ಬದರೀನಾಥ ವಿಠಲ | ಪೊರೆಯ ಬೇಕಿವನಾ ಪ
ಸದಯ ಹೃದಯನೆ ಇವಗೆ | ಮುದವನ್ನೆ ಬೀರತಲಿಹದುಳದಲಿ ಕೈಪಿಡಿದು | ಕಾಪಾಡೊ ಹರಿಯೇ ಅ.ಪ.
ಮೇಶ ಮಧ್ವೇಶ ಮಹಿ | ದಾಸ ನಿನ್ನಡಿ ದಾಸ್ಯಆಸಿಸುವ ಬಾಲಕನ | ಆಶೆಯನು ಸಲಿಸೀ |ಕ್ಲೇಶಗಳ ಪರಿಹರಿಸಿ | ನೀ ಸಲಹೆ ಭಿನ್ನವಿಪೆಹೇಸದಾಗತಿ ವಂದ್ಯ | ವಾಸವಾನುಜನೇ 1
ಲೌಕಿಕದ ಸಂಪತ್ತು | ಬೇಕಾದ ವರವಿತ್ತುಕಾಕು ಸಂಗವ ಕೊಡದೆ | ನೀಕಾಯ ಬೇಕೋ ||ತೋಕನಿಗೆ ನಿನ್ನಲ್ಲಿ | ಭಕುತಿ ಜ್ಞಾನಗಳಿತ್ತುಲೌಕಿಕವನೆಲ್ಲ ವೈ | ದೀಕ ವೆಂದೆನಿಸೋ 2
ಮೋದ ಕೊಡು ಸತತಾ 3
ಸ್ವಾಪದಲಿ ಮತ್ಸ್ಯಾದಿ | ರೂಪಗಳ ಸ್ತೋತ್ರವೆನೆವ್ಯಾಪಾರ ಮಾಡಿಸುತ | ಕೃಪೆ ತೋರ್ದೆ ಹರಿಯೇವೈಪರೀತ್ಸದ ಮನದ ಚಾಪಲ್ಯ ಕಳೆಯಲ್ಕೆಸ್ವಾಪದಲಿ ಸೂಚಿಸುತ | ನೀಪೇಳ್ದೆ ಧೃಡವಾ 4
ಪತಿ ವಿನುತ | ನಾರಾಯಣಾಖ್ಯ ಹರಿಘೋರಭವ ಕೂಪಾರ | ಪಾರಗಾಣಿಸುವಾಭಾರ ನಿನ್ನದು ಎಂದು | ಪೋರನ್ನ ಒಪ್ಪಿಸಿಹೆಧೀರ ಗುರು ಗೋವಿಂದ | ವಿಠಲ ಪೊರೆ ಇವನಾ 5