ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀಚಕಾಂತಕ ಭೀಮಸೇನರಾಯ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ಪ ಕುಂತಿ ಜಠರೋದ್ಭವನೆ ಕುವಲಯದೊಳಗಿಪ್ಪಮ ಹಂತರಿಗೆ ಬಪ್ಪ ಜನ್ಮಾದಿರೋಗ ಚಿಂತೆಗಳ ಕಳೆದ ನಿಶ್ಚಿಂತರನು ಮಾಡು ಸ ರ್ವಾಂತರಾತ್ಮಕ ಸುಖದ ಸರ್ವೇಶ ಶಕ್ರಾದಿ ನುತ 1 ದ್ರೌಪದೀರಮಣ ಜ್ಞಾತಾಜ್ಞಾತ ಕರ್ಮಜ ಮ ಹಾಪರಾಧಗಲೆಸದನು ದಿನದಲಿ ನೀ ಪೊರೆಯಬೇಕುಪೇಕ್ಷಿಸದೆ ನಿನ್ನವರ ವಿ ವಿಶ್ವ ಚೇಷ್ಟಕನೆ 2 ಕೌರವಾಂತಕನೆ ಕಾಶ್ಯಪಿಸುತರ ಸಂತೈಪ ಭಾರ ನಿನ್ನದು ಭವದಿ ಭಕ್ತಬಂಧೋ ಪ್ರೇರಕ ಪ್ರೇರ್ಯ ರೂಪಗಳಿಂದ ಸರ್ವರ ಶ ರೀರದೊಳಗಾಡುವೆ ದೇವತೆಗಳೊಡನೆ 3 ಪವಮಾನತನಯ ಪಾಪಿಷ್ಠರೊಳಗಿದ್ದು ನಿ ನ್ನವರನೀಪರಿ ದಣಿಸಿ ನೋಡುತಿಹುದು ಭುವನತ್ರಯೇಶ ಭೂಷಣವೇನೋ ನಿನಗೆ ಸ ತ್ಕವಿ ಕುಲೋತ್ತಂಸ ಕಾವರ ಕಾಣೆ ನಿನ್ನುಳಿದು 4 ಧನಧಾನ್ಯ ಪಶುಪತ್ನಿ ಜ್ಞಾನಭಕುತಿ ತನಗೆ ತಾನೊದಗಿ ಬಪ್ಪುದು ಸುನಿಶ್ಚಯ ಸನಾ ತನ ಜಗನ್ನಾಥ ವಿಠ್ಠಲನೊಲುಮೆ ಪಾತ್ರ 5
--------------
ಜಗನ್ನಾಥದಾಸರು
ಗೋವಿಂದ ವಿಠಲ ನಿನ್ನ ವಂದಿಸುವೆ ಸ್ವಾಮಿನೀ ಒಲಿದು ರಕ್ಷಿಸುವುದು ಜೀವಿ ಇವ ಬಹುಕಾಲಸಾವ ಸಾವ ನಿನ್ನ ಸೇವೆಯೊಳಗೆ ಇಟ್ಟು ಕಾವುದು ನಿರುತ ಪ. ಆವ ಈ ಯುಗದಲ್ಲಿ ನಿನ್ನ ವಿಷಯರಾಗಿಈವ ಸುಜನರು ಸ್ವಲ್ಪರು ತಾ ವ್ಯಾಪಿಸಿ ಇಹರುಅಸುರರೆ ಬಹುಳಾಗಿ ಆವದವಸ್ಥೆಗಳಲಿನೀ ವರವನು ಕಲಿಗೆ ಇತ್ತ ಕಾರಣ ಉಪಜೀವರ ವ್ಯಾಪಾರಈ ವಿಧದಲಿ ತಳೆದು ನಿನ್ನ ಹುಡುಕುತಲಿನ್ನುಜೀವಿ ಸಾತ್ವಿಕನು ಮೊರೆಯಿಡಲು ಬಿನ್ನಯಿಸಿದೆನೊ 1 ಏನು ಸಾಧನವನು