ಏನಂತ ನರನೆನ್ನಬೇಕೋ
ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ
ಸುಕೃತ ಒಡಗೂಡಿ
ಮಾನವನಾದದ್ದು ಖೂನವಿನತಿಲ್ಲದೆ
ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ
ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1
ತಾನಾರೆಂಬ ವಿಚಾರವು ಇಲ್ಲದೆ
ಏನೇನು ಸುಖವಿಲ್ಲದ್ಹೇಯಸಂಸಾರದ
ಕಾನನದೊಳು ಬಿದ್ದು ಕುನ್ನಿಯಂದದಿ ಮಹ
ಜಾಣರ ಜರೆಯುತ ಜವಗೀಡಾಗುವನಿಗೆ 2
ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ
ಕ್ಕೇಸೇಸು ಜನಮದಿ
ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು
ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3
ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ
ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು
ನಿತ್ಯ ಸುಖವನೀವ ಉತ್ತಮವಾದಂಥ
ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4
ಸುಮನಸಕಲ್ಪದ್ರುಮ ತಂದೆ ಶ್ರೀರಾಮ
ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ
ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ
ಸಮಯವನರಿಯದೆ ಯಮಲೋಕ ಸೇರುವಗೆ 5