ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನವನೆ ಕೊಟ್ಟು ಸಲಹೊ ಶ್ರೀ ಪ್ರಾಣರಾಯಾ ಪ ವಿಜ್ಞಾನ ಮಸ್ತಕ ಘನ ಗಿರೀಶಗೆ ರಾಜನೇ ಅ.ಪ. ಅಂಜನೆ ಕಂದನೆನಿಸಿ ರಘುಕುಲೇಂದ್ರನ ನಾಮದುಂಗುರ ಇಂದುಮುಖಿಯಳಿಗಿತ್ತು ಖಳನಂದನನ ಮಡುಹಿದ ಧೀರವಿಜ್ಞಾ£ À 1 ಭವಭಯಕೆ ನಿರ್ಭೀಕರಾನೆನಿಸಿ ಭಾನುಸುತನಾಶ್ರಯಿಸಿದವ ಭೇದವಿಲ್ಲದೆ ಬಹುಬಾಧೆ ಬಿಡಿಸಿ ಭೂಭಾರನಿಳುಹಿದೇ ಭಾವಿ ಬ್ರಹ್ಮ ಸುಜ್ಞಾನ 2 ದಾಸರೆಲ್ಲರೂ ಮಹಿಮ ದಾಸರಾಗುತಿರೆ ಸಮಯ ಸೂಸುತ ಶಶಿಯಂತೆ ವಸುಧಿಗಿಳಿದು ಪೋಷಿಸಿದೆ ತಂದೆವರದಗೋಪಾಲವಿಠಲನ ದಾಸಾ 3
--------------
ತಂದೆವರದಗೋಪಾಲವಿಠಲರು
ಬಂದು ಸಂಸಾರದಿ ನೊಂದು ತಾಪತ್ರಯದಿ ಬೆಂದು ಕಂದಿ ಕುಂದಿದೆ ದೇವಾ ಪ ಪರಮ ಕರುಣಿಯೆ ನಿನ್ನ ಶರಣು ಪೊಕ್ಕಾ ಜನರ ಪರಿಪಾಲಿಪನೆಂಬ ಬಿರಿದೊ ಅರಿದೂ ನೀನೆ ಮೆರೆಯದಲೆ ಸಲಹÀಬೇಕೆನ್ನ ನಿನ್ನ ಚರಣನೀರಜಯುಗ್ಮವನ್ನಾ ತೋರಿ ಹರುಷವನೆ ನೀಡೆಲೋ ಮುನ್ನಾ ಘನ್ನ ಪರಮಭಕುತಿ ವಿರಕುತಿ ನೀನೆ ಎನಗಿತ್ತೆನ್ನ ಹರುಷದಲಿ ಪಾಲಿಸೈಯ್ಯಾ ಜೀಯಾ 1 ಮಾನುಷಾಧಮ ನಾನು ಹೀನಮತಿಯಲಿ ನಿನ್ನ ಧ್ಯಾನವನು ಮಾಡದಲೆ ಬರಿದೆ ಜರಿದೆ ಇಂಥ ಹೀನಭವದೊಳಗೆ ಬಾಯಿದೆರದೆ ದಿವ್ಯ ಜ್ಞಾನಿಜನರನ್ನು ನಾ ಜರಿದೆ ಙÁ್ಞನ ಹೀನನಾಗಿ ಕಾಲಕಳೆದೆ ಇನ್ನು ಶ್ರೀನಿವಾಸನೆ ನಿನ್ನ ಧ್ಯಾನ ಮಾಡುವೆನೋವಿ - ಜ್ಞಾನವನೆ ಪಾಲಿಸಯ್ಯಾ ಜೀಯಾ 2 ಈಸುವತ್ಸರ ನಿನ್ನುಪಾಸನವ ಮಾಡದಲೆ ರಾಸಭಾನಂತೆ ಬದುಕಿದೆ ದೇವಾ ಈಗ ವಾಸವಾಗೆಲೋ ಮನದಿ ಸ್ವಾಮೀ ನಾನು ಈಸಲಾರೆನು ಭವದಿ ಪ್ರೇಮೀ ಎನ್ನ ಆಸೆ ಪೂರ್ತಿಸೊ ಅಂತರ್ಯಾಮಿ ಇನ್ನು ಎಸುವಿಧದಲಿ ಸರ್ವೇಶ ಪೇಳಲಿ ಮುನ್ನೆ ಈಶ ಭವಶ್ರಮ ಕಳಿಯೋ ಈಗಾ ವೇಗಾ 3 ಆವ ಕರ್ಮದಲಿಂದ ಈ ವಸುಮತಿಯಲ್ಲಿ ಈ ವಿಧಾದಿಂದ ಬಂದೆ ನಿಂದೆ ನಿನ್ನ ಸೇವಕಾನಲ್ಲವೆ ತಂದೆ ಎನ್ನ ಆವಾಗ ನೋಡುವಿಯೊ ಮುಂದೆ ಈಗ ಕಾವವನಾರು ನಾ ಎಂದೆ ವೇಗ ದೇವ ನಿನ್ನಯ ಪಾದಸೇವೆ ಸುಖವನು ಇತ್ತು ಆವ(ಅವ)ರಂತೆ ಪೊರೆಯೊ ಎನ್ನಾ ಚೆನ್ನಾ 4 ಉರಗಾದ್ರಿ ನಿಲಯನೆ ವರಭೋಗಿಶಯನನೆ ಪರಮಪುರುಷನು ಎಂದು ಮೊರೆಯಾ ಇಡುವೆ ನಿನ್ನ ಪರಿಪರಿಯ ಜನರನ್ನು ಪೊರೆವೆ ಎನ್ನ ತಿರಸ್ಕಾರ ಮಾಡುವುದು ಥsÀರವೇ ನಿನ್ನ ಮರಿಯಾದೆಯಲ್ಲಮರತರುವೇ ಕೃಪಾ ಕರನೇ ಸರ್ವರಿಗು ಸರಿಯಾಗಿ ಇರುತಿರುವಿ ಗುರುಜಗನ್ನಾಥ ವಿಠಲಾ ವತ್ಸಲಾ 5
--------------
ಗುರುಜಗನ್ನಾಥದಾಸರು