ಖೂಳವನು ಕಂಡಿನ್ನುನೀನು ವಂದಿಸಿವೆಂದರೆ ಜ್ಞಾನಭಕುತಿ ಉಳ್ಳಜ್ಞಾನಿಗಳಲಿವಗೆ ನಾನು ಕಂಡೆನು ಭಕುತಿಯಕ್ಷೋಣಿಯಲಿ ಭಕುತಿ ನಿನ್ನಲಿ ಪುಟ್ಟಲಿಬಹುದುಜ್ಞಾನಿಗಳ ದುರ್ಲಭ ನೀನು ಒಲಿವುವ ಅವಗೆನಾನವರಲಿ ಭಕುತೀವೆ ನಾನಾಸಾಧನ ಫಲವಿದೆ ನೋಡಾ 2 ಪ್ರಾರ್ಥಿಸುವೆ ನಾ ನಿನ್ನ ಪ್ರೇರಣೆಯ ಅನುಸಾರಕೀರ್ತಿ ನಿನ್ನದು ಜಗದೊಳು ಪಾತ್ರ ಇವನೆಂದುನಿನ್ನ ಚಿತ್ತದಲಿ ಇತ್ತೆ ಸಾರ್ಥಕನ ಮಾಡು ಚೆಂ ಸ್ವಾ ?ಕೀರ್ತನೆಯ ಮಾಡಿಸು ನಿನ್ನ ಪರವಾಗಿ ನಿಜಸ್ಫೂರ್ತಿಸಖರಂಗ ಗೋಪಾಲವಿಠಲ ಶ್ರುತಿಶಾಸ್ತ್ರಾರ್ಥವನುಸಾರ ಪ್ರಾಪ್ತಿ ನೀನಾಗಿವಗೆ3
--------------
ಗೋಪಾಲದಾಸರು
ಜಯ ಗೋಪಾಲ ವಿಠಲ | ದಯೆ ತೋರೋ ಇವಗೇ ಪ ನಯ ವಿನಯದಿಂ | ನಿನ್ನ | ದಾಸ್ಯಕಾಂಕ್ಷಿಪಗೇ ಅ.ಪ. ಜ್ಞಾನ ವಿರಹಿತನಾಗಿ | ಅನೇಕ ಜನುಮಗಳುಹೀನಯೋನಿಯ ಪೊಂದಿ | ಜನಿಸಿಹನು ಇವನೂಮಾನನಿಧಿ ಮೋಹನ್ನ | ದಾಸರರೊಲಿಮೆಯಲಿಂದಆನಂದ ಮುನಿ ಮತದಿ | ತನುವ ಪೊತ್ತಿಹನೊ1 ಲೇಸು ಮೋಹನರಾಯ | ದಾಸವಂಶದಿ ಬಂದುಆಶುಗಾಧ್ಯಾತ್ಮರಾ | ಹಸ್ಯ ವರಿಯದಲೇದಾಸ ದೀಕ್ಷೆಯ ನಡೆಯೆ ಆಶಿಸುತ್ತಿಹಗೆ ಉಪದೇಶವಿತ್ತೆ ನಿನ್ನಾ | ದೇಶ ಸುಸ್ತೀಶಾ 2 ಲೌಕಿಕದ ಬಹು ಮೋಹ | ನೀ ಕಳೆದು ಸುಜ್ಞಾನಭಕುತಿ ವೈರಾಗ್ಯಗಳ | ನೀ ಕೊಡುವುದ್ಹರಿಯೇಮಾಕಳತ್ರನೆ ತವಾ | ಲೌಕಿಕಸುಮಹಿಮೆಗಳಸಾಕಷ್ಟು ತಿಳಿಸುತ ಲೋಕದಲಿ ಮೆರೆಸೊ 3 ಸೊಲ್ಲು ಸೊಲ್ಲು ಸಲಿಸುವುದ್ಹರಿಯೆಖುಲ್ಲ ಜನದಲ್ಲಣನೆ | ಗೊಲ್ಲ ಗೋಪಾಲಾ 4 ಬೋವ ಶ್ರೀಹರಿ ಇವನಶೈವಲಾವರಣ ಕಳೆ | ದೀವುದೋಜ್ಞಾನಾಕೈವಲ್ಯದಾತ ಗುರು | ಗೋವಿಂದ ವಿಠ್ಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಭಾರತೀ ಪತಿನುತ ವಿಠಲ ನೀನಿವಳ ಉದ್ಧಾರ ಮಾಡುವುದು ಹರಿಯೇ ಪ ತಾರಕನು ನಿನಗನ್ಯ ಉಂಟೇ ಈರೇಳು ಲೋಕದಲಿ ಧೊರೆಯೇ ಅ.ಪ. ಜನ್ಮಜನ್ಮದಲಿ ಬಲುನೊಂದು ಸತ್ಪುಣ್ಯಗಳನೇ ಮಾಡಿಜನ್ಮಪೊಂದುತಲಿ ಸತ್ಕುಲದಿ ಸನ್ಮತದವನ ಕೈಯ ಪಿಡಿದು |ಸನ್ಮಧ್ವಮತ ದೀಕ್ಷೆಗಳ - ಒಮ್ಮನದಿ ತಾಳುತ್ತನಿಮ್ಮಡಿಯ ನಾಶ್ರಯಿಸಿ ಬಂದಿಹಳ ಸಲಹುವುದು 1 ತರತಮ ಜ್ಞಾನದಲಿ - ಉರುತರೋತ್ಸುಕತೆಯನುನಿರತ ಹರಿಗುರುಗಳಲಿ ಉರುತರದ ಭಕ್ತಿಯನೂ |ಹಿರಿಯರನು ವಿನಯದಿಂ ಪರಿಚರಿಪ ಮತಿಯನ್ನುಕರುಣಿಸೀ ಸಲಹಯ್ಯ ಮರುತಾಂತರಾತ್ಮಾ 2 ಪಂಚಭೇಧದ ಜ್ಞಾನ ಸಂಚಿಂತನೆಯನೇ ಕೊಟ್ಟುಮಿಂಚಿನಂದದಿ ತೋರೊ - ಹೃತ್ಪಂಕಜನಲೀಅಂಚೆವಹಪಿತ ನಿನ್ನ ಪದಕಮಲ ಭಜಿಪಳಿಗೆವಾಂಛಿತಾರ್ಥದನಾಗಿ - ಸಲಹ ಬೇಕಿವಳಾ 3 ಪತಿ ನೀನೆ ಎಂಬಂಥಮತಿಯಿತ್ತು ಭವಗಳನ ಉತ್ತರಿಸು ಹರಿಯೇ 4 ನಿನ್ನ ಪದ ಕಮಲದಲಿ ಜ್ಞಾನಭಕುತಿಗಳಿತ್ತುನನ್ನೆ ಯಿಂದಿವಳ ಚೆನ್ನಾಗಿ ಸಲಹೊ ಹರಿಯೇ |ಸನ್ನುತಿಸಿ ಪ್ರಾರ್ಥಿಸುವೆ - ಮನ್ನಿಸೆನ ಬಿನ್ನಪವಘನ್ನ ಮಹಿಮನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ. ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ. ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ 1 ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ 2 ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ 3
--------------
ವಾದಿರಾಜ
