ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ | ಆನಂದ ಜನನದಲಿ ಜನನಗಳ ನೀಗಿರೊಪ ಮಲಗಿ ಏಳುವಾಗ ಮಾತುಗಳನಾಡುವಾಗ | ಇಳಿಯ ಮೇಲಡಿಯಿಟ್ಟು ತಿರುಗುವಾಗ || ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ | ಮಲಿನ ಸಂಕರನಳಿದಮಲಬೋಧನ ನೆನೆಯಿರೊ 1 ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ | ಪಾವಕಾವನಿ ಸುರರ ಉಣಿಸುವಾಗ || ಕೋವಿದರ ಸಂಗಡ ಸಂತೋಷಬಡುವಾಗ | ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ2 ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ | ಪ್ರತಿ ದಿವಸÀ ಷಟ್ಕರ್ಮ ಮಾಡುವಾಗ || ಪತಿತ ಪಾವನ ವಿಜಯವಿಠ್ಠಲನ ಭಜಿಪ ಸದಾ |ಗತಿಯಾದ ಸುಜನರಿಗೆ ಯತೀಶ್ವರನ ನೆನೆಯಿರೊ3
--------------
ವಿಜಯದಾಸ
ವಾದಿರಾಜರ ಪದವ ಸ್ಮರಿಸುವೆ ಅ- ಗಾಧ ಮಹಿಮರ ಸದಯ ಹೃದಯರ ಪ ಸಾಧು ಜನರಿಗೆ ಬೋಧಿಸಿರ್ಪರ ಗೆದ್ದು ಮುತ್ತಿನ ಪೀಠವೇರ್ದರ 1 ಮೋದದಿಂದ ಚರಿಸಿ ತೀರ್ಥ ಪ್ರ- ಬಂಧ ಗ್ರಂಥವ ರಚಿಸಿ ಮಾನ್ಯರಾ ಗಿರ್ದ ಗುರುಗಳನೆಂತು ಬಣ್ಣಿಪೆ 2 ರಾಜಸಭೆಯೊಳು ರಾಜಭೀಷ್ಮಕ ತನುಜೆಯರಸನ ಸ್ತುತಿಪ ಕಾವ್ಯವ ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ ದಿದನೆ ಗಜದೊಳು ಮೆರೆಸಿದರಸನು 3 ಒಂದುನೂರ ಇಪ್ಪತ್ತು ವರ್ಷದೊಳ್ ಸಿಂಧುಶಯನನ ಸೇವಿಸುತ್ತಲಿ ಇಂದ್ರದತ್ತ ವಿಮಾನದಿಂದಲಿ ಸತ್ಯಲೋಕವನೈದಿದ ಗುರುವರ 4 ರಾಜೇಶ ಹಯಮುಖಾನಂತ ಗುಣಗಳ ಪೊಗಳುತಿರ್ಪರ ರಾಗಶೂನ್ಯರ ಋಜು ಗಣೇಶರ ಜ್ಞಾನಪೂರ್ಣರ 5
--------------
ವಿಶ್ವೇಂದ್ರತೀರ್ಥ
ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ ಭೋಗಿಶಯನಪ್ರಿಯಗೆ ಶುಭಮಂಗಳ ಪ. ಆನಂದರತ್ನರು ಜ್ಞಾನಪ್ರಕಾಶ ಎಂದು ನಾನಾ ವಿಧದಿ ಬಿರುದು ಪೊತ್ತವಗೆ ಶ್ರೀನಿವಾಸನನು ಧ್ಯಾನವ ಮಾಳ್ಪಂಥ ಜ್ಞಾನಪೂರ್ಣರಾದ ಗುರುಗಳಿಗೆ 1 ಪರಮಪ್ರಿಯರು ಪರಿಮಳರೆಂದೆನಿಸುತ ಪರಿ ನಾಮವ ಧರಿಸಿಹಗೆ ನರಸಿಂಹನನು ಹೃತ್ಸರಸಿಜದಲಿ ಕಂಡು ಹರುಷವ ಪಡುವಂಥ ಗುರುಗಳಿಗೆ 2 ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ ಚಂದದಿಂದ ಗುರುಗಳಿಂ ಪಡೆದವಗೆ ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ ಬಂಧನವ ಬಿಡಿಸುವ ಗುರುಗಳಿಗೆ 3 ಚಂದ್ರನ ತೆರದಿ ಪರಮಾರ್ಥ ಚಂದ್ರೋದಯವ ನಿರ್ಮಿಸುವರಿಗೆ ಚಂದದಿಂದ ಪರತತ್ವ ಪೇಳುವ ಸುಂದರ ಮೂರುತಿ ಗುರುಗಳಿಗೆ 4 ಅಪಾರ ಕರುಣಾಜಲಧಿ ಎಂದೆನಿಪರಿಗೆ ಶ್ರೀಪತಿ ಪಾದವ ತೋರ್ವಂಗೆ ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತುಕಾಪಾಡುವಂಥ ಶ್ರೀ ಗುರುಗಳಿಗೆ 5
--------------
ಅಂಬಾಬಾಯಿ