ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಳು ಸೌಖ್ಯದಿಂ ತನಯನೆ ಬಾಳು ಸೌಖ್ಯದಿಂ ಪ ಲೀಲೆಯೊಳನುದಿನ ಸಂತಸವಾಂತು ನೀಂ ಅ.ಪ. ಮುರಹರ ಪರಮಾಯುಷ್ಯವ ನೀಯಲಿ ಪೊಂದುತ ನಲಿಯುತ 1 ಇಂದ್ರನಂತೆ ವರ ಭೋಗವ ಪೊಂದುತ ಮಂದಿರಕಾನಂದವನಿತ್ತು 2 ಧರ್ಮ ಕಾರ್ಯವನ್ನಾಚರಿಸುತ ನೀಂ ಪೊಂದುತ ಸುಜನರ ಸೇವಿಸಿ 3 ಕೀರ್ತಿವಂತ ನೀನಾಗಿರು ಸರ್ವದ ಆರ್ತರನ್ನು ರಕ್ಷಣೆಯ ಗೈಯುತ 4 ಶಾರದೆ ನಿನ್ನಯ ಸೇರಲಿ ಸತತಂ ನಿತ್ಯವು ಸಲಹಲಿ ನಿನ್ನನು 5 ಅನ್ನಧಾನ ಧೇನುದಾನವ ಗೈಯುತ ಕನ್ಯಾದಾನವ ವಿರಚಿಸುತ ಮನ್ನಿಸಿ ಹಿರಿಯರ ಗುರುಗಳ ಸೇವಿಸಿ 6 ಮಾನವಂತ ನೀನಾಗಿರು ಸರ್ವದ ಜ್ಞಾನವಂತನಾಗಿರು ನಿರತಂ ಧೇನುಪುರೀಶನ ಶ್ರೀಶನ ಸ್ಮರಿಸುತ 7
--------------
ಬೇಟೆರಾಯ ದೀಕ್ಷಿತರು