ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ 1 ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ ಕಾಲ ಬದಕುವುವದ್ಯಾಕೆ ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ 2 ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು