ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂತರಾ ಪದವಿಡಿಯೋ ಪ ಸಂತರಾ ಪದವಿಡಿಯೋ | ಭ್ರಾಂತಿಗಳೆಲ್ಲಾ ಕಡಿಯೋ | ಅಂತಭಾವನೆಯಿಂದ ತಂತುವಿಡಿದು ನಿಜ | ಶಾಂತಿಸುಖವ ಪಡಿಯೋ ಮನುಜಾ | ಶಾಂ | 1 ಡಾಂಭಿಕಾತನಗಳೆದು | ಬೆಂಬಲಗುಣವಳಿದು | ಹಂಬಲಿಸದೇ ಮನ ಸ್ತಂಭಪರಿಯ ಮಾಡಿ | ನಂಬುಗೆ ದೃಢ ತಳೆದು ಮನುಜಾ | ನಂ | 2 ನಾನಾರೆಂಬುದು ಮರೆದೀ | ಜ್ಞಾನದೆಚ್ಚರ ತೊರೆದೀ | ಕಾನನ ಹೊಕ್ಕಂತೆ ನಾನಾ ಸಾಧನದಿಂದ | ಏನ ಸುಖವ ಪಡೆದೀ ಮನುಜಾ | ಏ | 3 ಸುಲಭವೇ ಮಾನುಷ ಜನ್ಮ | ಮ್ಯಾಲ ಅಗ್ರಜ ಧರ್ಮಾ | ಚಲಿಸಲಿ ಪರಿಮತ್ತೆ ಇಳೆಯೊಳು ದೊರಕುದೇ | ತಿಳಿನಿಜಗತಿ ವರ್ಮಾ ಮನುಜಾ | ತಿ| 4 ಕೋಟಿ ಮಾತಿಗೆ ವಂದೇ | ನೀಟ ಸುಪಥವಿದೇ | ಧಾಟಿಲಿ ಮಹಿಪತಿ ಸುತ ಪ್ರಿಯನೊಲುಮೆಯಿಂದ | ಕೋಟಿಳಗಳಿನಿಳದೇ ಮನುಜಾ | ಕೋ | 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಳೆಯದಾಯಿತು ಕಾಯಾ ಇನ್ನಾರೇ | ತಿಳಿ ಸ್ವಹಿತೋಪಾಯಾ ಪ ಬಾಲಕನಾಗಿ ಕೆಲವು ದಿನ ಕಳೆದೀ | ಮೌಲ್ಯ ಯೌವ್ವನದಲಿ ಉನ್ಮತ್ತನಾದಿ 1 ಸಡಿಲುತ ಬಂದವು ಅಂಗಮಾಟಗಳು | ವಡಮೂಡದು ವಿವೇಕ ಬುದ್ಧಿಗಳು 2 ಮಂಡೂಕ ಸರ್ಪ ನೋಡದೆ ಭರದಿ | ಅಂಡಲುವದು ನೊಣಕದೇ ಪರಿಯಾದಿ 3 ಏನಾದರಾಗಲಿ ಹಿಂದಿನ ಕರಣೆ | ಜ್ಞಾನದೆಚ್ಚರ ಹಿಡಿ ಮನದೊಳು ಪ್ರಾಣಿ 4 ಗುರುವರ ಮಹಿಪತಿ ನಂದನ ಪ್ರಿಯನಾ | ಅರಿತರೆ ಬಂದದೆ ಸಾರ್ಥಕ ಖೂನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು