ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೆಣ್ಣೆಂದರಿದು ಮೆಚ್ಚಿ ಕೆಡಬೇಡ ನಿನ್ನ ತಿನ್ನುವ ಮರಿಗಿದು ತಿಳಿ ಮೂಢ ಪ ತಾಯಾಗಿ ಮೊದಲು ನಿನ್ನ್ಹಡೆದಿಹ್ಯದು ಪುನ: ಮಾಯಾಗಿ ಬೆನ್ನ್ಹತ್ತಿ ಸುಡುತಿಹ್ಯದು ಬಾಯೊಳು ಮೊಲೆಯಿಟ್ಟು ಬೆಳೆಸಿಹ್ಯದು ಮತ್ತು ಕೈಯೊಳು ಮೊಲೆಯಿಟ್ಟು ಕೊಲುತಿಹ್ಯದು 1 ಸುತನೆಂದು ಮುದ್ದಿಟ್ಟು ಒಲುತಿಹ್ಯದು ಮತ್ತು ಪತಿಯೆಂದು ನಿಜಮತಿ ಸುಲಿತಿಹ್ಯದು ರತಿಗೊಟ್ಟು ಅತಿಮೋಹದಾಡುವುದು ನಿನ್ನ ಗತಿಗೆಡಿಸಿ ಜವಗೀಡು ಮಾಡುವುದು 2 ಕಣ್ಣುಸನ್ನೆಯ ಮಾಡಿ ಕರಿತಿಹ್ಯದು ಬಹು ಬಣ್ಣ ಮಾತಾಡಿ ಸೋಲಿಪುದು ಕುನ್ನಿಯಂತೆ ನಿನ್ನ ಮಾಡುವುದು ಬಲು ಬನ್ನಬಡಿಸಿ ಬಾಯಿ ಬಿಡಿಸುವುದು 3 ಶ್ವಾನನಂದದಿ ಕೂಗಲ್ಹಚ್ಚುವುದು ಮಾನಾಭಿಮಾನ ತೊರೆಸುವುದು ನಿಜ ಜ್ಞಾನಕೆಡಿಸಿ ಪಾಪದ್ಹಾಕುವುದು 4 ತಂದ ಪುಣ್ಯವನೆಲ್ಲ ಸೆಳೆತಿಹ್ಯದು ಬಲು ಮಂದನೆನಿಸಿ ಕುಣಿಸ್ಯಾಡುವುದು ತಂದೆ ಶ್ರೀರಾಮಪ್ರೇಮ ಕೆಡಿಸುವುದು ನಿಜಾ ನಂದ ಮುಕ್ತಿಗೆ ಕಿಡಿ ಹಾಕುವುದು 5
--------------
ರಾಮದಾಸರು