ಕಂಗಳಿದ್ಯಾತಕೋ ಚಿನುಮಯ ರಂಗನ ನೋಡದಾ
ಸಂಗರಹಿತಾತ್ಮನ ನೋಡದಾ ಪ
ಶರೀರವೇ ತಾನೆಂದು ನಂಬಿ ಮೆರೆದು ನಿಜಾನಂದವನ್ನು
ದೃಷ್ಯಂಗಳನ್ನು ನೋಡುವಾ 1
ತಾನಿದ್ಯಾರು ತನಗೆ ತೋರ್ಪ ತನುವಿದೇನೆಂದರಿವುತಿರ್ಪ
ಜ್ಞಾನದೃಷ್ಟಿಯಿಲ್ಲದಂಥ ಆನನಂಗಳನು ನೋಡುವ 2
ಹಂಸ ತಾನಾಗಿ ಚರಿಪ ಹಂಸನ ಪ್ರಕಾಶವನ್ನು
ಶುಂಶುಮಾರದಿ ಬೆಳಗುತಿರ್ಪಭ್ರಂಶಿತಾಂ ತನ್ನ ನೋಡದಾ 3
ಸಂತಸಾಧು ಚರಣಕ್ಕೆರಗಿ ಚಿಂತೆಗಳನು ಹರಿದು ಭರದಿ
ಶಾಂತಿ ಸುಖವನಿತ್ತ ಗುರು ಶಾಂತಮೂರುತಿ ನೋಡಲಾರದ 4