ಒಟ್ಟು 10 ಕಡೆಗಳಲ್ಲಿ , 10 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವವಿವೇಚನೆ ಅಂತರಂಗದ ಕದವು ತೆರೆಯಿತಿಂದು ಪ ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ 1 ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ 2 ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ ಜ್ಞಾನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ ಶೃಂಗಾರಸದನ 3 ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಪರ ದಾರಿಗೆ ಪ್ರಾಣ ಜಯವಿಜಯರು || ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ | ಸರಸಿಜನಾಭನ ಅರಮನೆಯ ಸೊಬಗು 4 ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ | ರಮೆಧರೆಯರಿಂದಲಾಲಿಂಗಿತ್ವದಿ || ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- | ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ 5
--------------
ವಿಜಯದಾಸ
ಎಂದಿಗಾದರೂ ನಾನು ಮರೆಯೆ ಗುರುವಿನತಂದು ಪೂಜಿಸು ತ್ರಿನಯನ ಪ್ರಾಣದೊಡೆಯನ ಪ ಅಂಬು ಹೂಡಿದ |ತಾಮಸದ ಗುಣಗಳನು ಕಡೆಗೆ ಮಾಡಿದರಾಮ ರಾಮ ಎಂಬ ಬೀಜ ಮಂತ್ರ ನೀಡಿದ 1 ಕಾಣ ಬಂತು ಜಗವು ಎನಗೆ ರಾಮರೂಪವುತಾನು ತಾನೆ ಉದಯವಾಯ್ತು ಜ್ಞಾನದೀಪವು |ಏನು ಪೇಳಲಿ ಕರಗಿ ಹೋಯ್ತು ಮನದ ತಾಪವುಸ್ವಾನುಭಾವದಲಿ ನಾಸ್ತಿ ಪುಣ್ಯಪಾಪವು 2 ಎರಡು ಪಕ್ಷ ಮೀರಿಹ ಗುಣಾತೀತನಪರಬ್ರಹ್ಮ ಪರಂ ಜ್ಯೋತಿ ಸದೋದಿತನ |ಕರುಣಸಿಂಧು ತಂದ ಜ್ಞಾನಬೋಧ ತಾತನಹರುಷ ಪೂರ್ಣವಾಗಿ ಸುಖವ ಕೊಡುವ ದಾತನ 3
--------------
ಜ್ಞಾನಬೋದಕರು
ಜನುಮ ಸಾರ್ಥಕವ ಮಾಡಿಸು ತಂದೇ ನೆನೆವರ ಕಾವನು ನೀನೆಂದು ಬಂದೇ ಪ ನಾನಿರುವುದು ಲೌಕಿಕರ ಸಮೂಹ ಏನ ಗೈವುದೋ ಪ್ರಪಂಚದ ಮೋಹ 1 ಅಜ್ಞನು ನಾ ನನ್ನದೆಂಬುದ ಬಿಡಿಸು ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು 2 ಅಜ್ಞನಾ ಯೆನ್ನಪರಾಧಾವ ಕ್ಷಮಿಸು ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು 3 ಹಗಲಿರಳು ಯನ್ನ ಹೆಗಲೊಳು ಕುಳಿತು ಮಿಗಿಲಾಗಿಸು ದಿನ್ಯ ಸೇವೆಗಳನಿತು 4 ನಾಲಗೆ ಮಧ್ಯದಿ ನೀ ನಲಿದಾಡಿ ಬಾಳುವೆಯೆಲ್ಲವು ಭಜಿಪುದ ಮಾಡಿ 5 ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು ಉನ್ನತವೈಭವ ತೋರು ಮನಗೊಂಡು 6 ಜಾಜೀಕೇಶವ ಜಯ ಪದವಿತ್ತು ರಾಜೀವಾಂಬಕ ಪೊರೆ ಭಾರಪೊತ್ತು 7
--------------
