ಮಧ್ವನುದಿಸಿದನು ಭೂತಳದಲಿ ಪ
ವದ್ದು ದುರ್ಮತ ತಿದ್ಧಿ ಸುಜನರ ಪದ್ಮನಾಭನ ಪಾದಸೇವಿಸೆ ಅ.ಪ
ಕುಣಿದು ಕುಣಿಯೇ
ಖೇದ ಉಕ್ಕಿಹರಿಯೆ
ಸರ್ವಲಕ್ಷಣದಿಂದ ಶೊಭಿಪ ಸರ್ವತೆರದಲಿ ಪೂರ್ಣಕಾಯದಿ
ಸರ್ವಜೀವರ ನಾಥನಾಯಕ ಸರ್ವರೀಶನ ಆಜ್ಞೆಧರಿಸುತ 1
ವಾಸುದೇವನಲ್ಲೆ ರತನು ವಾಸುದೇವನ ತೋರಿ ಪೊರೆವಾ
ದೋಷವಿಲ್ಲದ ಮಹಾಮಹಿಮಾ ನಾಶವಿಲ್ಲದ ಜ್ಞಾನಸ್ವರೂಪಾ
ವಾಸುದೇವ ಸುನಾಮಗೊಳ್ಳುತ
ನಾಶಮಾಡುತ ದೋಷಜ್ಞಾನವ ಭಾಸಬೀರಲು ವೇದರಾಶಿಯ 2
ವನಜಜಾಂಡವ ಪೊತ್ತಿಹಧೀರ ವನಜನಾಭವ ಮುಖ್ಯದೂತ
ಅನಿಲ ದೇವನ ತೃತೀಯ ರೂಪ ವನಜಸಂಭವ ಪದಕೆ ಬರುವ
“ಶ್ರೀಕೃಷ್ಣವಿಠಲ”
ದಣಿವು ಕಾಣದೆ ವೇದವತಿಯಲಿ 3