ಮನವೇ ಮರೆವರೇನೊ ಹರಿಯಾ ಪ ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ. ವಿಷಯ ಚಿಂತನೆ ಮಾಡಸಲ್ಲ ಮೇಷ ವೃಷನನಾದನು ಹಿಂದೆ ಪೌಲೋಮಿ ನಲ್ಲ ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1 ಧನವೆ ಜೀವನವೆಂಬಿ ನಿನಗೆ ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ ಪೋಪ ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2 ಹರಿದಾಸನಾಗಿ ಬಾಳೋ ಗುರು ಹಿರಿಯರ ಪಾದಕಮಲಕೆ ನೀ ಬೀಳೋ ನರರ ನಿಂದಾಸ್ತುತಿ ತಾಳೋ ದೇಹ ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3 ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ ಫಲಿಸದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ 4 ಜಿತವಾಗಿ ಪೇಳುವೆ ಸೊಲ್ಲಾ ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5 ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ ದಾನಂದ ಪಡು ಬಯಸದಿರುಭಯವಾ ಸಾನುರಾಗದಿ ಬೇಡು ದಯವಾ ನೀ ಮ ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6 ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ ಆವಾಗ ಚಿಂತಿಸು ಭೂಮ್ಯಾದಿ ಭೂತಾ ಜೀವಿಗಳೊಳು ಜಗನ್ನಾಥ ವಿಠಲ ಗಾವಾಸ ಯೋಗ್ಯವೆಂದರಿಯೋ ಸಂತತಾ 7
--------------
ಜಗನ್ನಾಥದಾಸರು
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ 1 ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು 2 ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ ಬಾಳುವದೆ ಮುಕ್ತಿ 3 ಅನ್ನದಾ ಸಮಯ ಇಲ್ಲದೆ ಕಂಡಲ್ಲಿ ತಿನ್ನಲೋಡಿ ಸಮಯವೆನ್ನದೆ ಅನ್ಯರ ಬದುಕ ಪಹರಿಸುವ ಖಲು ಗನ್ನ ಫಾತಕನೆನಿಸಿಕೊಂಬುವದೆ ತಮಸು 4 ಮೀಸಲಾ ಮನದಲ್ಲಿ ವಾಸುದೇವನ ನಿಜ ವಾಸರದಲ್ಲಿ ಜಾಗರಾ ಮಾಡುವಾ ಆಶೆಬಡಕನಲ್ಲ ದೇಶದೊಳಗೆ ಹರಿ ದಾಸನೆಂದು ಪೇಳುವುದೆ ಮುಕ್ತಿ 5 ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ ಕಥಾಶ್ರವಣ ಒಂದು ಕೇಳಲಿಲ್ಲ ಪಿತ ಮಾತರನ್ನ ಬೊಗಳುವ ನಾಯಿ ಕು ತ್ಸಿತನು ಎಂದೆನಿಸುವದೆ ತಮಸು 6 ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ ತೃಣ ಜೀವಾದಿಯ ಭೇದಬಲ್ಲನಿವ ಗಣನೆಮಾಡ ವಿಜಯವಿಠ್ಠಲನಲ್ಲದೆ ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ 7
--------------
ವಿಜಯದಾಸ
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ. ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1 ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2 ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3
--------------
ಶ್ರೀಶಪ್ರಾಣೇಶವಿಠಲರು