ಯೋಗಿ ವಲ್ಲಭನ ಅನುರಾಗವನು ಪಡೆದವಗೆ ಲಾಗವೆಲ್ಲವು ದೊಡ್ಡ ಯೋಗವಾಗುವುದು ಪ ಹೋಗಿ ಗಂಗೆಯ ತೀರದಲಿ ಬಾವಿ ತೋಡಿದರೂ ಬೇಗ ಸಿಗುವುದು ದಿವÀ್ಯ ಬಲಮುರಿಯ ಶಂಖವು ಅ.ಪ ಮಾಧವನ ಪರಮ ಕರುಣವ ಪಡೆದ ಮನುಜನಿಗೆ ಹೋದ ಕಡೆಗಳಲಿ ದೊರೆಕುವುದಾದರೆ ಮೂದಲಿಸುವರ ಮನವು ಕಾದ ಬೆಣ್ಣೆಯು ಕರಗಿ ಹೋದ ತೆರದಲಿ ಕ್ಷಣದಿ ಸಾಧುವಾಗುವುದು 1 ವೇದಾಂತ ರಾಜ್ಯದಲಿ ಜ್ಞಾನಭಕುತಿಗಳಿಂದ ಮೋದ ಪಡಿಸುವನು ಕಾದ ಮರುಭೂಮಿಯಲಿ ಸಕಲ ಸಂಪತ್ತುಗಳ ಸಾಧಿಸುವ ಬೇಧಿಸುವ ವಿಘ್ನರಾಶಿಗಳನ್ನು 2 ಕುರುಡ ನೋಡುವನೆಲ್ಲ ಕಿವುಡ ಕೇಳುವನೆಲ್ಲ ಗುರುವರ ಪ್ರಸನ್ನ ನೀ ಮರುಕ ತೋರಿದರೆ ಕರಡಿ ಕೈ ಗೊಂಬೆಯಾಗುವುದು ಕೈಗೊಂಬೆಯು ತ್ವರಿತದಲಿ ಕಲ್ಪತರುವಾಗಿ ಕೊಡುವುದು ಫಲವ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಜಗನ್ನಾಥದಾಸರ ಸ್ತೋತ್ರ138ಬಾಗುವೆ ಶಿರಪುರಂದರವಿಜಯಗೊಪಾಲಜಗನ್ನಾಥ ನಿನಗೂ ನಿನ್ನ ದಾಸರು ಸರ್ವರಿಗೂ ಪಜಗನ್ನಾಥದಾಸರ ನಾಮವರ್ಣಂಗಳಲಿಜಗನ್ನಾಥ ನೀಪೋಳೆದು ಸ್ಮರಿಪರ ಪಾಲಿಸುವಿ ಅ ಪ`ಜ' ಎನಲುಅಜಅಭಯಅಮೃತ ಉರುಕ್ರಮಅನಘಘನದಯದಿ ಭವವ ನದಿ ಸುಲಭದಿದಾಟಿಸುವಿ`ಗ' ಎನಲು ನಿಗಮೈಕ ವೇದ್ಯ ಪೀಡೆಗಳಳಿದುಜ್ಞಾನಭಕುತಿಗಳಿತ್ತು ಕಾಯ್ವ ವಿಪಗಮನ 1`ನಾ' ಎನಲು ಶ್ರೀಶಹರಿ ಬ್ರಹ್ಮಶಿವ ಮುಖವಂದ್ಯಆನತೇಷ್ಟಪ್ರದನೇ ಸೌಭಾಗ್ಯವೀವಿ`ಥ' ಎನಲು ರಕ್ಷಿಸುವಿ ಶ್ರೀ ಕೃಷ್ಣ ಗೋವಿಂದಅನ್ನಾದ ಅನ್ನದನೆ ಗಿರಿಧರ ಅನೀಶ 2ನರನರಪ ಗಂಧರ್ವ ಪಿತೃ ಋಷಿ ಸುರವೃಂದಸ್ಮರಗೋಪ ಗೌರೀಶ ಭಾರತೀ ವಾಣಿವರವಾಯು ವಿಧಿವಿನುತ ಶ್ರೀವಿಭಾವ ನವಿಭೋಪ್ರಸನ್ನ ಶ್ರೀನಿವಾಸ ಜಗನ್ನಾಥ ಶರಣು 3
--------------
ಪ್ರಸನ್ನ ಶ್ರೀನಿವಾಸದಾಸರು