ಮನವೇ ಬರಿದೇ ಚಿಂತಿಸಲಿ ಬ್ಯಾಡಾ |
ಹರಿಚರಣ ಸ್ಮರಿಸಿ ಸುಖಿಯಾಗು ಕಂಡ್ಯಾ ಪ
ಕರ್ಮ ಜನಿತ ಲಾಭಾ ಲಾಭ |
ವಿಧಿ ವರೆದ ಪರಿಯಾ |
ತನ್ನಿಂದ ತಾನೇ ಬಹದೆಂದು ಖರಿಯಾ |
ಇನ್ನು ತಾ ಬಯಸಿದರೆ ಬಾರದರಿಯಾ |
ನಿನ್ನೊಳು ನೀ ತಿಳಿದು ನಂಬು ಹರಿಯಾ 1
ಬಸಿರೊಳಗ ಬೆಳೆಸಿ ಶಿಶುತನದಿಂದ ಯೌವನದ |
ದೆಸೆಗೊಟ್ಟು ಸಲುಹಿದ ನಲ್ಲವೇನೋ |
ಬಿಸಜಾಕ್ಷ ಅಸಮರ್ಥನಾದನೇನೋ |
ಕುಶಲ ನಾನೆಂದ-ಹಂಕರಿಸಿದೇನೋ 2
ಬೊಂಬಿಯಾನು ಆಡಿಸುವ ಸೂತ್ರಧಾರಕನಂತೆ |
ಇಂಬಾಗಿ ಕುಣಿಸುವನು ಪ್ರಾಣಿಗಳನು |
ಡಿಂಬಿನೊಳು ನಿಂತು ತಾ ಚೇತಿಸುವನು |
ಕುಂಭಿನಲಿ ಸ್ವತಂತ್ರನಲ್ಲ ನೀನು |
ಅಂಬುಜನಾಭನ ಲೀಲೆಯೆಂದು ಕಾಣು 3
ಬದಿಲಿದ್ದ ಪಾತ್ರೆಯನು ಬಾವಿಯೊಳಗದ್ದಿದ್ದರೆ |
ಉದಕ ತುಸು ಬಹದೆಂದು ನುಡಿದು ಸೊಲ್ಲಾ |
ನದಿಯೊಳೆದ್ದಲು ನೀರು ಹೆಚ್ಚದಲ್ಲಾ |
ಇದನರಿಯದೆವೆ ಭ್ರಾಂತಿಯೊಳಗ ಖುಳ್ಳಾ |
ಕುದಿದು ಸಂಸಾರದಲಿ ಸೊರಗಿದನೆಲ್ಲಾ 4
ಗುರು ಮಹಿಪತಿಸ್ವಾಮಿ ಬೋಧಾಮೃತವ ಸವಿದು |
ಹರಿಚರಣದಲಿ ಭಾರವಪ್ಪಿಸಿಟ್ಟು |
ದೊರಕಿದದರಿಂದ ಸಂತುಷ್ಟಬಟ್ಟು |
ಸ್ಥಿರಚಿತ್ತನಾಗಿ ಕಳವಳಿಕೆ ಬಿಟ್ಟು |
ತರುಣೋಪಾಯದ ತಿಳಿಯೋ ಜ್ಞಾನಗುಟ್ಟು 5