ಶಾಮಶರ್ಮರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ಬಾರವ್ವ ಜಗದಂಬೆ ಶರಣೆಂದು ಬಲಗೊಂಬೆ | ಪಾದ ಪದ್ಮ ಪೂಜೆಗೊಳೆ ಸುಖದಿಂಬೆ ಪ ಕೈವಲ್ಯ - ಗತಿ - ದಾಯಿ ಮೂರು ಲೋಕದಾ ತಾಯೀ ಆವಾಗ ನೆನೆವೆ ನಿಮ್ಮ ಅರ್ಥಿಯಿಂದಾತುಕೊ ಬಾಯೀ 1 ಅಷ್ಟದಳ ಗದ್ದುಗೆಯಲಿ ಭಕ್ತಿರಂಗ ಹಾಕಿರಲೀ ಇಷ್ಟೇನು ಜ್ಞಾನದೀಪಾ ಕಟ್ಟಿ ನಿಜದ್ಯಾಸ ಮಾಲೀ2 ವೇದಶಾಸ್ತ್ರಗಳಿಗೆ ಮುನ್ನೆ ಮಹಿಮೆ ತಿಳಿಯದು ಪ್ರಸನ್ನೆ ಸುರರು ನಮೋ ಎನ್ನೆ3 ಅನುವಾಗಿ ನಾಮ ಪಾಡಿ ಗೊಂದಲ್ಹಾ ಕುವೆನುಛಂಧಾ4 ಕೊಂಡಾಡುತಿಹೆ ನಿನ್ನ ಗುರು ಮಹಿಪತಿಜನಾ ಮಂಡಿಮ್ಯಾಲ ಕೈಯನಿಟ್ಟು ಪಾಲಿಸೇ ಅನುದಿನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆವುದುಚಿತವೆ ರಂಗ ದಾರಿ ತೋರಿ ಪ ಯೆನ್ನ ಕಾವರನ್ಯರಿಲ್ಲ ನೀಲಾಂಗ ಅ.ಪ ಧರೆಯ ವೈಭವ ನಿತ್ಯವೆಂದು ಪರರ ಸಿರಿಯ ಹರಣಗೈದು ನಿರುತ ದುರಿತಕಾರ್ಯಗೈದು ಪರಮ ಪಾಪಿಯಾದೆನೆಂದು 1 ಕರುಣಶರಧಿ ನೀನೆಯೆಂದು ಸ್ಮರಿಸುವವರ ಪೊರೆವನೆಂದು ಶರಣಜನರು ಬಳಿಗೆ ಬಂದು ಕರೆಯದಿಹರೆ ದೀನಬಂಧು 2 ಅಂಗದಿಂದ ಗೈದ ಪಾಪ ಕಂಗಳಿಂದ ಗೈದ ಪಾಪ ಭಂಗಗೈವರಿಲ್ಲ ಭೂಪ ಮಾಂಗಿರೀಶ ಜ್ಞಾನದೀಪ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಿನುತ ಪದ ಪ ಭವ ಸರ್ವಜೀವ ಹೃದ್ವನಜ ನಿವಾಸಿ ಅ.ಪ ಕಾನನ ಗಂಭೀರ ಸುಗುಣದಾರ ಸುವಿಚಾರಧೀರ | ರಘು ಧರಣಿಜಾ ಕರುಣಾಕರ ದಿನಕರ ಕುಲಮಣಿ ಜನ ವರ ಶುಭಕರ1 ಖರವಿದಾರ ಕಲಿ ಕಲ್ಮಷನಾಶನ ನಾಮ ಶ್ರೀಕರ ಸುಂದರ ಶ್ಯಾಮ ಭಾಸುರ ಶರೀರ ಸಂಪೂರ್ಣ ಕಾಮ ತುಳ- ಸೀದಳಧಾಮ ವಿಭೀಷಣ ಪ್ರೇಮ 2 ಕಮಠ ಕಿಟ ನರಹರಿ ವಾಮನರೂಪ ಭಾರ್ಗವ ಕರಧೃತ ಚಾಪ ಸುಜ್ಞಾನದೀಪ ವಸುದೇವ ತನಯ ಜಿನ ಜಾತ ಕಲ್ಕಿ ಗುರುರಾಮ ವಿಠಲ 3
--------------
ಗುರುರಾಮವಿಠಲ
ಸುಜನ ಬುಧಗೇಯ ಮೇದಿನೀ ಸುರವಂದ್ಯ ಶ್ರೀಪಾದರಾಯ ಪ ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪಸಕಲ ಸತ್ಯಸ್ಥಾಪ ಸುಜ್ಞಾನದೀಪಪ್ರಕಟ ಪಾವನರೂಪ ಅರಿಕುಜನ ಮತಲೋಪನಿಕಟ ವರ್ಜಿತ ಪಾಪ ಕೀರ್ತಿ ಪ್ರತಾಪ 1 ಭೃಂಗ ಶುಭ ಚರಿತಾಂಗ ಷಟ್ಫಾಸ್ತ್ರಸÀಂಗ 2 ಸಿರಿಕೃಷ್ಣ ದಿವ್ಯ ಪಾದಾಬ್ಜ ಚಿಂತಾಲೋಲವರ ಹೇಮವರ್ಣಮುನಿಪತಿಯ ಸುಕುಮಾರಗುರುತಿಲಕ ಶ್ರೀಪಾದರಾಯ ಅಮಿತೋದ್ಧಾರಶರಣ ಜನ ಸುರಧೇನು ಭಕ್ತಮಂದಾರ 3
--------------
ವ್ಯಾಸರಾಯರು
ಸುಮ್ಮನೆ ಬರುವುದೆ ಮುಕ್ತಿ ಗುರುಧರ್ಮಭಿಕ್ಷವ ಬೇಡಿದವಗೆ ಸುಕೀರ್ತಿಮನದಲ್ಲಿ ದೃಢವಿರಬೇಕು ದುಷ್ಟಜನಸಂಸರ್ಗಗಳನು ಬಿಡಲಿಬೇಕುಕಾಮಕ್ರೋಧವ ಬಿಡಬೇಕು ಹರಿನಾಮ ಸಂಕೀರ್ತನೆಯನು ಮಾಡಬೇಕುವ್ಯಾಪಾರ ವರ್ಜಿಸಬೇಕು ಜ್ಞಾನದೀಪದ ಕಾಂತಿಯಲ್ಯೋಲಾಡಬೇಕು
--------------
ಗೋಪಾಲದಾಸರು