ಸರಸೀಔಂಬಕಿ ನೀರೇ ಎನಗ|ತ್ವರತದಿ ತೋರೆ|
ಸರಸಿರುಹ ವಂದ್ಯನಾ ಪ
ಪಲ್ಲವಧರದಲಿಂದಾ|ಕೊಳಲು ನಾನಾ ಪರಿಯಾ|
ಬಲ್ಲತನದಲಿ ಊದಲು|
ಹುಲ್ಲೆಯಂದದಿ ಮನಸು|ಮರಳು ಗೊಂಡಾಥನಿಗೆ|
ಭುಲ್ಲವಿಸುತಿಹುದಮ್ಮಾ ನಮ್ಮಾ 1
ಕೈರವ ಸರ್ವೋದಯವ ಕಂಡು|ಮುದದಿಂದ|
ಚಕೋರ ಸಂತೋಷಿಸುವಂತೆ|
ನೀರಜಾನನ ನೋಡ ಲಕ್ಷಣದಿ ನೋಟಕ|
ಪಾರಣೆ ಯಾಗುದಮ್ಮಾ ನಮ್ಮಾ 2
ಪರಮ ಜ್ಞಾನಾಂಗನೆಒಂದೊಂದು ಘಳಿಗೆ ವತ್ಸರ|
ದಂತೆ ಪೋಗುತಿಹುದು|
ತರಿತ ಮಹಿಪತಿ ನಂದ|ನೋಡಿ ಯನನು ತೋರೆದಡೆ|
ಹರನ ನಿಲ್ಲದಮ್ಮಾ ನಮ್ಮಾ 3