ಜ್ಞಾನಶೂನ್ಯಗಾತ್ಮದನುಭವವ್ಯಾಕೆ
ಹೀನ ಸಂಸಾರಿಗೆ ಪರದ ಸುದ್ದ್ಯಾಕೆ ಪ
ಕತ್ತೆಗೆ ಬೆಲೆಯುಳ್ಳ ಉತ್ತಮ ಜೀನ್ಯಾಕೆ
ಕೃತ್ರಾಮಗೆ ಸತತ ಸತ್ಪಥದ ಬೋಧ್ಯಾಕೆ
ತೊತ್ತಿಗ್ಹೋಗುವಗರಸೊತ್ತಿಗಧಿಕಾರವ್ಯಾಕೆ
ಮಿಥ್ಯೆಮತಿಗ್ಯಾತಕ್ಕೆ ಉತ್ತಮರ ನೆರೆಯು 1
ನಂಬಿಗಿಲ್ಲದವಗ್ಯಾಕೆ ಗುಂಭದ ಮಾತುಗಳು
ಜಂಬಕೊಚ್ಚುವವಗ್ಯಾಕೆ ಗಂಭೀರತನವು
ಅಂಬುಜಾಕ್ಷನ ಚರಿತ ಡಂಭನಿಗ್ಯಾತಕ್ಕೆ
ಗೊಂಬೆಯಾಟಗಾರಗ್ಯಾಕೆ ತಂಬೂರಿ ತಬಲ 2
ದಾನಧರ್ಮದ ಮಹಿಮೆ ಜೀನನಿಗೆ ಏತಕ್ಕೆ
ಗೋಣು ಮುರಿವವಗ್ಯಾಕೆ ದೈನ್ಯಮಾತುಗಳು
ನಾನಾ ಬಯಕೆಯುಳ್ಳ ಮಾನವಗೆ ಭಕ್ತಜನ
ಪ್ರಾಣ ಶ್ರೀರಾಮ ನಿಮ್ಮ ಧ್ಯಾನವಿನ್ಯಾಕೆ 3