ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ತಂದೆ ಮುದ್ದುಮೋಹನ ದಾಸರೆನಿಸಿದ ತಂದೆ ಶ್ರೀ ಗುರುವರ್ಯರೆ ಪ. ತಂದಿರಿ ಜ್ಞಾನಾಂಬುಧಿ ಮಧ್ಯದೊಳಗೀಗ ತಂದಿಹ ಎನ್ನ ದುಷ್ಕರ್ಮವ ತರಿಯುತ ಅ.ಪ. ಬಂದೆನು ಭವದೊಳು ನಿಂದೆನು ತಾಪದಿ ಮಂದಮತಿಯಿಂದ ಜಗದೊಳಗೆ ಕುಂದುಗಳೆಣಿಸದೆ ಬಂದು ದರ್ಶನವಿತ್ತು ಕಂದನಂದದಿ ದಯದಿಂದ ಪಾಲಿಸಿದಿರಿ 1 ಯೋಗಿಗಳೆನಿಸಿದ ಭೋಗಿವರರೆ ಶಿರ ಬಾಗಿ ನಮಿಸುವೆ ಈಗ ನಾನು ನಾಗಶಯನನ ತೋರಿ ಬೇಗ ಪಾಲಿಸಿರಿ ಪೋಗುತಿದೆ ದಿನ ಜಾಗು ಮಾಡದೆ ಮುನ್ನ 2 ನರಸಿಂಹನನು ಹೃತ್ಸರಸಿಜದಲಿ ಕಾಂಬ ಗುರುವರ ನಿಮ್ಮಂಘ್ರಿಗೆರಗುವೆನು ಪರಿಪರಿ ತಾಪವ ಹರಿಸಿ ಎನ್ನ ಮನ ಹರಿಗುರು ಚರಣದೊಳಿರುವಂತೆ ಕೃಪೆಗೈದೆ 3 ಪರಮ ಗುರುಗಳಿಗೆ ಪ್ರಿಯರಾಗಿ ಇಳೆಯೊಳು ಚರಿಸಿ ಸುಜನರ ಪಾವನಗೈದು ಪರಮ ಗುಪ್ತದಿಂದ ಹರಿಯ ಧ್ಯಾನಿಸುತ್ತ ಧರೆಯೊಳಗಿರುವ ಪಾಮರರ ಮೋಹಿಸುವಂಥ 4 ಕಷ್ಟವ ಬಿಡಿಸಿರಿ ತುಷ್ಟರಾಗಿ ನೀವೆ ಇಷ್ಟು ಪರಿಯಿಂದ ಬೇಡಿಕೊಂಬೆ ಇಷ್ಟದೈವರು ನೀವೆ ಶ್ರೇಷ್ಠ ಶ್ರೀ ಗೋಪಾಲ ಕೃಷ್ಣವಿಠ್ಠಲನ ಉತ್ಕøಷ್ಟದಿ ತೋರಿರಿ5
--------------
ಅಂಬಾಬಾಯಿ
ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ | ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಪ ಅಜನನಂದನೆ ಚಂದ್ರವದಗೆ | ಚತುರಮಯೆ | ಸುಜನರಿಗಾನಂದ ಸದಗೆ | ಧವಳಕಾಯೆ | ಭಜಿಸಿ ಬೇಡುವೆ ನಿನಗಿದನೆ | ಸೃಜಿಸಿ ಕೊಡುವುದು | ತ್ರಿಜಗದೊಳಗೆ ಹರಿ | ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ | ಹಜ ಮತಿಯನುದಿನ | ಕುಜನ ನಿವಾರೆ 1 ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ | ಕಲಕಾಲಾ ಸುಜ್ಞಾನಾಂಬುಧಿಯೆ | ತಲೆವಾಗಿ ನಮಿಸುವೆ | ಹಲವು ಜನ್ಮಂಗಳ | ಒಳಗೊಳಗೆ ಬಿದ್ದು | ಹಲಬುತಿಪ್ಪ ವ್ಯಾ | ಕುಲವನು ಕಳೆದು ನಿ | ಶ್ಚಲ ಮತದೊಳಗಿಡು 2 ನಿತ್ಯ ಉತ್ತಮ ಗುಣಸಮುದ್ರೇ | ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ | ಕವೇರಕನ್ಯೆ ......ಗಿತ್ತ ಪೊಳೆವ ಸೂಭದ್ರೆ | ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು ಸ್ರೌತ್ಯದಿಂದಲಿ ಬಲು | ನೃತ್ಯಮಾಡುವ ಸಂ |ಪತ್ತನೆ ಕರುಣಿಸು 3
--------------
ವಿಜಯದಾಸ
ಜಯ ಜಯ ಭೀಮಸೇನ ಪ. ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ. ಅಂಬ ಪಾವಕ ದೀನೋದ್ಧಾರಿ1 ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2 ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3 ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4 ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
--------------
ಗೋಪಾಲದಾಸರು
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶಂಕರ ಗುರುದೇವಾ ವಂದೇ ಶಂಕರ ಗುರುದೇವಾ ಪಾವನ ಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ ನಿರಂಜನ ಸತ್ಯ ಸ್ವರೂಪಾ ಪ್ರತ್ಯಗಾತ್ಮನೇ ಆನಂದರೂಪಾ ನೀಡೈ ಘನಜ್ಞಾನಾ ಬೋಧಾ ಬೇಡುವೆ ನಿನ್ನೊಳ್ ಗುರುವೇ ವಂದೇ ಆತ್ಮಸ್ವರೂಪವ ಬೋಧಿಸಿ ಎನ್ನ ಮುಕ್ತ ಮಾಡುನೀ ಶ್ರೀ ಗುರುದೇವಾ ನಾರಾಯಣಪದದಾ ಜ್ಞಾನಾ ಸಾರಿದ ಶಂಕರ ಗುರುವೇ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ಹೋಗುಣು ನಡಿ ಸಾಧುರ ನೋಡುವಾ ಬೇಗ ಪ್ರಾಣನಾಥನ ಕೂಡುವಾ ಪ ವ್ಯರ್ಥ ಆಯುಷ್ಯ ವೆಚ್ಚ ಮಾಡಬೇಡಿ ಹಿತಾಹಿತ ವಿವರಿಸಿ ನೋಡಿ |ನೀತಿ ಮಾರ್ಗದಲಿ ನಡೆದಾಡಿಭೀತಿ ಭ್ರಮೆ ಮೂಲದಿ ಹೋಗಾಡಿ 1 ಮನಸಿನ ಕಲ್ಪನೆಯ ಬಿಟ್ಟುಗುಣತ್ರಯದ ವೃತ್ತಿ ಕಡೆಗಿಟ್ಟು |ಪೂರ್ಣ ಜ್ಞಾನ ವೈರಾಗ್ಯ ಒತ್ತಿಟ್ಟುಘನ ಹರುಷ ತಮ್ಮೊಳಗಿಂಬಿಟ್ಟು 2 ನಾನಾ ತೀರ್ಥ ಉಂಟು ಸಾಧುರಲ್ಲಿನಾನೇನೆಂದು ಆ ಸುಖ ಹೇಳಲಿ |ಜ್ಞಾನಾಂಬುಧಿ ಸಾಧುರೇ ನೋಡಲಿಜ್ಞಾನಬೋಧ ಸಾರಿದ ಭಕ್ತೀಲಿ 3
--------------
ಜ್ಞಾನಬೋದಕರು
ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು