ಬಲಾದ್ವೈಶ್ವರ್ಯಂ 2 ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸ ವಿಶ್ವರೂಪನು ನಿನ್ನೊಳ್ ಜ್ವಲಿಸುತಿಹ ಅಂಗಾರಕ ನಮೋ ಭೂಮಿಜ ಕೇವಲ ಕೃಪಯಾ ಸಂತತ ಪಾಲಯಮಾಂ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಹಯಗ್ರೀವ ವಿಠಲ | ಮೋಹ ಕಳೆದಿವನಾ ಪ ಸಾಹಸಿಗಗಾಭೀಷ್ಟ | ದೋಹನನು ಆಗೋ ಅ.ಪ. ಮಾಣವಕ ಭಕ್ತಿಯಲಿ | ಮಾನ್ಯರನು ಸೇವಿಸುವಜ್ಞಾನವಂತನ ಮಾಡಿ | ಪ್ರಾಜ್ಞನೆಂದೆನಿಸೋ ಜ್ಞಾನ ನಿಧಿ ನಿನ್ನೊಲಿಮೆ | ಕಾಣದಲೆ ಪರಿತಪಿಸಿಜ್ಞಾನದಂಕುರಕಾಗಿ | ಬಿನೈಸುತಿಹೆನೋ 1 ಸುಜನ ಸಂಗದಿ ಹರಿಯ | ಭಜನೆಯೊದಗಲಿ ಇವಗೆಋಜು ವಾದಿರಾಜರಲಿ | ನಿಜ ಭಕ್ತಿ ಬರಲೀಗಜ ವರದನಂಘ್ರಿಗಳ | ನಿಜ ಮನದಿ ಕಾಂಬಂಥಯಜನ ಭಜನೆಗಳೊದಗಿ | ಪ್ರಜೆಗಳಲಿ ಮೆರೆಸೋ 2 ಭೃತ್ಯ ವತ್ಸಲನೇ 3 ನಾನು ನನ್ನದು ಎಂಬ | ಹೀನ ಭಾವವ ಕಳೆದುಏನೇನು ತಾ ಮಾಳ್ಪ | ಮಾನಸಾದಿಗಳಾಪ್ರಾಣಾಂತರಾತ್ಮಕಗೆ | ದಾನ ಮಾಳ್ಪಂತೆಸಗಿಜ್ಞಾನಾಯು ರೂಪಕನ | ಮಾನ್ಯಮತ ತಿಳಿಸೋ 4 ಕೈವಲ್ಯ ಪ್ರದನೇತಾವಕನ ಸಲಹೆಂಬ | ಆವ ಭಿನ್ನಪ ಸಲಿಸೆಓವಿ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀಮಾಧವ ತೀರ್ಥರ ಸ್ತೋತ್ರ ಮಾಧವ ಸುತೀರ್ಥ ಗುರು | ಭಕ್ತಜನಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ ಪ ಸನ್ನುತ ಚರಣ | ಮೌನದಿಂ ಭಜನನೀ ಮಾಡಿ ಆನಂದ ವಾರಿಧೀಯಲಿ ಮಿಂದುಆ ಮಹಿಮೆ ಪೊಗಳಲೂ | ಎನಗಾವ ಅಳಲೂ 1 ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನನೀನಾಗಿ ತೋರುವಲಿ | ನಿನ್ನ ದಯವಿರಲಿ |ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತುಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ 2 ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತದೀನಜನ ಪರಿಪಾಲ | ಹರಿಭಕ್ತ ಲೋಲಾ |ಜಾಣ ಗುರುಗೋವಿಂದ | ವಿಠಲ ಮಹಿಮಾನಂದನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ 3
--------------
ಗುರುಗೋವಿಂದವಿಠಲರು
ಹನುಮ-ಭೀಮ-ಮಧ್ವ ಸ್ತೋತ್ರ ಅಪಮೃತ್ಯು ಪರಿಹರಿಸೊ ಅನಿಲದೇವಾ ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು ಎನಗಿಲ್ಲವಾವಾವ ಜನ್ಮದಲ್ಲಿ ಅನುದಿನ ನೀನೆಮ್ಮನುದಾಸೀನ ಮಾಡುವುದು ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ 1 ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ ದೊರೆಯು ನಿನ್ನೊಳಗಿಪ್ಪ ಸರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ 2 ಭವರೋಗ ಮೋಚಕನೆ ಪವಮಾನರಾಯಾ ನಿ ನ್ನವರನು ನಾನು ಮಾಧವಪ್ರಿಯನೇ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ 3 ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂ ಚಾನನಾದ್ಯಮರರಿಗೆ ಪ್ರಾಣದೇವಾ ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ ದಾನವಾರಣ್ಯ ಕೃಶಾನು ಸರ್ವದ ಎಮ್ಮ 4 ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವು ಅಲ್ಲ ಸಾಧುಪ್ರಿಯಾ ವೇದವದೋದಿತ ಜಗನ್ನಾಥ ವಿಠಲನ ಮೋದ ಕೊಡು ಸತತ5
--------------
ಜಗನ್ನಾಥದಾಸರು