ತಿಳಿ ಆದೆ ದೇವನು ಇರುತಿಹೆ ನೀ ಪ
ಅದು ಕೊನೆಯಾಚೆಗೆ ಬೇರಿಲ್ಲ
ಅದು ಮನಸಿಗೆ ನಿಲುಕುವದಲ್ಲ
ಅದನನು ಭವದಲಿ ತಿಳಿಯಲ್ಲ
ಬಿಡು ಮನಸಿನ ಗೊಡವೆಯನೆಲ್ಲ
ಇದೆ ಜ್ಞಾನಾಗ್ನಿಯು ಸುಡುತಿಹುದೋ
ಒದಗಿದ ಕರ್ಮದ ಕಾಷ್ಮಗಳ 1
ಮನವಡಗಿದ ಪದ ಪರಿಚಯವ
ತನಿನಿದ್ರೆಯ ಮೀರಿದ ಸ್ಥಿತಿಯ
ಅನುಭವದಲಿ ತರುವುದೆ ಯೋಗ
ಅದನೇ ಯತ್ನದಿ ಸಾಧಿಸು ತಾ
ನನಸಿನಲೇ ಗುರು ಮುಖದಿಂದ
ಕೇಳಿ ನಿವೇಕದಿ ತಿಳಿ ಬೇಗಾ 2
ಎಚ್ಚರವಿದು ತಿಳಿ ಕನಸೆಂದು
ಅಚ್ಚಳಿಯದ ಸ್ಥಿತಿ ನಾನೆಂದು
ನಿಚ್ಚಳದಲಿ ನಿಶ್ಚಯಿಸುವದು
ತುಚ್ಛದ ತೋರಿಕೆ ಎಂದು ತಿಳಿ
ಸಚ್ಚಿತ್ಶಂಕರ ಬೋಧವನಾ 3